ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳುನಾಡಿನ ಒಂಭತ್ತು ಪೊಲೀಸರಿಗೆ ಮರಣದಂಡನೆ ಪ್ರಕರಣ: ಸಾಕ್ಷಿ ಹೇಳಿದ ಮಹಿಳಾ ಪೇದೆಯ ಧೈರ್ಯಕ್ಕೆ ಸಲಾಂ

Tamil Nadu custodial death case: ತಂದೆ-ಮಗನ ಲಾಕಪ್ ಡೆತ್ ಪ್ರಕರಣ ಸಂಬಂಧ ತಮಿಳುನಾಡಿನ 9 ಪೊಲೀಸ್ ಅಧಿಕಾರಿಗಳಿಗೆ ಮರಣ ದಂಡನೆ ಶಿಕ್ಷೆಯಾಗಿದೆ. ಈ ಪ್ರಕರಣ ಈ ಹಂತಕ್ಕೆ ತಲುಪುವುದು ಅಷ್ಟು ಸುಲಭವಿರಲಿಲ್ಲ. ಪೊಲೀಸ್ ಮುಖ್ಯಪೇದೆ ರೇವತಿ ಅವರ ಧೈರ್ಯ, ಸ್ಥೈರ್ಯವೇ ಈ ತೀರ್ಪು ಬರಲು ಕಾರಣವಾಗಿದೆ.

ತಮಿಳುನಾಡಿನ ಒಂಭತ್ತು ಪೊಲೀಸರಿಗೆ ಮರಣದಂಡನೆ ಪ್ರಕರಣ

ಪೊಲೀಸ್ ಮುಖ್ಯಪೇದೆ ರೇವತಿ -

Priyanka P
Priyanka P Apr 8, 2026 8:54 PM

ಚೆನ್ನೈ, ಏ.8: ತಮಿಳುನಾಡಿನ (Tamil Nadu) ಒಂಭತ್ತು ಪೊಲೀಸ್ ಸಿಬ್ಬಂದಿಯನ್ನು ಅಪರಾಧಿಗಳು ಎಂದು ಘೋಷಿಸಿ, ತಂದೆ ಮತ್ತು ಮಗ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಮೃತಪಟ್ಟ (Tamil Nadu custodial death) ಐದು ವರ್ಷಗಳ ನಂತರ ಅವರಿಗೆ ಮರಣದಂಡನೆ (Death penalty) ವಿಧಿಸಲಾಯಿತು. ಈ ತೀರ್ಪು ನ್ಯಾಯಾಂಗದ ದೃಢ ಅಂತಿಮ ನಿರ್ಧಾರವೆಂದು ಪರಿಗಣಿಸಲಾಗಿದೆ. ಆದರೆ, ಈ ಪ್ರಕರಣ ಈ ಹಂತಕ್ಕೆ ತಲುಪುವುದು ಅಷ್ಟು ಸುಲಭವಿರಲಿಲ್ಲ. ಪೊಲೀಸ್ ಮುಖ್ಯಪೇದೆ ರೇವತಿ ಅವರ ಧೈರ್ಯ, ಸ್ಥೈರ್ಯವೇ ಈ ತೀರ್ಪು ಬರಲು ಕಾರಣವಾಗಿದೆ.

2020 ರಲ್ಲಿ ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ತಮ್ಮ ಮೊಬೈಲ್ ಅಂಗಡಿಯನ್ನು ತೆರೆದಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದ ಪಿ. ಜಯರಾಜ್ ಮತ್ತು ಅವರ ಮಗ ಜೆ. ಬೆನ್ನಿಕ್ಸ್ ಮೇಲೆ ಅಧಿಕಾರಿಗಳು ದೌರ್ಜನ್ಯ ಎಸಗಿದ್ದರು. ಈ ವೇಳೆ ರೇವತಿ ಅವರು ತೂತುಕುಡಿಯ ಸಾಥನ್‌ಕುಲಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು.

ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾದ ಅವರು, ತಮ್ಮ ಸುರಕ್ಷತೆ, ಕುಟುಂಬ ಅಥವಾ ಉದ್ಯೋಗದ ಬಗ್ಗೆ ಭಯ ಇದ್ದರೂ, ಠಾಣೆಯಲ್ಲಿ ನಡೆದ ಘಟನೆಗಳನ್ನು ನ್ಯಾಯಾಧೀಶರ ಮುಂದೆ ವಿವರಿಸಿದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅಧಿಕಾರಿಗಳು ಪ್ರಭಾವಶಾಲಿಗಳಾಗಿದ್ದರೆ, ರೇವತಿ ಕಿರಿಯ ಹುದ್ದೆಯ ಪೊಲೀಸ್ ಸಿಬ್ಬಂದಿಯಾಗಿದ್ದರು. ಆದರೂ, ಅವರು ತಮ್ಮ ನಿಲುವಿನಲ್ಲಿ ಅಚಲರಾಗಿದ್ದರು.

ತುಂಬು ಗರ್ಭಿಣಿ ಸಹೋದರಿಯನ್ನು ಜೀವಂತವಾಗಿ ಸುಟ್ಟ ಸಹೋದರರಿಗೆ ಮರಣ ದಂಡನೆ; ಹೈಕೋರ್ಟ್‌ನ ಕಲಬುರಗಿ ಪೀಠದಿಂದ ಮಹತ್ವದ ತೀರ್ಪು

ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಎಸ್. ಭಾರತಿದಾಸನ್ ತನಿಖೆಗಾಗಿ ಬಂದಾಗ, ರೇವತಿ ಅವರು ಪ್ರತಿಯೊಂದನ್ನು ವಿವರಿಸಿದ್ದಾರೆ. “ಸರ್, ನಾನು ಎಲ್ಲವನ್ನೂ ಹೇಳುತ್ತೇನೆ, ಪ್ರತಿಯೊಂದು ವಿವರವನ್ನು, ಮರೆಮಾಚಲಾಗುತ್ತಿರುವ ಸತ್ಯವನ್ನು ಹೇಳುತ್ತೇನೆ. ಆದರೆ ನಾನು ಇಬ್ಬರು ಚಿಕ್ಕ ಮಕ್ಕಳ ತಾಯಿ. ನನ್ನ ಮಕ್ಕಳ ಸುರಕ್ಷತೆ ಮತ್ತು ನನ್ನ ಉದ್ಯೋಗದ ಭದ್ರತೆಯನ್ನು ನೀವು ಖಚಿತಪಡಿಸಬಹುದೇ?” ಎಂದು ಕೇಳಿದ್ದರಂತೆ.

ಆ ರಾತ್ರಿಯ ಕ್ರೌರ್ಯವನ್ನು ವಿವರಿಸಿದ ಅವರು, ಆ ಇಬ್ಬರು ಪುರುಷರನ್ನು ಹೇಗೆ ನಿರಂತರವಾಗಿ ಥಳಿಸಲಾಯಿತು ಎಂದು ಹೇಳಿದರು. ಅವರು ಗಂಭೀರ ಗಾಯಗಳಿಂದ ಬಳಲಿದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಇಬ್ಬರೂ ಕೆಲವೇ ದಿನಗಳಲ್ಲಿ ಮೃತಪಟ್ಟರು. ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು.

ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಸಿಬ್ಬಂದಿಯನ್ನು ರೇವತಿ ಯಾವುದೇ ಭಯವಿಲ್ಲದೆ ಗುರುತಿಸಿದರು. ಆಕೆಯ ಸಾಕ್ಷ್ಯದ ಪ್ರಕಾರ, ಅಧಿಕಾರಿಗಳು ಕೈಗೆ ಸಿಕ್ಕ ವಸ್ತುಗಳಿಂದ ಅವರ ಮೇಲೆ ಹಲ್ಲೆ ನಡೆಸಿದರು ಮತ್ತು ಅವರ ಖಾಸಗಿ ಭಾಗಗಳನ್ನು ತಮ್ಮ ಬೂಟುಗಳಿಂದ ತುಳಿದರು. ಮದ್ಯಪಾನ ಮಾಡಲು ಮಾತ್ರ ವಿರಾಮ ನೀಡಿದರು ಎಂದು ಹೇಳಿದ್ದಾರೆ.

Death Penalty: ಬಾಲಕಿ ಮೇಲೆ ಅತ್ಯಾಚಾರ; ಕೊಲೆ ಆರೋಪಿಗೆ ಮರಣ ದಂಡನೆ

ನಾನು ಬಂದಾಗ, ಅಧಿಕಾರಿಗಳು ತಂದೆ-ಮಗನನ್ನು ತೀವ್ರವಾಗಿ ಹೊಡೆಯುತ್ತಿದ್ದರು. ಅವರ ದೇಹದಿಂದ ರಕ್ತ ಸುರಿಯುತ್ತಿತ್ತು. ಚಿತ್ರಹಿಂಸೆ ತಾಳಲಾರದೆ ಆ ಇಬ್ಬರು ಪುರುಷರು ಅರೆ ಪ್ರಜ್ಞಾಹೀನರಾದಾಗ, ರೇವತಿ ಜಯರಾಜ್ ಏನಾದರೂ ಬೇಕಾ ಎಂದು ಕೇಳಿದರು. ನಂತರ ಅವರಿಗೆ ಕಾಫಿ ನೀಡಿದರು. ಅದನ್ನು ಅಧಿಕಾರಿಗಳು ತಕ್ಷಣವೇ ತೆಗೆದು ಬಿಸಾಕಿದರು. ಒಂದು ಹಂತದಲ್ಲಿ, ಪುರುಷರನ್ನು ಬೆತ್ತಲೆಗೊಳಿಸಿ ಅವರ ಕೈಗಳನ್ನು ಕಟ್ಟಿದಾಗ, ಆ ಕ್ರೌರ್ಯವನ್ನು ಇನ್ನು ಮುಂದೆ ನೋಡಲಾಗದೆ ರೇವತಿ ಅವರು ಕೋಣೆಯಿಂದ ಹೊರಟುಹೋದರು.

ಪ್ರಕರಣದ ಆರಂಭಿಕ ಹಂತಗಳಲ್ಲಿ ರೇವತಿಯವರ ಸಾಕ್ಷ್ಯಕ್ಕೆ ವ್ಯಾಪಕ ಬೆಂಬಲ ದೊರೆತರೂ, ಅವರು ಆತಂಕದಲ್ಲಿದ್ದರು. ಮದ್ರಾಸ್ ಹೈಕೋರ್ಟ್‌ನ ಆದೇಶದ ಮೇರೆಗೆ, ಜಿಲ್ಲಾಡಳಿತವು ಆಕೆಗೆ ರಕ್ಷಣೆ ನೀಡಿತು. ಆಕೆಯ ಮತ್ತು ಆಕೆಯ ಪತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನಿಯೋಜಿಸಿತು. 2020ರ ವಿಚಾರಣೆಯ ಸಮಯದಲ್ಲಿ, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ಆಕೆಗೆ ಕರೆ ಮಾಡಿ ವಿಚಾರಣೆಯ ಸಮಯದಲ್ಲಿ ಕೆಲವು ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿ, ಸುರಕ್ಷತೆಯನ್ನು ಖಚಿತಪಡಿಸಿತು.