ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗುರುವಿಗೆ ತಿರುಗಿ ಬಿದ್ದ ಶಿಷ್ಯ: ಮಮತಾ ಬ್ಯಾನರ್ಜಿಯನ್ನು ಸಿಎಂ ಪಟ್ಟದಿಂದ ಇಳಿಸುವರೇ ಬಿಜೆಪಿಯ ಸುವೇಂದು ಅಧಿಕಾರಿ ?

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಮತಾ ಬ್ಯಾನರ್ಜಿ ವಿರುದ್ದದ ಪ್ರಬಲ ಸ್ಪರ್ಧಿ ಸುವೇಂದು ಅಧಿಕಾರಿ. ಅವರ ಗರಡಿಯಲ್ಲೇ ಪಳಗಿರುವ ಸುವೇಂದು ಅಧಿಕಾರಿ 1998ರಲ್ಲಿ ತೃಣ ಮೂಲ ಕಾಂಗ್ರೆಸ್ ಸೇರಿದ್ದು, 2006 ರಲ್ಲಿ ಕಾಂತಿ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಬಂಗಾಳ ವಿಧಾನಸಭೆಯನ್ನು ಪ್ರವೇಶಿಸಿದ್ದರು. 2020ರಲ್ಲಿ ಪಕ್ಷ ತೊರೆದು ವಿಧಾನ ಸಭಾ ಚುನಾವಣೆಗೂ ಮೊದಲು ಬಿಜೆಪಿ ಸೇರಿದ್ದರು. ಆ ಬಳಿಕ ಪಶ್ಚಿಮ ಬಂಗಾಳದ ಚುನಾವಣಾ ಕಣವನ್ನು ಯುದ್ಧ ಭೂಮಿಯಾಗಿ ಮಾರ್ಪಡಿಸಿದ್ದಾರೆ.

ಗುರುವಿಗೆ ತಿರುಗಿ ಬಿದ್ದ ಶಿಷ್ಯನಿಗೆ ಒಲಿಯುವುದೇ ಅಧಿಕಾರ ?

ಸಂಗ್ರಹ ಚಿತ್ರ -

ಕೋಲ್ಕತ್ತಾ: ಗುರುಗಳ ವಿರುದ್ಧವೇ ಶಿಷ್ಯರು ತಿರುಗಿ ಬೀಳುವುದು ರಾಜಕೀಯದಲ್ಲಿ ಹೊಸದೇನಲ್ಲ. ಮಹಾರಾಷ್ಟ್ರದ ಚುನಾವಣಾ ಕಣ ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇಲ್ಲಿ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರು ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರನ್ನು ಎದುರಿಸಿದ್ದರು. ಇದೀಗ ಇಂತಹ ಒಂದು ಸನ್ನಿವೇಶ ಪಶ್ಚಿಮ ಬಂಗಾಳದಲ್ಲಿ (west bengal election) ಎದುರಾಗಿದೆ. ಮಮತಾ ಬ್ಯಾನರ್ಜಿ ( Mamata Banerjee) ವಿರುದ್ಧ ಅವರ ಶಿಷ್ಯ ಸುವೇಂದು ಅಧಿಕಾರಿ (Suvendu Adhikari) ಕಣದಲ್ಲಿದ್ದು ಚುನಾವಣಾ (assembly, election 2026) ಕಣವನ್ನು ರಣಾಂಗಣವಾಗಿ ಮಾರ್ಪಡಿಸಿದ್ದಾರೆ.

ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್ ಅನ್ನು ರಚಿಸುವ ಮೊದಲು ಕಾಂಗ್ರೆಸ್ ನಲ್ಲಿ ಉನ್ನತ ಶ್ರೇಣಿಯಲ್ಲಿ ಗುರುತಿಸಿಕೊಂಡಿದ್ದರು. ಪ್ರಬಲ ರಾಜಕೀಯ ಕುಟುಂಬದಿಂದ ಬಂದಿದ್ದ ಸುವೇಂದು ಅಧಿಕಾರಿ ಅವರ ತಂದೆ ಶಿಶಿರ್ ಅಧಿಕಾರಿ ಕಾಂಗ್ರೆಸ್‌ನ ಪ್ರಮುಖ ರಾಜಕಾರಣಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ಇವರ ಕುಟುಂಬವನ್ನು ಪುರ್ಬಾ ಮೇದಿನಿಪುರ (ಪೂರ್ವ ಮಿಡ್ನಾಪುರ) ಪ್ರದೇಶದ ರಾಜಕೀಯ ದೊರೆಗಳು ಎಂದೇ ಕರೆಯಲಾಗುತ್ತದೆ.

ಬ್ಯಾಲೆಟ್ ಪೆಟ್ಟಿಗೆ ತೆರೆಯಲಾಗಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಪ್ರತಿಭಟನೆ; "ಇದೆಲ್ಲ ಬರಿ ವದಂತಿ" ಎಂದ ಬಿಜೆಪಿ

ತಂದೆಯ ಹಿಂದೆಯೇ ರಾಜಕೀಯ ಪ್ರವೇಶಿಸಿದ ಸುವೇಂದು ಅಧಿಕಾರಿ ಮೊದಲು ಕಾಂಗ್ರೆಸ್‌ ಸೇರಿ ಪೂರ್ವ ಮಿಡ್ನಾಪುರದ ಕಾಂತಿ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದರು. ಬಳಿಕ ಅವರು 1998ರಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಸೇರಿ 2006ರಲ್ಲಿ ಕಾಂತಿ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಗೊಂಡರು.

ನಂದಿಗ್ರಾಮ್ ಆಂದೋಲನ, ಹೂಗ್ಲಿ ಜಿಲ್ಲೆಯ ಸಿಂಗೂರ್‌ನಲ್ಲಿರುವ ಟಾಟಾ ಮೋಟಾರ್ಸ್ ಸ್ಥಾವರದ ವಿರುದ್ಧದ ಪ್ರತಿಭಟನೆಯಿಂದ ಗುರುತಿಸಿಕೊಂಡ ಅಧಿಕಾರಿಯವರು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಪಡೆದುಕೊಂಡರು. 2009 ಮತ್ತು 2014 ರಲ್ಲಿ ತಮ್ಲುಕ್ ಕ್ಷೇತ್ರದಿಂದ ಗೆದ್ದು ಮಮತಾ ಬ್ಯಾನರ್ಜಿ ಅವರ ವಿಶ್ವಾಸಾರ್ಹ ಬಂಟರಾಗಿ ಗುರುತಿಸಿಕೊಂಡರು.

2016ರಲ್ಲಿ ಅವರನ್ನು ಬಂಗಾಳಕ್ಕೆ ಮರಳಿ ಕರೆಸಿಕೊಂಡ ಮಮತಾ ಬ್ಯಾನರ್ಜಿ ಸಂಚಿವ ಸಂಪುಟಕ್ಕೆ ಸೇರಿಸಿಕೊಂಡು ಸಾರಿಗೆ ಖಾತೆಯ ಜವಾಬ್ದಾರಿಯನ್ನು ನೀಡಿದರು. ಅನಂತರ ಅವರಿಗೆ ಇತರ ಸಚಿವಾಲಯಗಳ ಜವಾಬ್ದಾರಿಯನ್ನು ಕೂಡ ನೀಡಲಾಯಿತು. ಮಮತಾ ಬ್ಯಾನರ್ಜಿ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲ್ಪಟ್ಟ ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪಕ್ಷದೊಳಗೆ ಬೆಳೆದಂತೆ ಕಡೆಗಣಿಸಲ್ಪಡುವುದನ್ನು ಅರಿತರು. ಇದರ ಬಳಿಕ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೂ ಭಿನ್ನಾಭಿಪ್ರಾಯ ಬಹಿರಂಗವಾಗುತ್ತಿದ್ದಂತೆ ಅವರನ್ನು ಸಮಾಧಾನಪಡಿಸಲು ತೃಣಮೂಲ ಕಾಂಗ್ರೆಸ್ ಹಲವಾರು ಪ್ರಯತ್ನಗಳನ್ನು ಮಾಡಿತು. ಆದರೆ ಅದು ಯಾವುದು ಕೂಡ ಫಲ ನೀಡಲಿಲ್ಲ. 2020ರಲ್ಲಿ ಸಾರಿಗೆ ಮತ್ತು ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರು ಬಳಿಕ ಶೀಘ್ರದಲ್ಲೇ ಪಕ್ಷ ತೊರೆದು ವಿಧಾನಸಭಾ ಚುನಾವಣೆಗೂ ಮೊದಲೇ ಬಿಜೆಪಿ ಸೇರಿದರು.

2021 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ಇಲ್ಲಿ ಅಧಿಕಾರಿಯವರು ಮಮತಾ ಬ್ಯಾನರ್ಜಿಯವರನ್ನೇ ಸೋಲಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 294 ಕ್ಷೇತ್ರಗಳಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲದ 215 ಸ್ಥಾನಗಳನ್ನು ಗಳಿಸಿತ್ತು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಭರ್ಜರಿ ಟ್ವಿಸ್ಟ್‌: 2 ಕ್ಷೇತ್ರಗಳ 15 ಬೂತ್‌ಗಳಲ್ಲಿ ನಾಳೆ ಮರು ಮತದಾನ

ಆದ್ದರಿಂದಲೇ ಈ ಬಾರಿ ಚುನಾವಣೆಯಲ್ಲಿ ಅವರನ್ನು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನೆಂದೇ ಪರಿಗಣಿಸಲಾಗಿದೆ. ಈ ವರ್ಷ ಬಂಗಾಳದಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.