ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

E jagruthi Forum: ಗ್ರಾಹಕರ ಹಕ್ಕು ರಕ್ಷಣೆಯಲ್ಲಿ ಬದ್ಧತೆ ಪ್ರದರ್ಶಿಸುತ್ತಿದೆ ಇ-ಜಾಗೃತಿ ವೇದಿಕೆ

Pralhad Joshi: ಡಿಜಿಟಲ್‌ ವಂಚನೆ-ಡಿಜಿಟಲ್‌ ಆರೆಸ್ಟ್‌ನಂತಹ ಆತಂಕದ ಈ ದಿನಮಾನದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್‌ ಜೋಶಿ ಅವರ ನಾಯಕತ್ವ-ಮಾರ್ಗದರ್ಶನದಂತೆ ರೂಪುಗೊಂಡಿರುವ ʼಇ-ಜಾಗೃತಿ ವೇದಿಕೆʼ ಗ್ರಾಹಕರ ಹಕ್ಕು ರಕ್ಷಣೆಯಲ್ಲಿ ಬದ್ಧತೆ ಪ್ರದರ್ಶಿಸುತ್ತಿದೆ. ಅನಿವಾಸಿ ಭಾರತೀಯರಿಗೂ ನ್ಯಾಯ-ಪರಿಹಾರ ಕಲ್ಪಿಸುವಲ್ಲಿ ದಕ್ಷತೆ ಮೆರೆದಿದೆ. NRI ಗಳಿಗೆ ಭಾರತಕ್ಕೆ ಪ್ರಯಾಣಿಸದೆಯೇ ವಿಮಾ ಹಕ್ಕುಗಳು ಮತ್ತು ಉತ್ಪನ್ನ ದೋಷಗಳಂತಹ ವಿವಾದಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸುತ್ತಿದೆ ಇ-ಜಾಗೃತಿ ವೇದಿಕೆ. ಈ ಕುರಿತ ವಿವರ ಇಲ್ಲಿದೆ.

ಗ್ರಾಹಕರ ಹಕ್ಕು ರಕ್ಷಣೆಯಲ್ಲಿ ಬದ್ಧತೆ ಪ್ರದರ್ಶಿಸುತ್ತಿದೆ ಇ-ಜಾಗೃತಿ ವೇದಿಕೆ

ಸಾಂದರ್ಭಿಕ ಚಿತ್ರ -

Profile
Siddalinga Swamy Nov 18, 2025 9:49 PM

ನವದೆಹಲಿ, ನ.18: ಭಾರತದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಥಾಪಿಸಿದ ʼಇ-ಜಾಗೃತಿ ವೇದಿಕೆ ʼಪಾರದರ್ಶಕತೆ ಮತ್ತು ದಕ್ಷತೆಗೆ ಇದೀಗ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬ್ಯಾಂಡ್‌ ಬಾರಿಸುತ್ತಿದೆ. ಅನಿವಾಸಿ ಭಾರತೀಯ ಗ್ರಾಹಕರ ಹಿತರಕ್ಷಣೆಯಲ್ಲೂ ಕ್ರಾಂತಿಗೆ ನಾಂದಿ ಹಾಡಿದೆ. ಗ್ರಾಹಕರ ಹಕ್ಕುಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡುತ್ತಿರುವ ಇದು ʼಡಿಜಿಟಲ್ ಇಂಡಿಯಾʼ ದ (Digital India) ಒಂದು ಸರ್ವಶ್ರೇಷ್ಠ ಪರಿಹಾರ ವ್ಯವಸ್ಥೆಯಾಗಿ ಹೊರಹೊಮ್ಮಿದೆ.

ಡಿಜಿಟಲ್‌ ವಂಚನೆ-ಡಿಜಿಟಲ್‌ ಆರೆಸ್ಟ್‌ನಂತಹ ಆತಂಕದ ಈ ದಿನಮಾನದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರ ನಾಯಕತ್ವ-ಮಾರ್ಗದರ್ಶನದಂತೆ ರೂಪುಗೊಂಡಿರುವ ʼಇ-ಜಾಗೃತಿ ವೇದಿಕೆʼ ಗ್ರಾಹಕರ ಹಕ್ಕು ರಕ್ಷಣೆಯಲ್ಲಿ ಬದ್ಧತೆ ಪ್ರದರ್ಶಿಸುತ್ತಿದೆ. ಅನಿವಾಸಿ ಭಾರತೀಯರಿಗೂ ನ್ಯಾಯ-ಪರಿಹಾರ ಕಲ್ಪಿಸುವಲ್ಲಿ ದಕ್ಷತೆ ಮೆರೆದಿದೆ. NRI ಗಳಿಗೆ ಭಾರತಕ್ಕೆ ಪ್ರಯಾಣಿಸದೆಯೇ ವಿಮಾ ಹಕ್ಕುಗಳು ಮತ್ತು ಉತ್ಪನ್ನ ದೋಷಗಳಂತಹ ವಿವಾದಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸುತ್ತಿದೆ ಇ-ಜಾಗೃತಿ ವೇದಿಕೆ.

ಡಿಜಿಟಲ್‌ ಇಂಡಿಯಾದಲ್ಲಿ 2025ರ ಜನವರಿ 1ರಂದು ಡಿಜಿಟಲ್‌ ರೂಪ ತಾಳಿದ ʼಇ-ಜಾಗೃತಿ ವೇದಿಕೆʼ ಗ್ರಾಹಕರ ಕುಂದುಕೊರತೆಗೆ ಸ್ಪಂದಿಸಿ ಅತ್ಯಂತ ಪಾರದರ್ಶಕ ಮತ್ತು ಅಷ್ಟೇ ತ್ವರಿತವಾಗಿ ಪರಿಹಾರ ಕಲ್ಪಿಸುತ್ತಿದೆ. ಹಲವು ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೂ ʼಇ-ಜಾಗೃತಿ ವೇದಿಕೆʼ ಮೂಲಕ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳುತ್ತಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ.

E jagruthi Forum

ಸಚಿವ ಪ್ರಲ್ಹಾದ್‌ ಜೋಶಿ ಅವರ ಒತ್ತಾಶಯದಂತೆ ʼಇ-ಜಾಗೃತಿ ವೇದಿಕೆʼ ಡಿಜಿಟಲ್‌ ಸ್ಪರ್ಶ ಪಡೆಯುತ್ತಿದ್ದಂತೆ ಹತ್ತೇ ತಿಂಗಳಲ್ಲಿ ಸರಿಸುಮಾರು 1388 ಅನಿವಾಸಿ ಭಾರತೀಯರು ಈ ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದಾರೆ. ದೇಶ-ವಿದೇಶಗಳಿಂದ ಒಟ್ಟು 2.75 ಲಕ್ಷಕ್ಕೂ ಹೆಚ್ಚು ಬಳಕೆದಾರರ ನೋಂದಣಿಯಾಗಿದೆ. ಜಾಗತಿಕ ಪ್ರವೇಶ ಮತ್ತು ತಡೆರಹಿತವಾಗಿ ಗ್ರಾಹಕರ ಕುಂದುಕೊರತೆಗಳಿಗೆ ಸಕ್ರಿಯವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸಿದೆ.

ʼಇ-ಜಾಗೃತಿ ವೇದಿಕೆʼ ಇದೀಗ AI-ಚಾಲಿತವೂ ಆಗಿದ್ದು, ಬಹುಭಾಷಾ ಪೋರ್ಟಲ್‌ ಆಗಿ ಪರಿವರ್ತನೆಗೊಂಡಿದೆ. ಇಂಟರ್‌ಫೇಸ್ ಗ್ರಾಹಕರಿಗೆ ಫೈಲಿಂಗ್, ವರ್ಚುವಲ್ ವಿಚಾರಣೆ ಮತ್ತು ನೈಜ-ಸಮಯದ ಟ್ರ್ಯಾಕಿಂಗ್ ಅನ್ನು ಸುಲಭವಾಗಿಸಿದೆ. ಈ ಮೂಲಕ ವಿದೇಶದಿಂದಲೂ ಅನಿವಾಸಿ ಭಾರತೀಯ ಗ್ರಾಹಕರ ಹಕ್ಕುಗಳನ್ನು ಪ್ರತಿಪಾದಿಸಲು ಅನುವು ಮಾಡಿಕೊಟ್ಟಿದೆ. ಸರಳ OTP-ಆಧಾರಿತ ನೋಂದಣಿಯೊಂದಿಗೆ NRI ಗಳೂ ದೂರು ಸಲ್ಲಿಕೆ, ಡಿಜಿಟಲ್-ಆಫ್‌ಲೈನ್ ಶುಲ್ಕ ಪಾವತಿ, ವರ್ಚುವಲ್ ವಿಚಾರಣೆಗಳಲ್ಲಿ ಭಾಗವಹಿಸುವಿಕೆ, ಆನ್‌ಲೈನ್‌ನಲ್ಲೇ ದಾಖಲೆಗಳ ವಿನಿಮಯ ಮತ್ತು ನೈಜ ಸಮಯದಲ್ಲಿ ಪ್ರಕರಣಗಳ ಟ್ರ್ಯಾಕ್‌ಗೆ ಅವಕಾಶವಾಗಿದೆ.

ಇ-ಜಾಗೃತಿ ವೇದಿಕೆ ಕಾರ್ಯ ಕ್ಷಮತೆ

2025ರ ನವೆಂಬರ್ 13ರ ವೇಳೆಗೆ ಏಕೀಕೃತ ಪೋರ್ಟಲ್ 1,30,550 ಪ್ರಕರಣಗಳ ದಾಖಲಾತಿ ಸುಗಮಗೊಳಿಸಿದ್ದು, 1,27,058 ಪ್ರಕರಣಗಳನ್ನು ಪರಿಹರಿಸಿ ದೇಶಾದ್ಯಂತ ಗ್ರಾಹಕ ರಕ್ಷಣೆಯನ್ನು ಬಲಪಡಿಸುವಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದೆ. ಹಿರಿಯ ನಾಗರಿಕರು ಮತ್ತು ವಿಕಲಚೇತನ ಗ್ರಾಹಕರಿಗೂ ಸರಳ ಸೇವೆ ಸಿಕ್ಕಿದೆ. 1388 ಅನಿವಾಸಿ ಭಾರತೀಯರ ನೋಂದಣಿ ಹಾಗೂ 2.75 ಲಕ್ಷಕ್ಕೂ ಹೆಚ್ಚು ಬಳಕೆದಾರರು ಇ-ಜಾಗೃತಿಯ ಹಿರಿಮೆ ಹೆಚ್ಚಿಸಿದ್ದಲ್ಲದೇ, ನಾಗರಿಕ-ಕೇಂದ್ರಿತ ಮತ್ತು ತಂತ್ರಜ್ಞಾನ-ಚಾಲಿತ ಆಡಳಿತದಲ್ಲಿ ಕೇಂದ್ರ ಸರ್ಕಾರದ ಬದ್ಧತೆ ಪ್ರತಿಬಿಂಬಿಸಿದೆ.

ಅನಿವಾಸಿ ಭಾರತೀಯರಿಗೆ ಸ್ಪಂದನೆ

ಪ್ರಸ್ತುತ 466 NRI ಗಳ ದೂರು ಸಲ್ಲಿಸಿದ್ದು, ಯುನೈಟೆಡ್ ಸ್ಟೇಟ್ಸ್ 146, ಯುನೈಟೆಡ್ ಕಿಂಗ್‌ಡಮ್ 52, ಯುಎಇ 47, ಕೆನಡಾ 39, ಆಸ್ಟ್ರೇಲಿಯಾ 26 ಮತ್ತು ಜರ್ಮನಿಯಲ್ಲಿರುವ 18 ಅನಿವಾಸಿ ಭಾರತೀಯರು ಇ-ಜಾಗೃತಿ ವೇದಿಕೆಯಲ್ಲಿ ಪರಿಹಾರ ಕೋರಿದ್ದಾರೆ. ದೇಶಾದ್ಯಂತ ಒಟ್ಟು 1,30,550 ದೂರುಗಳನ್ನು ದಾಖಲಿಸಿದ್ದು, ಗುಜರಾತ್-14,758, ಉತ್ತರ ಪ್ರದೇಶ-14,050 ಮತ್ತು ಮಹಾರಾಷ್ಟ್ರದಿಂದ 12,484 ಪ್ರಕರಣಗಳು ಸ್ವೀಕಾರವಾಗಿವೆ.

ʼಇ-ಜಾಗೃತಿ ವೇದಿಕೆʼ ಈಗಾಗಲೇ 2 ಲಕ್ಷಕ್ಕೂ ಹೆಚ್ಚು SMS ಎಚ್ಚರಿಕೆಗಳು ಮತ್ತು 12 ಲಕ್ಷಕ್ಕೂ ಅಧಿಕ ಇಮೇಲ್ ಅಧಿಸೂಚನೆಗಳನ್ನು ರವಾನಿಸಿದೆ. 2025ರಲ್ಲಿ ಪ್ರಕರಣಗಳ ವಿಲೇವಾರಿ ದಕ್ಷತೆಯಲ್ಲಿ ಸ್ಪಷ್ಟ ಏರಿಕೆ ದಾಖಲಿಸಿದೆ. ಜುಲೈ-ಆಗಸ್ಟ್ ಅಲ್ಲಿ 27,080 ಪ್ರಕರಣಗಳು ದಾಖಲಾಗಿದ್ದರೆ 27,545 ಪ್ರಕರಣಗಳನ್ನು ವಿಲೇವಾರಿ ಆಗಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ 21,592 ದಾಖಲಾದರೆ, 24,504 ಪ್ರಕರಣಗಳ ವಿಲೇವಾರಿಯಾಗಿದೆ. ಇದು 2024ಕ್ಕಿಂತ ಹೆಚ್ಚಿನ ಕಾರ್ಯದಕ್ಷತೆ ಮತ್ತು ತ್ವರಿತ ವೇಗಕ್ಕೆ ನಿದರ್ಶನವಾಗಿದೆ.

ಅನಿವಾಸಿ ಭಾರತೀಯರು ಮತ್ತು ನಾಗರಿಕರು ಯಾವುದೇ ಸ್ಥಳದಿಂದ ಸುರಕ್ಷಿತವಾಗಿ ಪ್ರಕರಣಗಳನ್ನು ಸಲ್ಲಿಸಬಹುದಾದ್ದರಿಂದ ಇ-ಜಾಗೃತಿ ವೇದಿಕೆಯಲ್ಲಿ ಸ್ವಯಂ ಚಾಲಿತ (AI) ವ್ಯವಸ್ಥೆ ಕಾರ್ಯದಕ್ಷತೆ ಹೆಚ್ಚಿಸಿದೆ. SMS/ಇಮೇಲ್ ಮೂಲಕ ನೈಜ-ಸಮಯದ ನವೀಕರಣ ಮತ್ತು ವರ್ಚುವಲ್ ವಿಚಾರಣೆಗಳಿಂದಾಗಿ ಇತ್ತೀಚೆಗೆ 10 ರಾಜ್ಯಗಳು ಮತ್ತು NCDRC ಯಲ್ಲಿ ಶೇ.100ಕ್ಕೂ ಅಧಿಕ ಮಟ್ಟದಲ್ಲಿ ಪ್ರಕರಣಗಳ ವಿಲೇವಾರಿ ಆಗಿದೆ. ಇ-ವೇದಿಕೆ ಡ್ಯಾಶ್‌ಬೋರ್ಡ್‌ಗಳು ವಕೀಲರಿಗೆ ಪ್ರಕರಣಗಳನ್ನು ಪತ್ತೆಹಚ್ಚಲು, ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಎಚ್ಚರಿಕೆಗಳನ್ನು ಸ್ವೀಕರಿಸಲು ಪರಿಕರಗಳನ್ನು ಒದಗಿಸುತ್ತವೆ.

ಈ ಸುದ್ದಿಯನ್ನೂ ಓದಿ | Pralhad Joshi: ಹಡಗು ನಿರ್ಮಾಣದ ಟಾಪ್‌ 10 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿದೆ: ಪ್ರಲ್ಹಾದ್‌ ಜೋಶಿ ವಿಶ್ವಾಸ

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್‌ ಜೋಶಿ ಅವರ ನೇತೃತ್ವದಲ್ಲಿ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲಾ ಗ್ರಾಹಕರ ಸಬಲೀಕರಣಕ್ಕೆ ಒತ್ತು ನೀಡುತ್ತಿದ್ದು, ಕುಂದುಕೊರತೆ ಪರಿಹಾರಕ್ಕಾಗಿ ಇ-ಜಾಗೃತಿ ವೇದಿಕೆ ಅಭೂತಪೂರ್ವ ಕೊಡುಗೆ ನೀಡುತ್ತಿದೆ. ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ʼಈ ಪೋರ್ಟಲ್ʼ ಡಿಜಿಟಲ್ ಭಾರತದತ್ತ ಮಹತ್ವದ ಹೆಜ್ಜೆಯಿರಿಸಿದೆ.