Lion Attack: ಮನೆಯೊಳಗೆ ನುಗ್ಗಿ ಸ್ನೇಹಿತೆಯ ಎದುರಲ್ಲೇ 14 ವರ್ಷದ ಬಾಲಕಿಯನ್ನು ಕೊಂದ ಸಿಂಹ
14 ವರ್ಷದ ಬಾಲಕಿಯೊಬ್ಬಳು ಸಿಂಹ ದಾಳಿಗೆ ಸಿಲುಕಿ ತನ್ನ ಸ್ನೇಹಿತೆಯ ಕಣ್ಮುಂದೆಯೇ ಮೃತಪಟ್ಟಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ. ಸಿಂಹ ಮನೆಯ ತಾತ್ಕಾಲಿಕ ತಡೆಗೋಡೆಯನ್ನೇ ಹಾರಿ ಮನೆಗೆ ನುಗ್ಗಿದಂತೆ ಶಂಕಿಸಲಾಗಿದೆ. ಬಾಲಕಿ ಈಗಾಗಲೇ ಮೃತಪಟ್ಟಿದ್ದು, ಹೆಸರು ಬಹಿರಂಗಪಡಿಸಲ್ಪಟ್ಟಿಲ್ಲ.ಬಾಲಕಿ ಜೊತೆ ಇದ್ದ ಗೆಳತಿ ನೆರವಿಗೆ ಕೂಗಿದರೂ ಯಾವುದೇ ಫಲಕಾರಿಯಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ, ರಕ್ತದ ಗುರುತು ಗಳಿದ್ದು ತಲೆ ಭಾಗದಲ್ಲಿ ಗಾಯಗಳಿದ್ದವು.

14-year-old girl was mauled to death by a lion in Kenya

ಕೀನ್ಯಾ: 14 ವರ್ಷದ ಬಾಲಕಿಯೊಬ್ಬಳು ಸಿಂಹ ದಾಳಿಗೆ (Lion Attack) ಸಿಲುಕಿ ತನ್ನ ಸ್ನೇಹಿತೆಯ ಕಣ್ಮುಂದೆಯೇ ಮೃತ ಪಟ್ಟಿರುವ ಘಟನೆ ಕೀನ್ಯಾದ ನೈರೋಬಿಯಲ್ಲಿ ನಡೆದಿದೆ. ಈ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು, ಯುವತಿ ಮತ್ತು ಆಕೆಯ ಗೆಳತಿ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಸಿಂಹ ಮನೆಗೆ ನುಗ್ಗಿ ದಾಳಿ ನಡೆಸಿದೆ. ಕೀನ್ಯಾದ ನೈರೋಬಿ ರಾಷ್ಟ್ರೀಯ ಉದ್ಯಾನ ವನದಿಂದ ಸಿಂಹ ತಪ್ಪಿಸಿಕೊಂಡು ಬಂದಿದೆ. ಉದ್ಯಾನವನದ ಗಡಿ ಪ್ರದೇಶದಲ್ಲಿರುವ ಬಾಲಕಿ ಮನೆಯ ಆವರಣದಲ್ಲಿ ಆಕೆಯ ಮೇಲೆ ದಾಳಿ ಮಾಡಿದೆ .ನೈರೋಬಿ ಪಾರ್ಕ್‌ನಿಂದ ತಪ್ಪಿಸಿಕೊಂಡ ಸಿಂಹ ಮನೆಯ ತಾತ್ಕಾಲಿಕ ತಡೆಗೋಡೆಯನ್ನೇ ಹಾರಿ ಮನೆಗೆ ನುಗ್ಗಿದೆ ಎಂದು ಶಂಕಿಸಲಾಗಿದೆ.
ಬಾಲಕಿ ಮೃತಪಟ್ಟಿದ್ದು, ಹೆಸರು ಬಹಿರಂಗಪಡಿಸಲಾಗಿಲ್ಲ. ಬಾಲಕಿ ಜೊತೆ ಇದ್ದ ಗೆಳತಿ ನೆರವಿಗೆ ಕೂಗಿದರೂ ಯಾವುದೇ ಫಲಕಾರಿಯಾಗಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ, ರಕ್ತದ ಗುರುತು ಗಳಿದ್ದು ತಲೆ ಭಾಗದಲ್ಲಿ ಗಾಯಗಳಿದ್ದವು.ಇನ್ನೂ ಕೀನ್ಯಾ ವನ್ಯಜೀವಿ ಅಧಿಕಾರಿ ದಾಳಿ ನಡೆದ ಸ್ಥಳಕ್ಕೆ ಧಾವಿಸಿದ್ದು, ಬಾಲಕಿ ಇದ್ದ ಮನೆ ಸಿಂಹದ ಗುಹೆಯ ಸಮೀಪದಲ್ಲೇ ಇದೆ ಎಂದು ತಿಳಿಸಿದ್ದಾರೆ. ಮಗುವನ್ನು ಪತ್ತೆಹಚ್ಚಲು ಕೆಡಬ್ಲ್ಯೂಎಸ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಮನೆಯ ಪಕ್ಕದ ನದಿಯ ಬಳಿ ಬಾಲಕಿ ಶವ ಪತ್ತೆಯಾಗಿದೆ.
ಇದನ್ನು ಓದಿ: Viral News: ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ 16 ವರ್ಷದ ಬಾಲಕ
ಮೃಗಾಲಯವು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದ್ದು, ಸಿಂಹಗಳು, ಚಿರತೆ ಮುಂತಾದ ಪ್ರಾಣಿಗಳು ಹೆಚ್ಚಾಗಿ ಈ ಪ್ರದೇಶಕ್ಕೆ ಭೇಟಿ ನೀಡುತ್ತವೆ. ಈಗಾಗಲೇ ಪ್ರಾಣಿಗಳು ನಗರಕ್ಕೆ ಪ್ರವೇಶಿಸದಂತೆ ತಡೆಯಲು ಉದ್ಯಾನದ ಸುತ್ತಲೂ ಬೇಲಿ ನಿರ್ಮಿಸಲಾಗಿದೆ. ಆದರೆ ಪ್ರಾಣಿಗಳು ಬಂದು ಹೋಗಲು ಅವಕಾಶ ನೀಡಲು ದಕ್ಷಿಣ ಭಾಗದಲ್ಲಿ ಬೇಲಿ ನಿರ್ಮಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೀನ್ಯಾದಲ್ಲಿ ಸಿಂಹಗಳು ದಾಳಿ ಮಾಡಿರುವ ಘಟನೆ ಇದೇ ಮೊದಲೇನಲ್ಲ. ಕಳೆದ ವರ್ಷವು ಒಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿ, ಆತನ ಎದೆಗೆ ಗಾಯಗೊಳಿಸಿದ್ದಾಗಿ ತಿಳಿದು ಬಂದಿತ್ತು. ನಂತರ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಪ್ರಾಣ ಕಳೆದು ಕೊಂಡಿದ್ದ. ಇತ್ತೀಚಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರು ಭಯದ ವಾತಾವರಣದಲ್ಲೇ ಬದುಕುವಂತಾಗಿದೆ.