ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ex-Army Soldier Killed: ಲವ್ವರ್‌ ಜೊತೆಗೂಡಿ ಪತ್ನಿಯಿಂದಲೇ ಮಾಜಿ ಸೈನಿಕನ ಬರ್ಬರ ಹತ್ಯೆ; ಕೊಲೆಗೈದು ಆರು ಪೀಸ್‌ ಮಾಡಿದ ನರಹಂತಕಿ!

UP Murder Case: ಉತ್ತರ ಪ್ರದೇಶದದಲ್ಲಿ ನರಹಂತಕಿ ಪತ್ನಿಯ ಅಟ್ಟಹಾಸಕ್ಕೆ ಮಾಜಿ ಯೋಧನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಮಾಜಿ ಯೋಧನನ್ನು ಬರ್ಬರವಾಗಿ ಕೊಲೆಗೈದು ಆತನ ಮೃತದೇಹವನ್ನು 6 ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪತ್ನಿ ಸೇರಿದಂತೆ ಆರು ಜನ ಅರೆಸ್ಟ್‌ ಆಗಿದ್ದಾರೆ.

ಮಾಜಿ ಸೈನಿಕನನ್ನು ಕೊಂದು ಪೀಸ್‌ ಪೀಸ್‌ ಮಾಡಿದ ಪತ್ನಿ

Profile Rakshita Karkera May 16, 2025 1:22 PM

ಲಖನೌ: ಬರ್ಬರವಾಗಿ ಕೊಲೆಗೈದು ಮೃತದೇಹವನ್ನು ಪೀಸ್‌ ಪೀಸ್‌ ಮಾಡಿ ಎಸೆಯುವ ಪ್ರಕರಣಗಳು ಆಗಾಗ ಕೇಳಿಬರುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಕೇಸ್‌ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಇಲ್ಲಿನ ಬಾಲಿಯಾ ಜಿಲ್ಲೆಯಲ್ಲಿ ಈ ಭೀಕರ ಘಟನೆ(Ex-Army Soldier Killed) ನಡೆದಿದ್ದು, ಪತ್ನಿಯಿಂದಲೇ ಮಾಜಿ ಸೈನಿಕನೋರ್ವ ಬರ್ಬರವಾಗಿ ಕೊಲೆಯಾಗಿದ್ದಾನೆ. ಪ್ರಿಯಕರನ ಜೊತೆಗೂಡಿ ಪತ್ನಿಯೇ ಪತಿಯ ಕಥೆಯನ್ನು ಮುಗಿಸಿ ನಂತರ ಆತನ ದೇಹವನ್ನು ಆರು ತುಂಡುಗಳನ್ನಾಗಿ ಕತ್ತರಿಸಿ ಎಸೆದಿದ್ದಾರೆ. ಮೃತ ಮಾಜಿ ಸೈನಿಕನನ್ನು ದೇವೇಂದ್ರ ಕುಮಾರ್‌ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಮಾಯಾದೇವಿ ಮತ್ತು ಆಕೆಯ ಪ್ರಿಯಕರ ಅನಿಲ್‌ ಯಾವ್‌ ಹಂತಕರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾದೇವಿ, ಅನಿಲ್‌ ಕುಮಾರ್‌ ಹಾಗೂ ಇವರ ಈ ಕೃತ್ಯಕ್ಕೆ ಸಹಕರಿಸಿದ ಸತೀಶ್‌ ಯಾದವ್‌ ಮತ್ತು ಮಿಥಿಲೇಶ್‌ನನ್ನು ಅರೆಸ್ಟ್‌ ಮಾಡಲಾಗಿದೆ.

ಪೋಲಿಸರ ಮಾಹಿತಿ ಪ್ರಕಾರ ಮೇ 10 ರಂದು ಖರೀದ್‌ ಎನ್ನುವ ಗ್ರಾಮದ ಬಳಿ ಸೈನಿಕರ ಶವದ ಕೈ ಕಾಲುಗಳು, ಎರಡು ದಿನಗಳ ನಂತರ ಅಲ್ಲೇ ಪಕ್ಕದಲ್ಲಿದ್ದ ಬಾವಿಯಲ್ಲಿ ಮುಂಡ (ತಲೆಯ ಕೆಳಗಿನ ಭಾಗ) ವನ್ನು ಹೊರತೆಗೆಯಲಾಗಿದೆ ಇನ್ನೂ ಮುಂದುವರೆದು ಇನ್ನು ಶವದ ತಲೆಯ ಭಾಗ ಸಿಕ್ಕಿಲ್ಲ. ಹೀಗಾಗಿ ಘಘಾರ ನದಿಯ ಸಮೀಪ ಹುಡುಕಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಹಂತಕಿ ಮಾಯಾದೇವಿ ಮೇ 10ರಂದು ತನ್ನ ಪತಿ ಮಗಳನ್ನು ಕರೆದುಕೊಂಡು ಬರಲು ಬಿಹಾರದ ಬಕ್ಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದವರು ಹಿಂದಿರುಗಿಲ್ಲ. ನಂತರ ಕರೆ ಮಾಡಿದರೆ ಪೋನ್‌ ಸ್ವಿಚ್‌ ಆಫ್‌ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ದೂರನ್ನು ದಾಖಲಿಸಿ ಪ್ರಕರಣದ ಬೆನ್ನತ್ತಿದ ಪೋಲಿಸರಿಗೆ ಶಾಕ್‌ ಕಾದಿತ್ತು. ದೇವೇಂದ್ರ ಕುಮಾರ್‌ ಅವರ ದೇಹದ ಒಂದೊಂದೆ ಭಾಗ ಸಿಗಲಾರಂಭಿಸಿತು. ಅನುಮಾನದ ಮೇರೆ ಮಾಯಾದೇವಿಯ ಫೋನ್‌ ಚೆಕ್‌ ಮಾಡಿದಾಗ ಪ್ರಕರಣ ಬಯಲಾಗಿತ್ತು. ತಕ್ಷಣ ಆಕೆ ಮತ್ತು ಆಕೆಯ ಪ್ರಿಯತಮ ಅನಿಲ್‌ ಯಾದವ್‌ರವರನ್ನು ವಶಪಡಿಸಿಕೊಳ್ಳಲಾಯಿತು.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ನಂತರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಆರೋಪಿಗಳು ದೇವೇಂದ್ರರವರ ತಲೆಯನ್ನು ಘಾಘರಾ ನದಿಯಲ್ಲಿ ಎಸೆದಿರುವುದಾಗಿ ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೋಲಿಸರ ಎನ್‌ಕೌಂಟರ್‌ ಪಕ್ರಿಯೆಯಲ್ಲಿ ಅನಿಲ್‌ ಯಾದವ್‌ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಅನಿಲ್ ಕಾಲಿಗೆ ಗುಂಡು ಹಾರಿಸಲಾಯಿತು. ಪ್ರಕರಣದ ತನಿಖೆ ಮುಂದುವರಿದಿದ್ದು, ನಾಲ್ವರು ಆರೋಪಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎನ್ನಲಾಗದೆ.