ಕಪಿಲ್ ಶರ್ಮಾ ಕೆಫೆಯಲ್ಲಿ ಗುಂಡಿನ ದಾಳಿ; ದೆಹಲಿಗೆ ನುಸುಳಿದ್ದ ಆರೋಪಿ ಸೆರೆ
Firing at Kapil Sharma’s Kap’s Cafe: ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ ಮೇಲೆ ನಡೆದ ಗುಂಡಿನ ದಾಳಿಯ ಪ್ರಕರಣದಲ್ಲಿ, ಭಾರತಕ್ಕೆ ನುಸುಳಿದ್ದ ಆರೋಪಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದ್ದು, ದಾಳಿ ಹಿಂದೆ ಇರುವ ಜಾಲವನ್ನು ತನಿಖೆ ಮಾಡಲಾಗುತ್ತಿದೆ.
ದೆಹಲಿಗೆ ನುಸುಳಿದ್ದ ಗುಂಡಿನ ದಾಳಿಯ ಆರೋಪಿ ಅರೆಸ್ಟ್ (ಸಂಗ್ರಹ ಚಿತ್ರ) -
ನವದೆಹಲಿ: ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಕ್ಯಾಪ್ಸ್ ಕೆಫೆಯ (Kap’s Cafe) ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧು ಮಾನ್ ಸಿಂಗ್ ಸೆಖೋನ್ ಎಂಬಾತನನ್ನು ದೆಹಲಿ ಪೊಲೀಸರು (Delhi Police) ಶುಕ್ರವಾರ ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಜಾಲದ ದರೋಡೆಕೋರ ಗೋಲ್ಡಿ ಬ್ರಾರ್ ಜೊತೆ ಈತ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಾದಲ್ಲಿ ನಡೆದ ಗುಂಡಿನ ದಾಳಿಯ ನಂತರ ಸೆಖೋನ್ ಭಾರತಕ್ಕೆ ನುಸುಳಿದ್ದ. ಕ್ರೈಂ ಬ್ರಾಂಚ್ ಅಧಿಕಾರಿಗಳು ಅವನನ್ನು ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವನ ಚಲನವಲನಗಳು, ಸಂಪರ್ಕ ಜಾಲ ಮತ್ತು ದಾಳಿಯ ಹಿಂದಿನ ಶಸ್ತ್ರಾಸ್ತ್ರ ಸರಬರಾಜು ಪೂರೈಕೆಯನ್ನು ಪತ್ತೆ ಹಚ್ಚಲು ಕೇಂದ್ರ ಸಂಸ್ಥೆಗಳು ತನಿಖೆಗೆ ಸೇರಿವೆ.
Kapil Sharma: ಕಪಿಲ್ ಶರ್ಮಾ ಒಡೆತನದ ಕೆಫೆಯಲ್ಲಿ ಭಾರೀ ಗುಂಡಿನ ದಾಳಿ; ಹೊಣೆ ಹೊತ್ತ ಖಲಿಸ್ತಾನಿ ಉಗ್ರ
ಅಧಿಕಾರಿಗಳ ಪ್ರಕಾರ, ಈ ವರ್ಷ ಕ್ಯಾಪ್ಸ್ ಕೆಫೆಯನ್ನು ಹಲವು ಬಾರಿ ಗುರಿಯಾಗಿಸಿಕೊಂಡ ಶೂಟರ್‌ಗಳಿಗೆ ಸೆಖೋನ್, ಶಸ್ತ್ರಾಸ್ತ್ರಗಳು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದಾನೆ. ಈ ವರ್ಷದ ಜುಲೈನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಹಾಸ್ಯನಟ ತೆರೆದಿದ್ದ ಈ ಔಟ್‌ಲೆಟ್ ಮೇಲೆ ಮೂರು ಬಾರಿ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದರಲ್ಲಿ ದರೋಡೆಕೋರ ಗೋಲ್ಡಿ ಧಿಲ್ಲನ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ.
ಪೊಲೀಸ್ ಹೇಳಿರುವಂತೆ, ಸೆಖೋನ್ ವಿದೇಶದಲ್ಲಿರುವ ನಿರ್ವಾಹಕರೊಂದಿಗೆ ಹೇಗೆ ಸಹಯೋಗ ನಡೆಸಿದನು ಮತ್ತು ಭಾರತ ಅಥವಾ ಕೆನಡಾದಲ್ಲಿ ಇನ್ನಷ್ಟು ಕಾರ್ಯಕರ್ತರು ಸಕ್ರಿಯರಾಗಿದ್ದಾರೆಯೇ ಎಂಬುದನ್ನು ಅವರು ಈಗ ಪರಿಶೀಲಿಸುತ್ತಿದ್ದಾರೆ. ವಿಚಾರಣೆಯು ಗೋಲ್ಡಿ ಬ್ರಾರ್‌ನ ಸುತ್ತಲಿನ ವ್ಯಾಪಕ ಜಾಲ ಮತ್ತು ದಾಳಿಗಳ ಹಿಂದೆ ಇರುವ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಬಂಧಿತನಿಂದ ಒಂದು ಚೀನೀ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿತೂರಿಯಲ್ಲಿ ಅವನ ಪಾತ್ರ ಮತ್ತು ವಿದೇಶಿ ಕಾರ್ಯಕರ್ತರೊಂದಿಗಿನ ಅವನ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Kapil Sharma: ನಟ ಕಪಿಲ್ ಶರ್ಮಾಗೆ ಬೆದರಿಕೆ: ಪಶ್ಚಿಮ ಬಂಗಾಳದ ವ್ಯಕ್ತಿಯ ಬಂಧನ
ಕೆಫೆಯ ಅದ್ಧೂರಿ ಉದ್ಘಾಟನೆಯ ಕೆಲವು ದಿನಗಳ ನಂತರ, ಜುಲೈ 10, 2025 ರಂದು ಮೊದಲ ದಾಳಿ ನಡೆಯಿತು. ಆಗ ಗುಂಡೇಟಿನಿಂದ ಅದರ ಕಿಟಕಿಗಳು ಪುಡಿಪುಡಿಯಾದವು. ಇದರ ನಂತರ ಆಗಸ್ಟ್ 7, 2025 ರಂದು ಎರಡನೇ ಗುಂಡಿನ ದಾಳಿ ನಡೆಯಿತು. ಇದರಿಂದಾಗಿ ಕೆಫೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ಇತ್ತೀಚಿನ ದಾಳಿ ಅಕ್ಟೋಬರ್ 2025 ರಲ್ಲಿ ಸಂಭವಿಸಿತು. ಭದ್ರತಾ ಕ್ರಮಗಳೊಂದಿಗೆ ಕೆಫೆಯನ್ನು ಮತ್ತೆ ತೆರೆದ ಕೇವಲ ಎರಡು ವಾರಗಳ ನಂತರ ಮತ್ತೆ ಗುಂಡಿನ ದಾಳಿ ನಡೆಯಿತು.
ಸರ್ರೆಯ ಕ್ಯಾಪ್ಸ್ ಕೆಫೆಯಲ್ಲಿ ನಡೆದ ಗುಂಡಿನ ದಾಳಿಯನ್ನು ನಾನು, ಕುಲ್ವೀರ್ ಸಿಧು ಮತ್ತು ಗೋಲ್ಡಿ ಧಿಲ್ಲನ್ ನಡೆಸಿದ್ದೇವೆ. ನಮಗೆ ಸಾರ್ವಜನಿಕರ ವಿರುದ್ಧ ಯಾವುದೇ ದ್ವೇಷವಿಲ್ಲ. ನಮಗೆ ಮೋಸ ಮಾಡುವವರಿಗೆ ಎಚ್ಚರಿಕೆ ನೀಡಲಾಗುವುದು. ನಮ್ಮ ಧರ್ಮದ ವಿರುದ್ಧ ಮಾತನಾಡುವ ಬಾಲಿವುಡ್ ವ್ಯಕ್ತಿಗಳು ಇದಕ್ಕೆ ಸಿದ್ಧರಾಗಿರಬೇಕು. ಗುಂಡುಗಳು ಎಲ್ಲಿಂದಲಾದರೂ ಬರಬಹುದು ಎಂದು ದಾಳಿಕೋರ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ.