ರೈಲಿನಲ್ಲಿ ಲಗೇಜ್ ಮರೆತರೆ ಚಿಂತೆ ಬೇಡ ಹುಡುಕಲು ಸಹಾಯ ಮಾಡುತ್ತೆ 24X7 ಹೆಲ್ಪ್ ಲೈನ್
ರೈಲಿನಲ್ಲಿ ಪ್ರಯಾಣ ಮಾಡುವಾಗ ನಾವು ಹೆಚ್ಚಾಗಿ ಚಿಂತೆ ಮಾಡುವುದು ನಮ್ಮ ಲಗೇಜ್ ಬಗ್ಗೆ. ಅವಸರವಸರದಲ್ಲಿ ನಾವು ರೈಲು ಹತ್ತಬೇಕು, ಇಳಿಯಬೇಕು ಎಂದುಕೊಂಡಾಗ ಲಗೇಜ್ ಮರೆತು ಹೋಗುವುದು ಸಾಮಾನ್ಯ. ಆದರೆ ಇನ್ನು ಮುಂದೆ ಮರೆತು ಹೋದ ಲಗೇಜ್ ಬಗ್ಗೆ ಚಿಂತೆ ಮಾಡಬೇಕಿಲ್ಲ. ಅದನ್ನು ಹುಡುಕಲು ಸಹಾಯವಾಣಿ ಸಹಾಯ ಮಾಡುತ್ತದೆ.
(ಸಂಗ್ರಹ ಚಿತ್ರ) -
ನವದೆಹಲಿ: ರೈಲಿನಲ್ಲಿ (Train) ಲಗೇಜ್ (Forgot bag On Train) ಮರೆತು ಹೋಯಿತು ಎನ್ನುವ ಚಿಂತೆ ಇನ್ನು ಮಾಡಬೇಕಿಲ್ಲ. ಯಾಕೆಂದರೆ ರೈಲು ಸಹಾಯವಾಣಿ (Railways Helpline) ಅದನ್ನು ಹುಡುಕಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಅವಸರವಸರದಲ್ಲಿ ನಾವು ರೈಲು ಹತ್ತಬೇಕು, ಇಳಿಯಬೇಕು ಎಂದುಕೊಂಡಾಗ ಲಗೇಜ್ ಮರೆತು ಹೋಗುವುದು ಸಾಮಾನ್ಯ. ಆದರೆ ಇನ್ನು ಮುಂದೆ ಮರೆತು ಹೋದ ಲಗೇಜ್ ಅನ್ನು ಹುಡುಕಿಕೊಡುತ್ತದೆ ರೈಲ್ವೇ ತೆರೆದಿರುವ 24X7 ಸಹಾಯವಾಣಿ. ರೈಲಿನಲ್ಲಿ ಕಳೆದು ಹೋದ ಯಾವುದೇ ಸಾಮಗ್ರಿಗಳನ್ನು ತ್ವರಿತವಾಗಿ ಮರಳಿ ಪಡೆಯಲು ಇದು ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತದೆ.
ರೈಲಿನಲ್ಲಿ ಪ್ರಯಾಣಿಸುವಾಗ ಯಾವುದೇ ವಸ್ತು ಕಳೆದು ಹೋದರೂ ತ್ವರಿತವಾಗಿ ರೈಲು ಸಹಾಯವಾಣಿಯನ್ನು ಸಂಪರ್ಕಿಸಿದರೆ ಅದು ಮರಳಿ ಸಿಗಲಿದೆ. ಇದಕ್ಕಾಗಿ ರೈಲ್ವೇಯು ರೈಲ್ ಮದದ್ ಪ್ಲಾಟ್‌ಫಾರ್ಮ್ ಅನ್ನು ತೆರೆದಿದೆ. ಈ ಮೂಲಕ ಪ್ರಯಾಣಿಕರು ರೈಲಿನಲ್ಲಿ ಕಳೆದು ಹೋದ ತಮ್ಮ ವಸ್ತುಗಳ ಕುರಿತು ಮೊಬೈಲ್ ಅಪ್ಲಿಕೇಶನ್, ವೆಬ್‌ಸೈಟ್ ಅಥವಾ ರೈಲು ನಿಲ್ದಾಣಗಳಲ್ಲಿ ದೂರು ನೀಡಬಹುದಾಗಿದೆ.
Midday Meal: ಇನ್ನು ಮುಂದೆ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳಿಗೂ ಮೊಟ್ಟೆ, ಬಾಳೆಹಣ್ಣು, ಹಾಲು
ರೈಲ್ ಮದದ್ ಪ್ಲಾಟ್‌ಫಾರ್ಮ್ ಪ್ರಯಾಣಿಕರ ದೂರಿಗೆ ತ್ವರಿತವಾಗಿ ಸ್ಪಂದಿಸಲಿದೆ. ದಕ್ಷ ಮತ್ತು ಸಕಾಲಿಕವಾಗಿ ಪ್ರಯಾಣಿಕರ ವಸ್ತುಗಳನ್ನು ತಲುಪಿಸಲು ಇದು ಸಹಾಯ ಮಾಡುತ್ತದೆ. ರೈಲುಗಳಲ್ಲಿ ಪ್ರಯಾಣಿಸುವ ಎರಡು ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರತಿ ದಿನ ರೈಲುಗಳನ್ನು ಹತ್ತುವ, ಇಳಿಯುವ ಆತುರದಲ್ಲಿ ತಮ್ಮ ಲಗೇಜ್ ಗಳನ್ನೂ ರೈಲುಗಳಲ್ಲಿ ಬಿಟ್ಟು ಹೋಗುತ್ತಾರೆ. ಇದರಲ್ಲಿ ಕೈಚೀಲಗಳು, ಬೆನ್ನು ಚೀಲಗಳು, ಫೋನ್, ಸಣ್ಣ ಟ್ರಾಲಿಗಳು ಸೇರಿರುತ್ತವೆ. ಕಡೆಗೆ ಇದು ಇನ್ನು ಸಿಗುವುದೇ ಇಲ್ಲ ಎಂದು ಕೈ ಚೆಲ್ಲಿ ನೋಡಿತ್ತಾರೆ. ಆದರೆ ಇನ್ನು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ. ಇದಕ್ಕಾಗಿ ರೈಲು ಸಹಾಯವಾಣಿ ಸಹಾಯ ಮಾಡುತ್ತದೆ. ತ್ವರಿತವಾಗಿ ಪ್ರಯಾಣಿಕರ ದೂರಿಗೆ ಸ್ಪಂದಿಸಿ ಪ್ರಯಾಣಿಕರಲ್ಲಿ ತಮ್ಮ ಲಗೇಜ್ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡುತ್ತದೆ.
ರೈಲ್ವೆಯ ಕುಂದುಕೊರತೆ ನಿವಾರಣಾ ವೇದಿಕೆಯಾದ 'ರೈಲ್ ಮದದ್' ಅಥವಾ 24×7 ಲಭ್ಯವಿರುವ ಡಿಜಿಟಲ್ ಸೇವೆಯ ಮೂಲಕ ಪ್ರಯಾಣಿಕರು ತಮ್ಮ ಕಳೆದುಹೋದ ವಸ್ತುಗಳ ಬಗ್ಗೆನೇರವಾಗಿ ದೂರುಗಳನ್ನು ಸಲ್ಲಿಸಿದರೆ ತಕ್ಷಣ ಸ್ಪಂದನೆ ಒದಗಿಸಲಾಗುತ್ತದೆ. ಇದಕ್ಕಾಗಿ ಪ್ರಯಾಣಿಕರು ತಮ್ಮ ಪಿಎನ್ ಆರ್ ಸಂಖ್ಯೆಯನ್ನು ನಮೂದಿಸಿದರೆ ಸಾಕು. ಜೊತೆಗೆ ಕಾಣೆಯಾದ ವಸ್ತುವಿನ ಕುರಿತು ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ದೂರು ಸಲ್ಲಿಕೆಯಾದ ತಕ್ಷಣವೇ ರೈಲಿನ ಮಾರ್ಗದಲ್ಲಿ ಸಂಬಂಧಪಟ್ಟ ರೈಲ್ವೆ ವಿಭಾಗಗಳಿಗೆ ಮಾಹಿತಿ ರವಾನಿಸಲಾಗುತ್ತದೆ. ವಸ್ತುಗಳನ್ನು ಹುಡುಕಲು ಸಹಾಯ ಒದಗಿಸಲಾಗುತ್ತದೆ.
ಅಧಿಕೃತ ವೆಬ್‌ಸೈಟ್ railmadad.indianrailways.gov.in ಮೂಲಕವೂ ದೂರು ಸಲ್ಲಿಸಬಹುದು. ಇದು ಪೋರ್ಟಲ್ ನಲ್ಲಿ ಪ್ರಕರಣವನ್ನು ನೋಂದಾಯಿಸಿ ಸಂಬಂಧಿತ ತಂಡಗಳಿಗೆ ಮಾಹಿತಿಯನ್ನು ರವಾನಿಸುತ್ತದೆ. ದೂರು ದಾಖಲಾದ ತಕ್ಷಣವೇ ಹುಡುಕಾಟ ಪ್ರಾರಂಭವಾಗುತ್ತದೆ. ಇದರಿಂದ ಕಳೆದು ಹೋದ ವಸ್ತುಗಳು ಮರು ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
Narendra Modi: AI ರಚಿತ ಚಾಯ್‌ವಾಲಾ ವಿಡಿಯೋದಲ್ಲಿ ನರೇಂದ್ರ ಮೋದಿ; ಕಾಂಗ್ರೆಸ್ ಉದ್ಧಟತನಕ್ಕೆ ಎಲ್ಲೆಡೆ ಛೀಮಾರಿ
ಪ್ರಯಾಣಿಕರು ತಾವು ಇಳಿದ ಅಥವಾ ಮುಂದಿನ ಪ್ರಮುಖ ರೈಲು ನಿಲ್ದಾಣಗಳಲ್ಲೂ ದೂರು ಸಲ್ಲಿಸುವ ಅವಕಾಶವಿದೆ. ಸ್ಟೇಷನ್ ಮಾಸ್ಟರ್‌ಗಳು, ಕಳೆದುಹೋದ ಆಸ್ತಿ ಕೌಂಟರ್‌ಗಳು ಮತ್ತು ರೈಲ್ವೆ ರಕ್ಷಣಾ ಪಡೆ ಈ ದೂರುಗಳನ್ನು ಸ್ವೀಕರಿಸುತ್ತವೆ.
ಒಂದು ವೇಳೆ ವಸ್ತುಗಳು ಪತ್ತೆಯಾಗದೇ ಇದ್ದರೆ ಪ್ರಯಾಣಿಕರು ಆರ್‌ಪಿಎಫ್‌ನಲ್ಲಿ ಎಫ್‌ಐಆರ್ ದಾಖಲಿಸಬೇಕಾಗುತ್ತದೆ. ಇದರಿಂದ ರೈಲಿನ ಸಂಪೂರ್ಣ ಮಾರ್ಗದಲ್ಲಿ ಹೆಚ್ಚು ತೀವ್ರವಾಗಿ ಹುಡುಕಾಟ ನಡೆಸಲಾಗುತ್ತದೆ. ಸಿಕ್ಕಿದ ತಕ್ಷಣವೇ ಅದನ್ನು ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ ಎಂದು ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.