Physical Abuse: ಮಾರ್ಕ್ಸ್ ಆಸೆ ತೋರ್ಸಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ; ನೀಚ ಶಿಕ್ಷಕನ ಹೀನ ಕೃತ್ಯ ಬಯಲಾಗಿದ್ದು ಹೇಗೆ ಗೊತ್ತಾ?
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜಿನ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ರಜನೀಶ್ ಕುಮಾರ್ ಎಂಬ ಶಿಕ್ಷಕ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಶಿಕ್ಷಕನಾಗಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಕಾಲೇಜು ಆಡಳಿತವು ಆತನನ್ನು ಅಮಾನತುಗೊಳಿಸಿದೆ.

ಸಾಂದರ್ಭಿಕ ಚಿತ್ರ

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲೇಜಿನ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಮಾಡಿದ ಆರೋಪ ಕೇಳಿ ಬಂದಿದೆ. ರಜನೀಶ್ ಕುಮಾರ್ ಎಂಬ ಶಿಕ್ಷಕ ಸೇಥ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಶಿಕ್ಷಕನಾಗಿದ್ದಾನೆ. ಆರೋಪಗಳು ಬೆಳಕಿಗೆ ಬಂದ ನಂತರ ಕಾಲೇಜು ಆಡಳಿತವು ಆತನನ್ನು ಅಮಾನತುಗೊಳಿಸಿದೆ. ಕುಮಾರ್ ಈಗ ಪರಾರಿಯಾಗಿದ್ದಾನೆ. ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆತನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಆತನಿಗೋಸ್ಕರ ಹುಡುಕಾಟ ನಡೆಸುತ್ತಿದ್ದಾರೆ.
ಅನಾಮಧೇಯ ಪತ್ರ ಕೊಟ್ಟ ಸುಳಿವು
ಸುಮಾರು 10 ತಿಂಗಳ ಹಿಂದೆ ಪೊಲೀಸರಿಗೆ ಅನಾಮಧೇಯ ಪತ್ರ ಬಂದಿದ್ದು, ಅದರಲ್ಲಿ ಕುಮಾರ್ ಹೆಚ್ಚಿನ ಅಂಕ ಹಾಗೂ ಉದ್ಯೋಗಾವಕಾಶವನ್ನು ನೀಡುವುದಾಗಿ ಆಮಿಷವೊಡ್ಡಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪ್ರತದಲ್ಲಿ ಉಲ್ಲೇಖಿಸಲಾಗಿತ್ತು. "ನಾನು ನನ್ನ ನಿಜವಾದ ಹೆಸರನ್ನು ಬಳಸಿಲ್ಲ ಏಕೆಂದರೆ ಈತನ ಹೆಸರನ್ನು ಹೇಳಿದರೆ ನನ್ನನ್ನು ಕೊಲ್ಲುತ್ತಾನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅನಾಮಧೇಯ ದೂರುಗಳೊಂದಿಗೆ ಕುಮಾರ್ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿರುವ 59 ವೀಡಿಯೊಗಳನ್ನು ಹೊಂದಿರುವ ಪೆನ್ ಡ್ರೈವ್ ಕೂಡ ಇಡಲಾಗಿದೆ. ಕುಮಾರ್, ಗುಪ್ತ ಕ್ಯಾಮೆರಾದೊಂದಿಗೆ ಕೃತ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದನು ಮತ್ತು ನಂತರ ವಿದ್ಯಾರ್ಥಿಗಳನ್ನು ಮತ್ತೆ ತನ್ನ ಜೊತೆ ಬರುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Physical Abuse: ಕೋಲಾರದಲ್ಲಿ ಹೀನ ಕೃತ್ಯ; ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ!
ಪೊಲೀಸರು ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಅಧಿಕಾರದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಸಂಭೋಗಕ್ಕೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಸದ್ಯ ಆರೋಪಿಯನ್ನು ಶಿಕ್ಷಕ ಸ್ಥಾನದಿಂದ ಅಮಾನತು ಮಾಡಲಾಗಿದೆ. ಈ ವೀಡಿಯೊಗಳು 2023 ಕ್ಕೂ ಮೊದಲಿನವು ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ದೂರುದಾರು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿದ್ಯಾರ್ಥಿನಿಯರು ಯಾರೂ ದೂರನ್ನು ದಾಖಲಿಸಿಲ್ಲ.