ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ 590 ಕೋಟಿ ರೂ. ವಂಚನೆ; ಹೂಡಿಕೆದಾರರಿಗೆ ಸಾವಿರಾರು ಕೋಟಿ ನಷ್ಟ

IDFC First Bank: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ 590 ಕೋಟಿ ರೂ. ವಂಚನೆ; ಹೂಡಿಕೆದಾರರಿಗೆ ಸಾವಿರಾರು ಕೋಟಿ ನಷ್ಟ ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇಂದು ಬೆಳಗಿನ ಜಾವ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಈ ವಿಷಯವನ್ನು ಬ್ಯಾಂಕಿಂಗ್ ನಿಯಂತ್ರಕರಿಗೆ ಬಹಿರಂಗಪಡಿಸಿದೆ ಮತ್ತು ಪೊಲೀಸ್ ದೂರು ಕೂಡ ದಾಖಲಿಸಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ  590 ಕೋಟಿ ರೂ. ವಂಚನೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Feb 23, 2026 4:45 PM

ಚಂಡೀಗಢ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ (IDFC First Bank) ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇಂದು ಬೆಳಗಿನ ಜಾವ ಸಲ್ಲಿಸಿದ ನಿಯಂತ್ರಕ ಫೈಲಿಂಗ್‌ನಲ್ಲಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಈ ವಿಷಯವನ್ನು ಬ್ಯಾಂಕಿಂಗ್ ನಿಯಂತ್ರಕರಿಗೆ ಬಹಿರಂಗಪಡಿಸಿದೆ ಮತ್ತು ಪೊಲೀಸ್ ದೂರು ಕೂಡ ದಾಖಲಿಸಿದೆ. ಐಡಿಎಫ್​ಸಿ ಫಸ್ಟ್ ಬ್ಯಾಂಕ್ ಹಾಗೂ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳನ್ನು ಹರಿಯಾಣ ಸರ್ಕಾರವು ತಕ್ಷಣದಿಂದಲೇ ಸರ್ಕಾರಿ ವ್ಯವಹಾರಗಳ ಪಟ್ಟಿಯಿಂದ ವಜಾ ಮಾಡಿದೆ. 590 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ನೌಕರರು ಮತ್ತು ಇತರರು ಭಾಗಿಯಾದರೆಂಬ ಮಾಹಿತಿ ಹೊರಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಚಂಢೀಗಡ ಶಾಖೆಯ ಸಿಬ್ಬಂದಿಯಿಂದ ವಂಚನೆ ನಡೆದಿರುವ ಆರೋಪ ಇದೆ. ಹರಿಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್​ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರವು ಈ ಅಕೌಂಟ್​ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್​ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಗೊತ್ತಾಗಿದೆ. ಈ ಬ್ಯಾಂಕ್​ನ ಮೂರನೇ ಕ್ವಾರ್ಟರ್​ನ ನಿವ್ವಳ ಆದಾಯವೇ 503 ಕೋಟಿ ರೂ ಇದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತದ ಅಕ್ರಮವನ್ನು ಕೆಲ ಸಿಬ್ಬಂದಿ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

HDFC Flexi Cap Fund : ತಿಂಗಳಿಗೆ 10,000 ರೂ SIP ; 5 ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಕೆ ಮಾಡಬಹುದಾ?

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ನಾಲ್ವರು ಅಧಿಕಾರಿಗಳನ್ನು ತನಿಖೆ ಬಾಕಿ ಇರುವವರೆಗೂ ಅಮಾನತುಗೊಳಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ, ನೌಕರರು ಮತ್ತು ಜವಾಬ್ದಾರಿಯುತ ಇತರ ಬಾಹ್ಯ ವ್ಯಕ್ತಿಗಳ ವಿರುದ್ಧ ಕಠಿಣ ಶಿಸ್ತು, ನಾಗರಿಕ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ಸದ್ಯ ಐಡಿಎಫ್​ಸಿ ಬ್ಯಾಂಕ್​ನ ಚಂಡೀಗಡ ಬ್ರ್ಯಾಂಚ್​ನಿಂದ ಅನಧಿಕೃತವಾಗಿ ನಡೆದಿರುವ ವಹಿವಾಟುಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಹಣವನ್ನು ಫ್ರೀಜ್ ಮಾಡುವಂತೆ ಸಂಬಂಧಿಸಿದ ಎಲ್ಲಾ ಬ್ಯಾಂಕುಗಳಿಗೂ ಮನವಿ ಮಾಡಲಾಗಿದೆ. ಎಷ್ಟು ಸಾಧ್ಯವೋ ಎಷ್ಟು ಹಣ ರಿಕವರ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ.