ಅಮೆರಿಕ ನಮ್ಮ ಮೇಲೆ ದಾಳಿ ನಡೆಸಿದರೆ ನಾವು ಭಾರತದ ಮೇಲೆ ಅಣು ಬಾಂಬ್ ಹಾಕುತ್ತೇವೆ; ಪಾಕ್ ಮಾಜಿ ಅಧಿಕಾರಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಇನ್ನೂ ಶಮನವಾಗಿಲ್ಲ. ಈ ನಡುವೆ ಪಾಕಿಸ್ತಾನ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದು, ಭಾರತಕ್ಕೆ ಬೆದರಿಕೆ ಹಾಕಿದೆ. ಪಾಕಿಸ್ತಾನದ ಮಾಜಿ ಹೈಕಮಿಷನರ್ ಅಬ್ದುಲ್ ಬಾಸಿತ್ ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಭಾರತದ ಮೇಲೆ ದಾಳಿ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ -
ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಇನ್ನೂ ಶಮನವಾಗಿಲ್ಲ. ಈ ನಡುವೆ ಪಾಕಿಸ್ತಾನ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದು, ಭಾರತಕ್ಕೆ ಬೆದರಿಕೆ ಹಾಕಿದೆ. ಪಾಕಿಸ್ತಾನದ (Pakistan) ಮಾಜಿ (Iran Israel War) ಹೈಕಮಿಷನರ್ ಅಬ್ದುಲ್ ಬಾಸಿತ್ ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಎರಡನೇ ಯೋಚನೆ ಮಾಡದೆ ಭಾರತ, ಮುಂಬೈ, ನವದೆಹಲಿಯ ಮೇಲೆ ದಾಳಿ ಮಾಡಬೇಕಾಗುತ್ತದೆ. ನಾವು ಅದನ್ನು ಬಿಡುವುದಿಲ್ಲ, ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಹೇಳಿದ್ದಾರೆ.
ಯಾರಾದರೂ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಪಾಕಿಸ್ತಾನಕ್ಕೆ ಭಾರತದ ಮೇಲೆ ಎಲ್ಲಿ ಬೇಕಾದರೂ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ" ಎಂದು ಅವರು ಹೇಳಿದರು. "ನಾವು ಹಾಗೆ ಆಗಬಾರದು ಎಂದು ಬಯಸುತ್ತೇವೆ, ಭಾರತವೂ ಹಾಗೆ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಬಾಸಿತ್ 2014 ರಿಂದ 2017 ರವರೆಗೆ ನವದೆಹಲಿಯಲ್ಲಿ ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದೊಂದಿಗಿನ ಹೆಚ್ಚುತ್ತಿರುವ ಘರ್ಷಣೆ ಸೇರಿದಂತೆ ಪಾಕಿಸ್ತಾನದೊಂದಿಗಿನ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.
ಪಾಕ್- ಅಫ್ಘಾನ್ ಯುದ್ಧ
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವಿನ ಸಂಘರ್ಷ ತಾರಕ್ಕೇರಿದೆ. ಫೆಬ್ರುವರಿ 20 ರಂದು ಪಾಕಿಸ್ತಾನ ನಡೆಸಿದ್ದ ಏರ್ಸ್ಟ್ರೈಕ್ಗೆ ತುತ್ತಾದ ಓಮಿಡ್ ಆಸ್ಪತ್ರೆಯಲ್ಲಿ ಸುಮಾರು 400 ಜನ ಮೃತಪಟ್ಟಿರುವುದಾಗಿ ಹಾಗೂ 250 ಜನ ತೀವ್ರವಾಗಿ ಗಾಯಗೊಂಡಿದ್ದಾರೆಂದು ತಾಲಿಬಾನ್ ಸರ್ಕಾರ ತಿಳಿಸಿತ್ತು. ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಈ ಓಮಿಡ್ ಆಸ್ಪತ್ರೆ ಒಂದು ರಿಹ್ಯಾಬಿಟೇಶ್ ಸೆಂಟರ್ ಆಗಿದ್ದು, ಮಾದಕ ವಸ್ತಗಳ ವ್ಯಸನಕ್ಕೆ ತುತ್ತಾಗಿರುವವರನ್ನು ಇಲ್ಲಿ ಇರಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. 2021 ರಲ್ಲಿ ಅಮೆರಿಕದ ಸೈನ್ಯ ಅಫ್ಘಾನಿಸ್ತಾನವನ್ನು ತೊರೆದುಹೋದ ನಂತರ ಈ ಪ್ರದೇಶ ತಾಲಿಬಾನಿಗಳ ಹಿಡಿತದಲ್ಲಿದೆ.
ನೀರು ಹರಿಸುವ ಮಾತೇ ಇಲ್ಲ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗುಡುಗು
ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿ ಮಾಡುತ್ತಿದ್ದು, ಇದು ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಅಫ್ಘಾನಿಸ್ತಾನ ಕಿಡಿ ಕಾರಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಪಾಕ್ ಪ್ರಧಾನಿ ಶೆಹ್‌ಬಾಜ್ ಶರೀಫ್, “ನಾವು ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಲ್ಲ ಎಂದು ಹೇಳಿಕೆ ನೀಡಿದೆ.