Independence Day 2025: ಸ್ವಾತಂತ್ರ್ಯ ದಿನಾಚರಣೆ ವಿಭಿನ್ನವಾಗಬೇಕೆ? ಹಾಗಾದರೆ ಈ ಖಾದ್ಯ ರೆಡಿ ಮಾಡಿ
ಸ್ವಾತಂತ್ರ್ಯ ದಿನವನ್ನು ಇಡೀ ದೇಶವೇ ಅತ್ಯಂತ ಸಂಭ್ರಮದಿಂದ ಆಚರಿಸುತ್ತದೆ. ಈ ದಿನದಂದು ರಾಷ್ಟ್ರೀಯ ನಾಯಕರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳನ್ನು ಸ್ಮರಿಸಲಾಗುತ್ತದೆ. ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಮೆರವಣಿಗೆಯಂತ ಕಾರ್ಯಕ್ರಮದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜಿಸಲಾಗುತ್ತದೆ. ಎಲ್ಲೆಡೆ ಕೇಸರಿ, ಬಿಳಿ, ಹಸಿರು ಬಣ್ಣ ರಾರಾಜಿಸುತ್ತದೆ. ನೀವು ಮನೆಯಲ್ಲಿಯೇ ಸ್ವಾತಂತ್ರ್ಯ ದಿನವನ್ನು ವಿವಿಧ ಖಾದ್ಯ ತಯಾರಿಸುವ ಮೂಲಕ ವಿಭಿನ್ನವಾಗಿ ಆಚರಿಸಬಹುದು.

Independence Day 2025

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಇಡೀ ದೇಶವೇ ಅತ್ಯಂತ ಸಂಭ್ರಮದಿಂದ ಕೊಂಡಾಡುತ್ತದೆ. ಈ ದಿನದಂದು ರಾಷ್ಟ್ರೀಯ ನಾಯಕರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಸೇನಾನಿಗಳನ್ನು ಗೌರವದಿಂದ ಸ್ಮರಿಸಲಾಗುತ್ತದೆ. ಧ್ವಜಾರೋಹಣ, ಸಿಹಿತಿಂಡಿ ವಿತರಣೆ, ಮೆರವಣಿಗೆಯಂತ ಕಾರ್ಯಕ್ರಮದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜಿಸಲಾಗುತ್ತದೆ. ಕೇಸರಿ, ಬಿಳಿ, ಹಸಿರು ಬಣ್ಣಕ್ಕೆ ಈ ದಿನ ಪ್ರಾಮುಖ್ಯ ಸ್ಥಾನವಿದ್ದು, ನೀವು ಮನೆಯಲ್ಲಿಯೇ ಸ್ವಾತಂತ್ರ್ಯ ದಿನವನ್ನು ವಿವಿಧ ಖಾದ್ಯ ತಯಾರಿಸುವ ಮೂಲಕ ವಿಭಿನ್ನವಾಗಿ ಆಚರಿಸಬಹುದು. ಹಾಗಾದರೆ ಆ ತಿನಿಸುಗಳು ಯಾವುದು ? ಇಲ್ಲಿದೆ ಮಾಹಿತಿ.
ತ್ರಿವರ್ಣ ಇಡ್ಲಿ: ಇಡ್ಲಿಯಲ್ಲಿ ಮೂರು ಬಣ್ಣ ಬಳಸುವ ಮೂಲಕ ವಿಭಿನ್ನವಾಗಿ ಆಚರಿಸಬಹುದು. ಮೊದಲಿಗೆ ಇಡ್ಲಿಯ ಹಿಟ್ಟನ್ನು ಮೂರ ಭಾಗವಾಗಿ ವಿಂಗಡಿಸಿ, ಬಳಿಕ ಪಾಲಕ್ ಹಾಕಿ ಆ ಹಿಟ್ಟನ್ನು ಪುನಃ ರುಬ್ಬಿಕೊಳ್ಳಿ. ಮತ್ತೊಂದಿಷ್ಟು ಹಿಟ್ಟಿಗೆ ಕ್ಯಾರೆಟ್ ತುರಿ ಹಾಕಿ ರುಬ್ಬಿಕೊಳ್ಳಿ. ನಂತರ ಯಾವುದನ್ನು ಮಿಶ್ರ ಮಾಡದೆ ಉದ್ದಿನ ಹಿಟ್ಟನ್ನು ಕೂಡ ಹಾಕಿ ಇಡ್ಲಿ ಮಾಡಿ. ಆಗ ಕೇಸರಿ, ಬಿಳಿ, ಹಸಿರು ಇಡ್ಲಿ ಸಿದ್ಧವಾಗುತ್ತದೆ. ಇದನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಬಡಿಸಬಹುದು.
ತಿರಂಗ ಪಲಾವ್: ಭಾರತದಾದ್ಯಂತ ಬಹಳ ಇಷ್ಟವಾಗುವ ಖಾದ್ಯಗಳಲ್ಲಿ ಪಲಾವ್ ಕೂಡ ಒಂದು. ಅಕ್ಕಿಯನ್ನು ಮೊದಲಿಗೆ ಕೇಸರಿ ಬಣ್ಣದಿಂದ ಅಥವಾ ಕೇಸರಿ ಪುಡಿ ಹಾಗೂ ಉಪ್ಪು ಹಾಕಿ ಬೇಯಿಸಬೇಕು. ನಂತರ ಖಾಲಿ ಅನ್ನಕ್ಕೆ ಮೊಸರನ್ನು ಬೆರೆಸಿ ಇಡಬೇಕು. ನಂತರ ಅನ್ನಕ್ಕೆ ಕೊತ್ತಂಬರಿ ಚಟ್ನಿ ಸಾರವನ್ನು ಮಿಶ್ರಣ ಮಾಡಿ ಮೂರು ಅನ್ನವನ್ನು ಕ್ರಮ ಪ್ರಕಾರ ಇಡಬೇಕು. ಮಧ್ಯದಲ್ಲಿ ಒಂದು ಲವಂಗವನ್ನು ಹಾಕಿ ಅಲಂಕರಿಸಿದರೆ ತಿರಂಗ ಪಲಾವ್ ರೆಡಿ.
ತ್ರಿವರ್ಣ ಧೋಕ್ಲಾ: ಗುಜರಾತಿ ಧೋಕ್ಲಾದಲ್ಲಿಯೂ ಸ್ವಾತಂತ್ರ್ಯೋತ್ಸವದ ದಿನ ವಿಭಿನ್ನ ಖಾದ್ಯ ತಯಾರಿಸಬಹುದು. ಧೋಕ್ಲಾ ಕಡಲೆ ಹಿಟ್ಟಿನಿಂದ ಮಾಡಲ್ಪಟ್ಟಿದ್ದರೂ, ಈ ವಿಶೇಷ ತ್ರಿವರ್ಣ ಧೋಕ್ಲಾ ಮಾಡಲು ನೀವು ರವೆ ಮತ್ತು ಮೊಸರನ್ನು ಬಳಸಬಹುದು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಪ್ರತ್ಯೇಕವಾಗಿ ಹಿಟ್ಟು ಮಾಡಿ ಬಳಿಕ ಒಟ್ಟಿಗೆ ಬೇಯಿಸಿದಾಗ ರುಚಿ ರುಚಿಯಾದ ಧೋಕ್ಲಾ ಖಾದ್ಯ ಸವಿಯಲು ಸಿದ್ಧ.
ಇದನ್ನು ಓದಿ:India-UK Free Trade Agreement: ಭಾರತ-ಬ್ರಿಟನ್ ಐತಿಹಾಸಿಕ ಮುಕ್ತ-ವ್ಯಾಪಾರ ಒಪ್ಪಂದಕ್ಕೆ ಸಹಿ; ಭಾರತಕ್ಕೇನು ಲಾಭ?
ತಿರಂಗ ಬರ್ಫಿ: ಬರ್ಫಿ ಎಂದರೆ ಬಹುತೇಕರಿಗೆ ಬಹಳ ಇಷ್ಟ. ಅಂತೆಯೇ ನೀವು ಕೂಡ ಸ್ವಾತಂತ್ರ್ಯ ದಿನಾಚರಣೆಗೆ ತಿರಂಗ. ಬರ್ಫಿ ಮಾಡಬಹುದು. ಬರ್ಫಿ ರೆಸಿಪಿಗೆ ಬಣ್ಣ ಮಿಶ್ರಣ ಮಾಡಿ ಬಳಿಕ ಅದಕ್ಕೆ ಅನುಗುಣವಾಗಿ ಅವುಗಳನ್ನು ಕ್ರಮವಾಗಿ ಡಿಸೈನ್ ಮಾಡಿದರೆ ತಿರಂಗ ಬರ್ಫಿ ಕೂಡ ರೆಡಿಯಾಗಲಿದೆ.
ತ್ರಿವರ್ಣ ಡಂಪ್ಲಿಂಗ್‌ಗಳು: ಇದು ಹಿಮಾಲಯನ್ ಪ್ರದೇಶದಲ್ಲಿ ಇರುವ ಜನಪ್ರಿಯ ಖಾದ್ಯವಾಗಿದ್ದು, ದೇಶಾದ್ಯಂತದ ಜನರು ಇದನ್ನು ಇಷ್ಟಪಡುತ್ತಾರೆ. ಡಂಪ್ಲಿಂಗ್‌ಗಳನ್ನು ತಯಾರಿಸಲು, ನೀವು ಎಲೆಕೋಸು, ಕ್ಯಾರೆಟ್ ಮುಂತಾದ ತರಕಾರಿಯನ್ನು ಸಣ್ಣಗೆ ಕತ್ತರಿಸಿ ಸ್ಟಫಿಂಗ್ ತಯಾರಿಸಬೇಕು. ಬಳಿಕ ಅದನ್ನು ಮೂರು ಬಣ್ಣದಲ್ಲಿ ಮಾಡಿದ್ದ ಹಿಟ್ಟನ್ನು ಬಳಸಿ ಅದರ ಒಳಗೆ ಈ ಸ್ಟಫಿಂಗ್ ಹಾಕಬೇಕು. ಹೀಗೆ ರುಚಿಯಾದ ತ್ರಿವರ್ಣ ಡಂಪ್ಲಿಂಗ್‌ಗಳನ್ನು ಸವಿಯಬಹುದು.