ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಿಟ್‌ ಕಾಯಿನ್ ಹಗರಣ ಪ್ರಕರಣ: ನಟಿ ಶಿಲ್ಪಾ ಶೆಟ್ಟಿಪತಿ ರಾಜ್ ಕುಂದ್ರಾಗೆ ಬಿಗ್ ರಿಲೀಫ್

ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. 150 ಕೋಟಿ ರೂಪಾಯಿಗಳ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ ಕುಂದ್ರಾ ಅವರು ವಿದೇಶಕ್ಕೆ ಪ್ರಯಾಣಿಸುವ ಮೊದಲು 1 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ಸಲ್ಲಿಸಲು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಲು ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಬಿಟ್ ಕಾಯಿನ್ ಹಗರಣ: ರಾಜ್ ಕುಂದ್ರಾಗೆ ಬಿಗ್ ರಿಲೀಫ್

ಸಂಗ್ರಹ ಚಿತ್ರ -

ನವದೆಹಲಿ: ಬಿಟ್ ಕಾಯಿನ್ ಹಗರಣ (Bitcoin scam) ಪ್ರಕರಣದ ಆರೋಪಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Actress Shilpa Shetty) ಅವರ ಪತಿ, ಉದ್ಯಮಿ ರಾಜ್ ಕುಂದ್ರಾಗೆ (Businessman Raj Kundra) ವಿದೇಶ ಪ್ರಯಾಣಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಇದಕ್ಕೂ ಮೊದಲು 1 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ಸಲ್ಲಿಸಲು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಲು ಆದೇಶಿಸಿದೆ. 150 ಕೋಟಿ ರೂಪಾಯಿಗಳ ಬಿಟ್‌ಕಾಯಿನ್ (Bit coin) ಹಗರಣದ ಆರೋಪಿಯಾಗಿರುವ ರಾಜ್ ಕುಂದ್ರಾ ಅವರಿಗೆ ಶುಕ್ರವಾರ ವಿಶೇಷ ನ್ಯಾಯಾಲಯವು ಜಾಮೀನು (bail) ನೀಡಿದೆ.

ಜಾರಿ ನಿರ್ದೇಶನಾಲಯವು ಅಕ್ರಮಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಆರೋಪಿಗಳಲ್ಲಿ ರಾಜ್ ಕುಂದ್ರಾ ಕೂಡ ಸೇರಿದ್ದಾರೆ. ಇವರ ವಿರುದ್ಧ ಜನವರಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಆ ಬಳಿಕ ಅವರು ನ್ಯಾಯಾಲಯದ ಮುಂದೆ ಹಾಜರಾದರು.

ಮದುವೆ ಕಾರ್ಡ್‌ನಲ್ಲಿ ಹೆಸರು ಹಾಕದಿದ್ದಕ್ಕೆ ಬಿತ್ತು ಮೂವರ ಹೆಣ; ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ ಕುಂದ್ರಾ ಅವರಿಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ. ಇದಕ್ಕಾಗಿ ನ್ಯಾಯಾಲಯಕ್ಕೆ 1 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ನೀಡಬೇಕು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಬೇಕು ಎಂದು ನಿರ್ದೇಶಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ ಕುಂದ್ರಾ, ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನನ್ನ ಹೆಂಡತಿ ಮನೆಯಲ್ಲಿ ಮಾತನಾಡಲು ಬಿಡುವುದಿಲ್ಲ ಮತ್ತು ನನ್ನ ವಕೀಲರು ನ್ಯಾಯಾಲಯದಲ್ಲಿ ಮಾತನಾಡಲು ಬಿಡುವುದಿಲ್ಲ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯನ್ನು ಆಧರಿಸಿ ವಿಶೇಷ ನ್ಯಾಯಾಲಯವು ರಾಜ್ ಕುಂದ್ರಾ ಮತ್ತು ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ರಾಜ್ ಕುಂದ್ರಾ ಮತ್ತು ಸತಿಜಾ ಅವರನ್ನು ಆರೋಪಿಗಳಾಗಿ ಗುರುತಿಸಲಾಗಿದೆ.

ತನಿಖೆ ಸಮಯದಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಿರಲಿಲ್ಲ. ಪ್ರಕರಣ ದಾಖಲಾಗಿರುವುದರಿಂದ ಅವರು ನ್ಯಾಯಾಲಯದಿಂದ ಔಪಚಾರಿಕವಾಗಿ ಜಾಮೀನು ಪಡೆಯಬೇಕಾಗಿತ್ತು.

ಜಾರಿ ನಿರ್ದೇಶನಾಲಯದ ಮಾಹಿತಿ ಪ್ರಕಾರ ರಾಜ್ ಕುಂದ್ರಾ ಅವರು ಗೇನ್ ಬಿಟ್‌ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಅಮಿತ್ ಭಾರದ್ವಾಜ್ ಅವರಿಂದ 6.5 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಇದನ್ನು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಸ್ಥಾಪಿಸಲು 285 ಬಿಟ್‌ಕಾಯಿನ್‌ಗಳಾಗಿ ಪರಿವರ್ತಿಸಲಾಗಿದ್ದು, ಇದನ್ನು ಇಸ್ರೇಲ್ ಪ್ರಜೆಯೊಬ್ಬರು ಖರೀದಿಸಲು ಮುಂದಾಗಿದ್ದರು. ಹಲವಾರು ಅವಕಾಶಗಳ ಹೊರತಾಗಿಯೂ ಬಿಟ್‌ಕಾಯಿನ್‌ಗಳನ್ನು ವರ್ಗಾಯಿಸಿದ ವ್ಯಾಲೆಟ್ ವಿಳಾಸಗಳನ್ನು ಒದಗಿಸಲು ರಾಜ್ ಕುಂದ್ರಾ ವಿಫಲರಾಗಿದ್ದರು ಎಂದು ಹೇಳಿದೆ.

ಮುಖ್ಯ ಕಾರ್ಯದರ್ಶಿ ವಿರುದ್ಧ ಭ್ರಷ್ಟಾಚಾರ ಆರೋಪ; ಮುಡಾ ಕೇಸ್‌ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್‌

ರಾಜ್ ಕುಂದ್ರಾ ಅವರ ವಕೀಲ ಪ್ರಶಾಂತ್ ಪಾಟೀಲ್ ಅವರು ಜಾರಿ ನಿರ್ದೇಶನಾಲಯದ ಮೌಲ್ಯಮಾಪನವು ಕಾನೂನುಬದ್ಧವಾಗಿಲ್ಲ ಎಂದು ಆರೋಪಿದ್ದಾರೆ. ಇಡಿಯು ಕೇವಲ 6.6 ಕೋಟಿ ರೂ. ಗಳ ಮೌಲ್ಯಕ್ಕೆ ಪ್ರತಿಯಾಗಿ 150 ಕೋಟಿ ರೂ. ಮೌಲ್ಯದ ಆಸ್ತಿಗಳ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆರೋಪಿಸಿದರು.