ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾಗಣೆ ಪುನಃಸ್ಥಾಪನೆಗೆ ಭಾರತ ಕರೆ: ಹಡಗುಗಳ ಮೇಲಿನ ದಾಳಿಗೆ ಖಂಡನೆ
safe navigation Hormuz Strait: ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ, ಹೊರ್ಮುಜ್ ಕಣಿವೆಯಲ್ಲಿ ವಾಣಿಜ್ಯ ನೌಕಾಯಾನಕ್ಕೆ ಎದುರಾಗಿರುವ ಬೆದರಿಕೆಗಳ ಬಗ್ಗೆ ಭಾರತ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ವೀಟೋ ಉಪಕ್ರಮದ ಅಡಿಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಹೇಳಿದರು.
ಸಾಂದರ್ಭಿಕ ಚಿತ್ರ -
ನವದೆಹಲಿ, ಏ.17: ಮಧ್ಯಪ್ರಾಚ್ಯದ ಉದ್ವಿಗ್ನತೆಯ (Middle East conflict) ನಡುವೆಯೇ, ಹೊರ್ಮುಜ್ ಕಣಿವೆಯಲ್ಲಿ (Strait of Hormuz) ವಾಣಿಜ್ಯ ನೌಕಾಯಾನಕ್ಕೆ ಎದುರಾಗಿರುವ ಬೆದರಿಕೆಗಳ ಬಗ್ಗೆ ಭಾರತ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದೆ. ಸುರಕ್ಷಿತ ಸಂಚಾರವನ್ನು ತಕ್ಷಣ ಪುನಃಸ್ಥಾಪಿಸಲು ಕರೆ ನೀಡಿದ ಭಾರತ, ಶಾಂತಿ ಮತ್ತು ಉದ್ವಿಗ್ನತೆಯನ್ನು ತಗ್ಗಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು, ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಕುರಿತು ವೀಟೋ ಉಪಕ್ರಮದ ಅಡಿಯಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಹೇಳಿದರು. ಭಾರತದ ಇಂಧನ ಮತ್ತು ಆರ್ಥಿಕ ಹಿತಾಸಕ್ತಿಗಳಿಗೆ ಕಡಲ ಭದ್ರತೆ ನಿರ್ಣಾಯಕವಾಗಿದೆ ಎಂದು ಹರೀಶ್ ಹೇಳಿದರು. ಸಂಘರ್ಷದ ಸಮಯದಲ್ಲಿ ವಾಣಿಜ್ಯ ಹಡಗು ಸಾಗಣೆಯನ್ನು ಗುರಿಯಾಗಿಸಲಾಗಿದೆ ಎಂದು ಒತ್ತಿ ಹೇಳಿದರು.
ಈ ಸಂಘರ್ಷದಲ್ಲಿ ವಾಣಿಜ್ಯ ಹಡಗು ಸಾಗಣೆಯನ್ನು ಮಿಲಿಟರಿ ದಾಳಿಗೆ ಗುರಿಯಾಗಿಸಿರುವುದನ್ನು ಭಾರತ ಖಂಡಿಸಿದೆ. ಮಾನವ ಹಾನಿಯನ್ನು ಉಲ್ಲೇಖಿಸುತ್ತಾ, ಭಾರತೀಯ ನಾಗರಿಕರೂ ಬಲಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ಸಂಘರ್ಷದ ಅವಧಿಯಲ್ಲಿ ಹಡಗುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ನಾವಿಕರ ಅಮೂಲ್ಯ ಜೀವಗಳು ಬಲಿಯಾಗಿವೆ ಎಂದು ಅವರು ಹೇಳಿದರು.
ಅಮೆರಿಕಕ್ಕೆ ಮತ್ತೆ ಮುಖಭಂಗ; ದಿಗ್ಬಂಧನವನ್ನು ಮೀರಿ ಹೊರ್ಮುಜ್ ಜಲಸಂಧಿ ದಾಟಿದ ಇರಾನ್‌ನ 2 ಹಡಗುಗಳು
ನಾಗರಿಕ ಸಮುದ್ರ ಚಟುವಟಿಕೆಯ ಮೇಲಿನ ದಾಳಿಯನ್ನು ಭಾರತ ಬಲವಾಗಿ ಖಂಡಿಸಿತು. ನೌಕಾಯಾನ ಸ್ವಾತಂತ್ರ್ಯದ ಬಗ್ಗೆ ತನ್ನ ನಿಲುವನ್ನು ಪುನರುಚ್ಚರಿಸಿತು. ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಸಾಗಣೆಯನ್ನು ಗುರಿಯಾಗಿಸಿಕೊಂಡು ಮುಗ್ಧ ನಾಗರಿಕ ಸಿಬ್ಬಂದಿಗೆ ಅಪಾಯವನ್ನುಂಟುಮಾಡುವುದು, ಸಂಚಾರ ಮತ್ತು ವಾಣಿಜ್ಯದ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದು ಒಪ್ಪತ್ತಕ್ಕದಲ್ಲ ಅವರು ಪುನರುಚ್ಚರಿಸಿದರು.
ಅಂತಾರಾಷ್ಟ್ರೀಯ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕರೆ ನೀಡಿದರು. ಸಾಮಾನ್ಯ ಕಡಲ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಬೇಕೆಂದು ಒತ್ತಾಯಿಸಿದರು. ಈ ವಿಷಯದಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸಬೇಕು. ಹೊರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚರಣೆ ಮತ್ತು ಜಾಗತಿಕ ವಾಣಿಜ್ಯದ ಸ್ವಾತಂತ್ರ್ಯವನ್ನು ಆದಷ್ಟು ಬೇಗ ಪುನಃಸ್ಥಾಪಿಸಬೇಕೆಂದು ನಾವು ಬಲವಾಗಿ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
ಫೆಬ್ರವರಿ 28, 2026 ರಿಂದ ಇರಾನ್ ಮತ್ತು ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ವ್ಯಾಪಕ ಸಂಘರ್ಷವನ್ನು ಉಲ್ಲೇಖಿಸಿದ ಹರೀಶ್, ಭಾರತ ನಿರಂತರವಾಗಿ ಕಳವಳವನ್ನು ವ್ಯಕ್ತಪಡಿಸಿದೆ. ಸಂಯಮದಿಂದ ವರ್ತಿಸುವಂತೆ ಕರೆ ನೀಡಿದೆ ಎಂದು ಹೇಳಿದರು.
ಭಾರತದ ನಿಲುವನ್ನು ಪುನರುಚ್ಚರಿಸಿದ ಹರೀಶ್, ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದನ್ನು ನಾವು ಬೆಂಬಲಿಸುತ್ತದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪ್ರಮುಖ ಚೆಕ್‌ಪಾಯಿಂಟ್ ಆಗಿರುವ ಹೊರ್ಮುಜ್ ಜಲಸಂಧಿಯ ಮೂಲಕ ಜಾಗತಿಕ ಇಂಧನ ಪೂರೈಕೆ ಮಾರ್ಗಗಳಿಗೆ ಅಡ್ಡಿಯಾಗುವ ಬಗ್ಗೆ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಕಳವಳಗಳ ಮಧ್ಯೆ ಭಾರತ ವಿಶ್ವಸಂಸ್ಥೆಯಲ್ಲಿ ತನ್ನ ಹಸ್ತಕ್ಷೇಪವನ್ನೆತ್ತಿದೆ.