Mehul Choksi: ಮುಂಬೈಯಲ್ಲಿಯೂ ಮೆಹುಲ್ ಚೋಕ್ಸಿಯ ದೋಖಾ; 7 ವರ್ಷದಿಂದ ಫ್ಲಾಟ್ ಬಾಡಿಗೆಯೇ ಕಟ್ಟಿಲ್ಲ
ಮೆಹುಲ್ ಚೋಕ್ಸಿ ಮುಂಬೈಯಲ್ಲಿರುವ ತನ್ನ ಫ್ಲಾಟ್‌ನ ನಿರ್ವಹಣೆಗೆ ತಗುಲಿರುವ 63 ಲಕ್ಷ ರೂ. ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಮುಂಬೈಯ ಮಲಬಾರ್ ಹಿಲ್‌ನಲ್ಲಿರುವ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿದ್ದು, ಇಲ್ಲಿಯವರೆಗೆ ಫ್ಲಾಟ್ ನಿರ್ವಹಣೆಗೆ ಖರ್ಚು ಮಾಡಲಾಗಿರುವ 63 ಲಕ್ಷ ರೂ. ಮೊತ್ತವನ್ನು ಪಾವತಿಸದೇ ಯಾಮಾರಿಸಿದ್ದಾನೆ ಎಂದು ಆ ಅಪಾರ್ಟ್‌ಮೆಂಟ್‌ನ ಸೊಸೈಟಿ ಸದಸ್ಯರೊಬ್ಬರು ತಿಳಿಸಿದ್ದಾರೆ.

ಮೆಹುಲ್ ಚೋಕ್ಸಿ.

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) (PNB) ಸಾಲ ವಂಚನೆ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ವಜ್ರದ ವ್ಯಾಪಾರಿ ಹಾಗೂ ಉದ್ಯಮಿ ಮೆಹುಲ್ ಚೋಕ್ಸಿ (Mehul Choksi)ಯನ್ನು ಬೆಲ್ಜಿಯಂನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೆಹುಲ್ ಚೋಕ್ಸಿಯನ್ನು ಇದೀಗ ಭಾರತಕ್ಕೆ ಕರೆತರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಿಂದ ಪರಾರಿಯಾಗಿದ್ದ ಮೆಹುಲ್ ಚೋಕ್ಸಿಯನ್ನು ಕೇಂದ್ರ ತನಿಖಾ ದಳದ (ಸಿಬಿಐ) ಮೇಲ್ಮನವಿಯ ಮೇರೆಗೆ ಶುಕ್ರವಾರ (ಏ. 11) 65 ವರ್ಷದ ಚೋಕ್ಸಿಯನ್ನು ಬಂಧಿಸಲಾಗಿದೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಸುಮಾರು 13,500 ಕೋಟಿ ರೂ. ಸಾಲ ತೆಗೆದು ವಂಚಿಸಿದ್ದಲ್ಲದೇ, ಕಾನೂನಿಂದ ತಪ್ಪಿಸಿಕೊಳ್ಳಲು ಭಾರತದಿಂದ ಬೆಲ್ಜಿಯಂಗೆ ಪರಾರಿಯಾಗಿದ್ದ. ಅಲ್ಲಿ ಆತನ ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ ಆಂಟ್ವೆರ್ಪ್‌ನಲ್ಲಿ ವಾಸಿಸುತ್ತಿದ್ದ. ಪ್ರೀತಿ ಚೋಕ್ಸಿ ಬೆಲ್ಜಿಯಂ ಪೌರತ್ವವನ್ನು ಹೊಂದಿದ್ದು, ಅಲ್ಲಿನ ವಾಸ ಪರವಾನಗಿಯನ್ನು ಗೋಲ್ ಮಾಲ್ ಮಾಡಿ ಪಡೆದಿದ್ದ ಎನ್ನುವ ಸಂಗತಿಯೂ ಬಯಲಾಗಿದೆ.
ಇಷ್ಟೆಲ್ಲ ಖತರ್ನಾಕ್ ಕೆಲಸಗಳನ್ನು ಮಾಡಿರುವ ಚೋಕ್ಸಿಯ ಮತ್ತೊಂದು ಮೋಸ ಬಯಲಾಗಿದ್ದು, ಮೆಹುಲ್ ಚೋಕ್ಸಿ ಮುಂಬೈಯಲ್ಲಿರುವ ತನ್ನ ಫ್ಲಾಟ್‌ನ ನಿರ್ವಹಣೆಗೆ ತಗುಲಿರುವ 63 ಲಕ್ಷ ರೂ. ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಮುಂಬೈಯ ಮಲಬಾರ್ ಹಿಲ್ (Malabar Hill)ನಲ್ಲಿರುವ ಗೋಕುಲ್ ಅಪಾರ್ಟ್‌ಮೆಂಟ್ (Gokul Apartment)ನಲ್ಲಿದ್ದ ಆತ, ಇಲ್ಲಿಯವರೆಗೆ ಫ್ಲಾಟ್ ನಿರ್ವಹಣೆಗೆ ಖರ್ಚು ಮಾಡಲಾಗಿರುವ 63 ಲಕ್ಷ ರೂ. ಮೊತ್ತವನ್ನು ಪಾವತಿಸದೇ ಯಾಮಾರಿಸಿದ್ದಾನೆ ಎಂದು ಆ ಅಪಾರ್ಟ್‌ಮೆಂಟ್‌ನ ಸೊಸೈಟಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: Mehul Choksi: ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡುತ್ತಿದ್ದ ಮೆಹುಲ್ ಚೋಕ್ಸಿಯ ಬಂಧನ ಆಗಿದ್ದಾದರೂ ಹೇಗೆ? ಭಾರತ-ಬೆಲ್ಜಿಯಂ ಜಂಟಿ ಕಾರ್ಯಾಚರಣೆ ಹೇಗಿತ್ತು?
ಈ ಕುರಿತು ANI ಜತೆ ಮಾತನಾಡಿದ ಅವರು, ಮಲಬಾರ್ ಹಿಲ್‌ನಲ್ಲಿರುವ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿನ 9, 10 ಮತ್ತು 11ನೇ ಮಹಡಿಗಳಲ್ಲಿ ಚೋಸ್ಕಿ ಮೂರು ವಿಲ್ಲಾಗಳನ್ನು ಹೊಂದಿದ್ದು, ಕಳೆದ ಏಳು ವರ್ಷಗಳಿಂದ ಅವುಗಳ ನಿರ್ವಹಣೆ ವೆಚ್ಚವನ್ನು ಪಾವತಿಸಿಲ್ಲ. ಆತನ ಹೆಸರಿನಲ್ಲಿ ಮೂರು ಮನೆಗಳಿದ್ದು, - 9, 10 ಮತ್ತು 11ನೇ ಮಹಡಿಗಳ ಪೈಕಿ, 11ನೇ ಮಹಡಿಯಲ್ಲಿರುವ ಟೆರೇಸ್ ಭಾಗವನ್ನು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಬಡ್ಡಿ ಇಲ್ಲದೆ ಸುಮಾರು 63 ಲಕ್ಷ ರೂ. ನಿರ್ವಹಣಾ ಬಾಕಿ ಇದ್ದು, 2020ರಲ್ಲಿ ಇಡೀ ಅಪಾರ್ಟ್‌ಮೆಂಟ್ ಅನ್ನು ನವೀಕರಣಗೊಳಿಸಲಾಗಿದ್ದು, ಪ್ರತಿ ಯೂನಿಟ್‌ಗೂ 30-35 ಲಕ್ಷ ರೂ. ಖರ್ಚಾಗಿದೆ. ಅದನ್ನು ಸೇರಿಸಿ ಲೆಕ್ಕ ಹಾಕಿದ್ದರೆ ಸುಮಾರು 95 ಲಕ್ಷ ರೂ. ಪಾವತಿಸಲು ಬಾಕಿ ಇದೆ ಎಂದು ಸೊಸೈಟಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇನ್ನು ಮೆಹುಲ್ ಚೋಕ್ಸಿ ಮತ್ತು ಆತನ ಸೋದರಳಿಯ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)ನಿಂದ 13,500 ಕೋಟಿ ರೂ. ಸಾರ್ವಜನಿಕ ಹಣವನ್ನು ವಂಚನೆಯ ಒಪ್ಪಂದ ಪತ್ರಗಳನ್ನು ಬಳಸಿ ವಂಚಿಸಿದ್ದಾನೆ ಎಂಬ ಆರೋಪವಿದೆ. 2021ರ ಮೇಯಲ್ಲಿ ಚೋಕ್ಸಿ ಆಂಟಿಗುವಾದಿಂದ ನಾಪತ್ತೆಯಾಗಿದ್ದ. ಆದರೆ ಆತನನ್ನು ನಂತರ ಪತ್ತೆ ಹಚ್ಚಲಾಗಿತ್ತು. ಭಾರತದ ಹಸ್ತಾಂತರ ಕೋರಿಕೆ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂಬ ವರದಿಯಾಗಿದೆ. ಮೆಹುಲ್ ಚೋಕ್ಸಿಯನ್ನು ಇದೀಗ ಭಾರತಕ್ಕೆ ಕರೆತರುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.