Cyclone ditwah: ಶ್ರೀಲಂಕೆಗೆ ನೆರವಿನ ಪಾಕ್ ವಿಮಾನಕ್ಕೆ ಮಾನವೀಯ ಹಿನ್ನೆಲೆಯಲ್ಲಿ ಭಾರತದ ವಾಯುಪ್ರದೇಶ ಕ್ಷಿಪ್ರ ತೆರವು
Pakistan Flight: ಭಾರತೀಯ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಕೋರಿ ಪಾಕಿಸ್ತಾನವು ಸೋಮವಾರ ಸುಮಾರು 13:00 ಗಂಟೆಗೆ (ಐಎಸ್ಟಿ) ಓವರ್ಫ್ಲೈಟ್ ವಿನಂತಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ವಿನಂತಿಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಭಾರತವು ಶೀಘ್ರ ವೇಗದಲ್ಲಿ ವಿನಂತಿಗೆ ಸಮ್ಮತಿ ನೀಡಿತು.
ಪಾಕಿಸ್ತಾನ ವಿಮಾನಕ್ಕೆ ಭಾರತ ವಾಯುಪ್ರದೇಶ ತೆರವು -
ನವದೆಹಲಿ, ಡಿ.2: ದಿತ್ವಾ ಚಂಡಮಾರುತದಿಂದ (Cyclone ditwah) ಹಾನಿಗೀಡಾದ ಶ್ರೀಲಂಕಾಕ್ಕೆ (Sri Lanka) ಪರಿಹಾರ ಸಾಮಗ್ರಿಗಳನ್ನು ಹೊತ್ತ ಪಾಕಿಸ್ತಾನದ (Pakistan flight) ನೆರವು ವಿಮಾನಕ್ಕೆ ಭಾರತ (India) ತ್ವರಿತ ಅನುಮತಿ ನೀಡಿದ್ದು, ಮಾನವೀಯ ಗುಣವೇ ಮೊದಲು ಎಂಬ ಸಂದೇಶ ಸಾರಿದೆ. ʼತನ್ನ ವಾಯುಪ್ರದೇಶವನ್ನು ಬಳಸಲು ಭಾರತ ಅನುಮತಿ ನಿರಾಕರಿಸಿದೆʼ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ “ಆಧಾರರಹಿತ ಮತ್ತು ದಾರಿ ತಪ್ಪಿಸುವ” ಹೇಳಿಕೆಗಳನ್ನು ಭಾರತ ದೃಢವಾಗಿ ತಿರಸ್ಕರಿಸಿದೆ.
ಭಾರತೀಯ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಕೋರಿ ಪಾಕಿಸ್ತಾನವು ಸೋಮವಾರ ಸುಮಾರು 13:00 ಗಂಟೆಗೆ (ಐಎಸ್ಟಿ) ಓವರ್ಫ್ಲೈಟ್ ವಿನಂತಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ವಿನಂತಿಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಭಾರತವು ಶೀಘ್ರ ವೇಗದಲ್ಲಿ ವಿನಂತಿಗೆ ಸಮ್ಮತಿ ನೀಡಿತು.
ಸೋಮವಾರ 17:30 ಗಂಟೆಗೆ ಅಧಿಕೃತ ರಹದಾರಿ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಅನುಮತಿ ನೀಡಲಾಯಿತು ಮತ್ತು ತಿಳಿಸಲಾಗಿದೆ. ಕನಿಷ್ಠ ನಾಲ್ಕು ಗಂಟೆಗಳ ನೋಟಿಸ್ ಅವಧಿಯೊಳಗೆ ಕ್ಲಿಯರೆನ್ಸ್ ಪ್ರಕ್ರಿಯೆಗೊಳಿಸಲಾಗಿದೆ. ಇನ್ನೊಂದೆಡೆ, ಭಾರತೀಯ ವಿಮಾನಯಾನ ಸಂಸ್ಥೆಗಳು ತನ್ನ ವಾಯುಪ್ರದೇಶವನ್ನು ಬಳಸುವುದನ್ನು ಪಾಕಿಸ್ತಾನ ನಿಷೇಧಿಸಿದೆ. ಆದರೆ ಇದನ್ನು ಪರಿಗಣಿಸದೆ, ಈ ಅನುಮತಿ ಸಂಪೂರ್ಣವಾಗಿ ಮಾನವೀಯ ನೆಲೆಯಲ್ಲಿ ನೀಡಲಾಗಿದೆ ಎಂದು ಭಾರತೀಯ ಅಧಿಕಾರಿಗಳು ಒತ್ತಿ ಹೇಳಿದರು.
Cyclone Ditwah: ದ್ವಿತಾ ಚಂಡಮಾರುತ: ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿ, ರಕ್ಷಣಾ ತಂಡ ಕಳುಹಿಸಿಕೊಟ್ಟ ಭಾರತ
ನೆರವು ವಿಮಾನಗಳಿಗೆ ವಾಯುಪ್ರದೇಶವನ್ನು ನೀಡಲು ಭಾರತ ನಿರಾಕರಿಸಿದೆ ಎಂದು ಪಾಕಿಸ್ತಾನದ ಕೆಲವು ಮಾಧ್ಯಮಗಳು ವರದಿ ಮಾಡಿದ ಹಿನ್ನೆಲೆಯಲ್ಲಿ ಭಾರತದ ಪ್ರತಿಕ್ರಿಯೆ ಬಂದಿದೆ. ಅಧಿಕಾರಿಗಳು ಈ ಆರೋಪಗಳನ್ನು “ಆಧಾರರಹಿತ ಮತ್ತು ದಾರಿತಪ್ಪಿಸುವ ವರದಿ” ಎಂದು ಸ್ಪಷ್ಟವಾಗಿ ನಿರಾಕರಿಸಿದರು. ದಿತ್ವಾ ಚಂಡಮಾರುತದಿಂದ ಶ್ರೀಲಂಕಾ ಭಾರಿ ಪ್ರವಾಹದಿಂದ ಬಳಲುತ್ತಿದೆ.