ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Axiom-4 Mission: ಹವಾಮಾನ ವೈಪರೀತ್ಯ; ಭಾರತೀಯ ಗಗನಯಾತ್ರಿಯನ್ನೊಳಗೊಂಡ ಆಕ್ಸಿಯಮ್ -4 ಮಿಷನ್ ಉಡಾವಣೆ ಮುಂದೂಡಿಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸುವ ಬಹು ನಿರೀಕ್ಷಿತ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಇದೀಗ ಮತ್ತೆ ಮುಂದೂಡಲಾಗಿದೆ. ಈ ಕುರಿತು ಸ್ಪೇಸ್‌ ಎಕ್ಸ್‌ ಕೂಡ ಮಾಹಿತಿಯನ್ನು ಹಂಚಿಕೊಂಡಿದೆ.

ಭಾರತೀಯ ಗಗನಯಾತ್ರಿಗಳ ಅಂತಾರಾಷ್ಟ್ರೀಯ ಬಾಹ್ಯಾಕಾಶ ಪ್ರವಾಸ ಮುಂದೂಡಿಕೆ

Profile Vishakha Bhat Jun 9, 2025 9:28 PM

ನವದೆಹಲಿ: ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸುವ ಬಹು ನಿರೀಕ್ಷಿತ ಆಕ್ಸಿಯಮ್ -4 ಮಿಷನ್ (Axiom-4 Mission) ಉಡಾವಣೆಯನ್ನು ಇದೀಗ ಮತ್ತೆ ಮುಂದೂಡಲಾಗಿದೆ. ಉಡಾವಣಾ ಪ್ರದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಿಳಿಸಿದೆ. ಇದು ಮೂರನೇ ಬಾರಿಗೆ ಮುಂದೂಡಲಾಗಿದೆ.

ಕಾರಿಡಾರ್‌ನಲ್ಲಿ ಹೆಚ್ಚಿನ ಗಾಳಿ ಬೀಸುತ್ತಿರುವುದರಿಂದ ಉಡಾವಣೆ ಆಕ್ಸಿಯಮ್ -4 ಮಿಷನ್ ಉಡಾವಣೆಯನ್ನು ಮುಂದೂಡಲಾಗಿದೆ. ಈ ಕುರಿತು ಸ್ಪೇಸ್‌ ಎಕ್ಸ್‌ ಕೂಡ ಮಾಹಿತಿಯನ್ನು ಹಂಚಿಕೊಂಡಿದೆ. ಉಡಾವಣೆಯನ್ನು ಈಗ ಜೂನ್ 11 ರ ಬುಧವಾರಕ್ಕೆ ಮರು ನಿಗದಿಪಡಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (Indian Space Research Organisation – ISRO) ಅಧ್ಯಕ್ಷ ಡಾ. ವಿ. ನಾರಾಯಣನ್ ಅವರ ಅಧಿಕೃತ ಹೇಳಿಕೆಯ ಪ್ರಕಾರ, ಮೂಲತಃ ಜೂನ್ 10 ರಂದು ಯೋಜಿಸಲಾಗಿದ್ದ ಈ ಮಿಷನ್ ಈಗ ಜೂನ್ 11, 2025 ರಂದು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಉಡಾವಣೆಯಾಗಲಿದೆ.

ಭಾರತ, ಅಮೆರಿಕ, ಪೋಲೆಂಡ್ ಮತ್ತು ಹಂಗೇರಿಯ ಗಗನಯಾತ್ರಿಗಳನ್ನು ಹೊತ್ತ ಆಕ್ಸ್ -4 ಮಿಷನ್ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಜೂನ್ 11, 2025 ರಂದು ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆಯಾಗಲಿದೆ. ಈ ಮಿಷನ್, ಆಕ್ಸಿಯಮ್ ಸ್ಪೇಸ್, ​​ನಾಸಾ, ಸ್ಪೇಸ್‌ಎಕ್ಸ್ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಳಗೊಂಡ ಸಹಯೋಗದ ಪ್ರಯತ್ನವಾಗಿದೆ. ರಾಕೇಶ್ ಶರ್ಮಾ ಅವರ 1984 ರ ಐತಿಹಾಸಿಕ ಪ್ರಯಾಣದ ನಂತರ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಬಳಿಕ ಭಾರತ ಈ ಪ್ರಯತ್ನಕ್ಕೆ ಕೈ ಹಾಕಿದೆ.

ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಲೆಕ್ಸ್ 39A ನಿಂದ ಫಾಲ್ಕನ್ 9 ರಾಕೆಟ್ ಮೂಲಕ ಉಡಾವಣೆ ಮಾಡಲಾದ ಹೊಸ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಆಕ್ಸಿಯಮ್ -4 ಸಿಬ್ಬಂದಿ ಪ್ರಯಾಣಿಸಲಿದ್ದಾರೆ. ಆರಂಭದಲ್ಲಿ ಈ ಕಾರ್ಯಾಚರಣೆಯನ್ನು ಮೇ 29 ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು ಮತ್ತು ಜೂನ್ 8 ಕ್ಕೆ ವಿಳಂಬವಾಯಿತು. ನಂತರ ತಾಂತ್ರಿಕ ಸಮಸ್ಯೆಗಳಿಂದಾಗಿ ಉಡಾವಣೆಯನ್ನು ಜೂನ್ 10 ಕ್ಕೆ ಮುಂದೂಡಲಾಯಿತು.

ಈ ಸುದ್ದಿಯನ್ನೂ ಓದಿ: Starship Rocket: ಉಡಾವಣೆಗೊಂಡ ಕೆಲವೇ ನಿಮಿಷದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಸ್ಫೋಟ; ಎಲಾನ್‌ ಮಸ್ಕ್‌ಗೆ ಮತ್ತೆ ಹಿನ್ನಡೆ

ಆಕ್ಸ್-4 ಮಿಷನ್ ಒಮ್ಮೆ ಆರಂಭವಾದರೆ, ಗಗನಯಾತ್ರಿಗಳು ISS ನಲ್ಲಿ 14 ದಿನಗಳವರೆಗೆ ಕಳೆಯುತ್ತಾರೆ, ಭಾರತೀಯ ಸಂಶೋಧಕರ ನೇತೃತ್ವದಲ್ಲಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತಾರೆ. ಈ ಪ್ರಯೋಗಗಳು ಸೂಕ್ಷ್ಮ ಗುರುತ್ವಾಕರ್ಷಣೆ, ಜೀವ ವಿಜ್ಞಾನ ಮತ್ತು ವಸ್ತು ವಿಜ್ಞಾನಗಳಲ್ಲಿ ತಿಳುವಳಿಕೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತವೆ ಮತ್ತು 30 ಕ್ಕೂ ಹೆಚ್ಚು ದೇಶಗಳ ವಿಜ್ಞಾನಿಗಳ ಸಹಯೋಗವನ್ನು ಒಳಗೊಂಡಿರುತ್ತವೆ.