ಇರಾನ್ ಯುದ್ಧದ ಮಧ್ಯೆ ಪಾಕಿಸ್ತಾನದಿಂದ ಭಾರತದ ವಿರುದ್ಧ ಸಂಚು; ಮುಟ್ಟಿ ನೋಡಿಕೊಳ್ಳುವಂತ ಎಚ್ಚರಿಕೆ ನೀಡಿದ ರಾಜನಾಥ್ ಸಿಂಗ್
Rajnath Singh sends a strong message: ಇರಾನ್ ಯುದ್ಧದ ನಡುವೆ ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. ಮಧ್ಯ ಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯ ಲಾಭವನ್ನು ಪಡೆದು ಪಾಕಿಸ್ತಾನ ತೊಂದರೆ ಕೊಡಲು ಪ್ರಯತ್ನಿಸಿದರೆ ಭಾರತದ ಪ್ರತಿಕ್ರಿಯೆ ಕಠಿಣವಾಗಿರುತ್ತದೆ ಎಂದು ಗುಡುಗಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ) -
ನವದೆಹಲಿ, ಏ. 2: ಇರಾನ್ ಯುದ್ಧದ ನಡುವೆ ಯಾವುದೇ ದುಸ್ಸಾಹಸಕ್ಕೆ ಪ್ರಯತ್ನಿಸದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದರು. 2025ರ ಭಯಾನಕ ಪಹಲ್ಗಾಮ್ ದಾಳಿ (Pahalgam attack) ಮತ್ತು ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ (Operation Sindhoor) ಮೊದಲ ವಾರ್ಷಿಕೋತ್ಸವಕ್ಕೆ ಕೆಲವೇ ದಿನಗಳಿರುವಾಗ ರಕ್ಷಣಾ ಸಚಿವರು ಈ ಸಂದೇಶ ರವಾನಿಸಿದರು.
ಕೇರಳದಲ್ಲಿ ಆಯೋಜಿಸಿದ ಸೈನಿಕ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ರಾಜನಾಥ್, ಮಧ್ಯಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯ ಲಾಭವನ್ನು ಪಡೆದು ಪಾಕಿಸ್ತಾನ ತೊಂದರೆ ಕೊಡಲು ಪ್ರಯತ್ನಿಸಿದರೆ ಭಾರತದ ಪ್ರತಿಕ್ರಿಯೆ ಕಠಿಣವಾಗಿರುತ್ತದೆ ಎಂದು ಗುಡುಗಿದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಪಾಕಿಸ್ತಾನವು ಒಂದು ರೀತಿಯ ದುಸ್ಸಾಹಸಕ್ಕೆ ಪ್ರಯತ್ನಿಸುವ ಸಾಧ್ಯತೆ ಇದೆ. ಅದು ಸಂಭವಿಸಿದಲ್ಲಿ ಭಾರತದ ಪ್ರತಿಕ್ರಿಯೆ ಕಠಿಣವಾಗಿರುತ್ತದೆ ಎಂದು ರಾಜನಾಥ್ ಸಿಂಗ್ ಖಡಕ್ ಸಂದೇಶ ನೀಡಿದರು. ಅಲ್ಲದೆ, ಆಪರೇಷನ್ ಸಿಂದೂರ್ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಒತ್ತಿ ಹೇಳಿದರು.
ಭಾರತದ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಈಗಲೂ ಆಶ್ರಯ ನೀಡುತ್ತಿದೆ
ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತೀಯ ಪಡೆ ಕೇವಲ 22 ನಿಮಿಷಗಳಲ್ಲಿ ಪಾಕಿಸ್ತಾನವನ್ನು ಹೇಗೆ ನೆಲಕ್ಕೆ ಕೊಡವಿತು ಎಂಬುದನ್ನು ರಾಜನಾಥ್ ನೆನಪಿಸಿದರು. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಲಷ್ಕರ್ ಭಯೋತ್ಪಾದಕರು 25 ಪ್ರವಾಸಿಗರನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಮೂರು ದಿನಗಳ ಕಾರ್ಯಾಚರಣೆಯಲ್ಲಿ, ಭಾರತವು ಪಾಕಿಸ್ತಾನದ ಒಳಭಾಗದ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಈ ವೇಳೆ ಪಾಕಿಸ್ತಾನದ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿತು. ಅವುಗಳಲ್ಲಿ ಕೆಲವು ಇನ್ನೂ ದುರಸ್ತಿ ಹಂತದಲ್ಲಿದೆ. ಮೇ 10ರಂದು ಪಾಕಿಸ್ತಾನ ಕದನ ವಿರಾಮವನ್ನು ಕೋರಿದ ನಂತರ ಯುದ್ಧವು ಕೊನೆಗೊಂಡಿತು.
ಉರಿ ದಾಳಿಯ ನಂತರದ ಸರ್ಜಿಕಲ್ ಸ್ಟ್ರೈಕ್ ಆಗಿರಲಿ, ಪುಲ್ವಾಮಾ ನಂತರದ ವಾಯುದಾಳಿಯಾಗಿರಲಿ ಅಥವಾ ಈಗ ಆಪರೇಷನ್ ಸಿಂದೂರ್ ಆಗಿರಲಿ, ನಾವು ಭಯೋತ್ಪಾದನೆಗೆ ಬಲವಾದ ಹೊಡೆತ ನೀಡಿದ್ದೇವೆ ಎಂದು ರಾಜನಾಥ್ ಹೇಳಿದರು.
ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಏಕೆ?
ಪಾಕಿಸ್ತಾನ ಯಾವ ರೀತಿಯ ದುಸ್ಸಾಹಸಕ್ಕೆ ಪ್ರಯತ್ನಿಸಬಹುದು ಅಥವಾ ಯಾವುದೇ ಗುಪ್ತಚರ ಮಾಹಿತಿ ಇದೆಯೇ ಎಂಬುದನ್ನು ರಕ್ಷಣಾ ಸಚಿವರು ಸ್ಪಷ್ಟಪಡಿಸಲಿಲ್ಲ. ದೆಹಲಿಯಿಂದ ಸೆರೆಹಿಡಿಯಲ್ಪಟ್ಟ ಪಾಕಿಸ್ತಾನಿ ನಾಗರಿಕರನ್ನು ಬಳಸಿಕೊಂಡು ಭಾರತವು ಇಸ್ಲಾಮಾಬಾದ್ ವಿರುದ್ಧ ಸುಳ್ಳು ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ವರದಿಯಾದ ಕೆಲವು ದಿನಗಳ ನಂತರ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಈ ದೇಶವೇ ಜಗತ್ತಿನ ಮೊದಲನೇ ಅತೀ ಮಾಲಿನ್ಯಯುಕ್ತ ದೇಶ! ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
ಅಮೆರಿಕ-ಇರಾನ್ ಯುದ್ಧದಲ್ಲಿ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕಾರ್ಯಾಚರಣೆ ಯೋಜಿಸಲಾಗಿದೆ ಎಂದು ಪಾಕಿಸ್ತಾನಿ ದಿನಪತ್ರಿಕೆ ʼದಿ ಡಾನ್ʼ ವರದಿ ಮಾಡಿದೆ. ಪಾಕಿಸ್ತಾನವು ಸಂಘರ್ಷದ ಸಂಭಾವ್ಯ ಮಧ್ಯವರ್ತಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದರೂ, ಇರಾನ್ ಇದನ್ನು ತಿರಸ್ಕರಿಸಿದೆ. ಇದರಿಂದ ಇಸ್ಲಾಮಾಬಾದ್ ಮುಖಭಂಗಕ್ಕೊಳಗಾಗಿದೆ.
ರಾಜನಾಥ್ ಅವರ ಎಚ್ಚರಿಕೆಯ ಹಿಂದೆ ಮತ್ತೊಂದು ಅಂಶವಿದೆ. ಅದನ್ನು ಕಡೆಗಣಿಸುವಂತಿಲ್ಲ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಂತೆಯೇ ಪಾಕಿಸ್ತಾನವು ಅಪ್ಘಾನಿಸ್ತಾನದ ಮೇಲೆ ಯುದ್ಧ ಪ್ರಾರಂಭಿಸಿತು. ಪಾಕಿಸ್ತಾನವು ಹಠಾತ್ತನೆ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಲು ಯಾವುದೇ ಪ್ರಚೋದನೆ ಇರಲಿಲ್ಲ. ನವೆಂಬರ್‌ನಿಂದ ದುರ್ಬಲವಾದ ಕದನ ವಿರಾಮ ಜಾರಿಯಲ್ಲಿತ್ತು. ಆದರೂ ಪಾಕಿಸ್ತಾನ ಅಫ್ಘಾನಿಸ್ತಾನದೊಂದಿಗೆ ಮುಕ್ತ ಯುದ್ಧ ಘೋಷಿಸಿತು.