‘'ಬ್ಯಾಟ್‌ಮ್ಯಾನ್‌ಗೂ ನ್ಯಾಯ ಬೇಕು": ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸೂಪರ್‌ಹೀರೋ; ವಿಡಿಯೊ ಇಲ್ಲಿದೆ
Viral Video: ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಶೇಷ ವೇಷಧಾರಿಯೊಬ್ಬ ಗಮನ ಸೆಳೆದಿದ್ದಾನೆ. ಹೌದು, ಬ್ಯಾಟ್‌ಮ್ಯಾನ್‌ನಂತೆ ವೇಷ ಧರಿಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವ ಯುವಕನ ವಿಡಿಯೊವೊಂದು ಭಾರಿ ವೈರಲ್ ಆಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಬ್ಯಾಟ್‌ಮ್ಯಾನ್ ವೇಷಧಾರಿ ಕಾಣಿಸಿಕೊಂಡಿದ್ದಾನೆ.
ಇಂದೋರ್‌ನ ನೀಟ್ ಪ್ರತಿಭಟನೆಯಲ್ಲಿ ಗಮನ ಸೆಳೆದ ಬ್ಯಾಟ್‌ಮ್ಯಾನ್ -
ಭೋಪಾಲ್, ಜು. 22: ನೀಟ್ ಪರೀಕ್ಷಾ ಅಕ್ರಮ ವಿರುದ್ಧ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಇದರ ಜ್ವಾಲೆ ದೇಶದ ವಿವಿಧ ಕಡೆಗಳಿಗೂ ಹಬ್ಬಿದ್ದು, ವಿದ್ಯಾರ್ಥಿಗಳ ಪ್ರತಿಭಟನೆ ಭುಗಿಲೆದ್ದಿದೆ. ಈ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ, ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದ ಹೋರಾಟದಲ್ಲಿ ವಿಶೇಷ ವೇಷಧಾರಿಯೊಬ್ಬ ಗಮನ ಸೆಳೆದಿದ್ದಾನೆ. ಹೌದು, ಬ್ಯಾಟ್‌ಮ್ಯಾನ್‌ನಂತೆ ವೇಷ ಧರಿಸಿ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತಿರುವ ಸೂಪರ್ ಹೀರೋನ ವಿಡಿಯೊವೊಂದು ಭಾರಿ ವೈರಲ್ (Viral Video) ಆಗಿದೆ. ನಗರದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಆಯೋಜಿಸಿದ್ದ ಈ ಪ್ರತಿಭಟನೆಯಲ್ಲಿ ಸ್ಲೋಗನ್ ಹಿಡಿದು ಘೋಷಣೆ ಕೂಗುತ್ತಿದ್ದವರ ನಡುವೆ ಬ್ಯಾಟ್‌ಮ್ಯಾನ್ ಕಾಣಿಸಿಕೊಂಡಿದ್ದಾನೆ.
ನೀಟ್ ಪರೀಕ್ಷೆಯಲ್ಲಾದ ಅಕ್ರಮವನ್ನು ಖಂಡಿಸಿ ಇಂದೋರ್ ನಗರದಾದ್ಯಂತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆಯನ್ನು ಆಯೋಜಿಸಿದ್ದರು. ಪರೀಕ್ಷಾ ನಿಯಮದಲ್ಲಿ ಬದಲಾವಣೆ ತರುವಂತೆ ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು. ಈ ಗಂಭೀರ ಹೋರಾಟಕ್ಕೆ ಸೂಪರ್‌ಹೀರೋ ಎಂಟ್ರಿ ವಿಶೇಷವಾಗಿತ್ತು.
ವಿಡಿಯೊ ನೋಡಿ:
ವೈರಲ್ ಆದ ದೃಶ್ಯದಲ್ಲಿ ಬ್ಯಾಟ್‌ಮ್ಯಾನ್ ವೇಷಧಾರಿ ಪ್ರತಿಭಟನಾ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವುದು ಹಾಗೂ ಫೋಟೊಕ್ಕೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಗಂಭೀರವಾದ ಹೋರಾಟಕ್ಕೆ ಈ ಸೂಪರ್‌ಹೀರೋ ಎಂಟ್ರಿ ವಿಶೇಷ ಮೆರುಗು ನೀಡಿತು. ಸದ್ಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವ ಸೂಪರ್ ಹೀರೋ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.
ಮನೆ ಬಾಗಿಲಿನ ಉಚಿತ ರಕ್ತ ಪರೀಕ್ಷೆ ಸೇವೆಗೆ ಅಮೆರಿಕದ ಮಹಿಳೆ ಮೆಚ್ಚುಗೆ
ಅನೇಕರು ಬ್ಯಾಟ್‌ಮ್ಯಾನ್ ಮುಖವಾಡದ ಹಿಂದಿನ ವ್ಯಕ್ತಿಯ ಗುರುತಿನ ಬಗ್ಗೆ ಕುತೂಹಲ ತೋರಿದ್ದಾರೆ. ಇನ್ನೊಂದೆಡೆ ಈ ಕ್ರಿಯಾಶೀಲತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದೋರ್‌ನ ಈ ಬ್ಯಾಟ್‌ಮ್ಯಾನ್ ಪ್ರತಿಭಟನೆ ಈಗ ಭಾರೀ ಟ್ರೆಂಡ್ ಸೃಷ್ಟಿಸಿದೆ. ನೆಟ್ಟಿಗರೊಬ್ಬರು, "ಬ್ಯಾಟ್‌ಮ್ಯಾನ್ ಕೂಡ ನ್ಯಾಯವನ್ನು ಬಯಸುತ್ತಾರೆ" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಪೊಲೀಸರು ಲಾಠಿ ಚಾರ್ಜ್ ಮಾಡಿದರೆ ಬ್ಯಾಟ್‌ಮ್ಯಾನ್ ಓಟ ಹೇಗಿರಬಹುದುʼʼ ಎಂದು ತಮಾಷೆ ಮಾಡಿದ್ದಾರೆ.