Viral Video: ಸುಪ್ರೀಂಕೋರ್ಟ್‌ನ ಗಾರ್ಡನ್‍ನಿಂದ ಗುಲಾಬಿ ಹೂ ಕಿತ್ತ ಮಹಿಳೆ; ಪ್ರಶ್ನಿಸಿದ್ದಕ್ಕೆ ಹೇಳಿದ್ದೇನು? ವಿಡಿಯೊ ವೈರಲ್
ಮಹಿಳೆಯೊಬ್ಬಳು ಸುಪ್ರೀಂಕೋರ್ಟ್ ಎದುರಿಗಿನ ಗಾರ್ಡನ್‍ನಲ್ಲಿ ಹೂವುಗಳನ್ನು ಕಿತ್ತುಕೊಂಡಿದ್ದಲ್ಲದೇ ಅದನ್ನು ಗಮನಿಸಿದವರು ಆಕೆಯ ಕೃತ್ಯವನ್ನು ಪ್ರಶ್ನಿಸಿದಾಗ, ಅವಳು ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡು ಪ್ರಶ್ನಿಸಿದವರ ಜೊತೆ ವಾದಕ್ಕಿಳಿದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಭಾರತದ ಸುಪ್ರೀಂಕೋರ್ಟ್ ಈ ಬಾರಿ ವಿಚಿತ್ರ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚಿನ ಘಟನೆಯೊಂದರಲ್ಲಿ, ಮಹಿಳೆಯೊಬ್ಬಳು ಸುಪ್ರೀಂ ಕೋರ್ಟ್ ಎದುರಿಗಿನ ಗಾರ್ಡನ್‍ನಲ್ಲಿ ಹೂವುಗಳನ್ನು ಕಿತ್ತುಕೊಂಡಿದ್ದಾಳೆ. ಆಕೆಯ ಕೃತ್ಯವನ್ನು ಪ್ರಶ್ನಿಸಿದಾಗ, ಅವಳು ಅದಕ್ಕೆ ಪಶ್ಚಾತ್ತಾಪ ತೋರದೇ ತನ್ನ ಕೃತ್ಯಗಳನ್ನು ಸಮರ್ಥಿಸಿಕೊಂಡಿದ್ದಾಳೆ ಮತ್ತು ಹೂವುಗಳನ್ನು ಕೀಳುವುದನ್ನು ಪ್ರಶ್ನಿಸಿದವರ ಜೊತೆ ವಾದಕ್ಕಿಳಿದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ಮಹಿಳೆ ಕೆಲವು ಬ್ಯಾಗ್‍ಗಳನ್ನು ಹಿಡಿದುಕೊಂಡು ಗಾರ್ಡನ್‍ನಲ್ಲಿದ್ದ ಹೂಗಳನ್ನು ಕಿತ್ತಿದ್ದಾಳಂತೆ. ಆಗ ಅಲ್ಲಿದ್ದ ಜನರು ಈ ಬಗ್ಗೆ ಪ್ರಶ್ನಿಸಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳದ ಮಹಿಳೆ ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ "ಸುಪ್ರೀಂಕೋರ್ಟ್‍ನಲ್ಲಿ ಅನೇಕ ಗಂಭೀರ ವಿಷಯಗಳು ಹಾಗೇ ಬಾಕಿ ಉಳಿದಿವೆ. ಜನರು ಕೊಲೆಗಳನ್ನು ಮಾಡುತ್ತಾರೆ, ಮೋಸ ಮಾಡುತ್ತಾರೆ. ಆದರೂ ಯಾರೂ ಮಾತನಾಡುವುದಿಲ್ಲ. ಆದರೆ ನಾನು ಹೂ ಎಲ್ಲರೂ ಗಲಾಟೆ ಮಾಡುತ್ತಾರೆ ಎಂದು ಹೇಳುತ್ತಾ ಜನರಿಗೆ ಬೈದು ಅಲ್ಲಿಂದ ಹೋಗಿದ್ದಾಳೆ.
ಮಹಿಳೆ ಹೂವು ಕೀಳುತ್ತಿರುವ ವಿಡಿಯೊ ಇಲ್ಲಿದೆ ನೋಡಿ...
सुप्रीम कोर्ट के लॉन में खिले गुलाब के फूल को एक महिला जल्दी जल्दी तोड़ रही थी! वहां मौजूद किसी ने टोक दिया कि क्यों तोड़ रही हैं!
— Prabhakar Kumar Mishra (@PMishra_Journo) April 2, 2025
उसके बाद महिला भड़क गईं। चिल्लाने लगीं - सुप्रीम कोर्ट में मामले पेंडिंग हैं कोई नहीं बोलता! लोग मर्डर कर रहे हैं, दिल तोड़ रहे हैं.. कोई नहीं… pic.twitter.com/0U0ks4AMpX
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ಈ ಘಟನೆಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೊ ನೋಡಿದ ನೆಟ್ಟಿಗರು ನ್ಯಾಯಾಲಯದಲ್ಲಿರುವ ಅನೇಕ ಪ್ರಕರಣಗಳಿಗಿಂತ ಈ ಪ್ರಕರಣ , ಹೆಚ್ಚು ಗಂಭೀರವಾಗಿದೆ ಎಂದು ತಮಾಷೆ ಮಾಡಿದ್ದಾರೆ. ಕೆಲವರು ಅವಳ ಸಮರ್ಥನೆಯನ್ನು ಸರಿ ಎಂದು ಹೇಳಿದ್ದಾರೆ, ಇತರರು ಕೋರ್ಟ್ ಗಾರ್ಡನ್‍ನಿಂದ ಹೂವುಗಳನ್ನು ಕೀಳುವುದನ್ನು ಟೀಕಿಸಿದ್ದಾರೆ. ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸುದ್ದಿಯನ್ನೂ ಓದಿ:Viral News: ಘಿಬ್ಲಿ ಟ್ರೆಂಡ್‍ನಲ್ಲಿ ಕಾಣಿಸಿಕೊಂಡ ಮಹಾತ್ಮ ಗಾಂಧಿ; ನೆಟ್ಟಿಗರು ಫುಲ್ ಶಾಕ್!
ಈ ಹಿಂದೆ ಸುಪ್ರೀಂಕೋರ್ಟ್ ಸೋಶಿಯಲ್ ಮೀಡಿಯಾ ವೇದಿಕೆಗಳ ದುರುಪಯೋಗದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದು, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ತಪ್ಪಾದ ಮತ್ತು ಆಧಾರರಹಿತ ಹೇಳಿಕೆಗಳನ್ನು ಹರಡುವುದನ್ನು ಕೋರ್ಟ್ ಖಂಡಿಸಿತ್ತು.ತೀರ್ಪಿಗಾಗಿ ಕಾಯ್ದಿರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ದಾರಿತಪ್ಪಿಸುವ ಪೋಸ್ಟ್ ಮಾಡಿದ ಅಸ್ಸಾಂ ಶಾಸಕ ಕರೀಮ್ ಉದ್ದೀನ್ ಬರ್ಭುಯಾ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ಜನಸಾಮಾನ್ಯರಲ್ಲಿ ತಪ್ಪು ಮಾಹಿತಿಯನ್ನು ಬಿತ್ತುವ ಸೋಶಿಯಲ್ ಮೀಡಿಯಾ ದುರುಪಯೋಗದ ಹೆಚ್ಚುತ್ತಿರುವ ಪ್ರವೃತ್ತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು.