ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Extreme Poverty Free State: 'ಕಡು ಬಡತನ ಮುಕ್ತ ರಾಜ್ಯ'- ಕೇರಳ ಸರ್ಕಾರ ಅಧಿಕೃತ ಘೋಷಣೆ

Kerala is a Extreme Poverty Free State: ಕೇರಳ ಕಡು ಬಡತನ ಮುಕ್ತ ರಾಜ್ಯವೆಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೂಲಕ ಒಂದು ಐತಿಹಾಸಿಕ ಹೆಜ್ಜೆಯನ್ನು ಕೇರಳ ಇಟ್ಟಿದೆ. ಕೇರಳ ರಾಜ್ಯದ ಜನ್ಮ ದಿನವಾದ ನವೆಂಬರ್ 1ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳವನ್ನು ಕಡು ಬಡತನ ಮುಕ್ತ ರಾಜ್ಯ ಎಂದು ಅಧಿಕೃತವಾಗಿ ಈ ಬೃಹತ್ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ತೀವ್ರ ಬಡತನ ನಿರ್ಮೂಲನೆಯು ವಿವಿಧ ಯೋಜನೆಯು ಕೆಳಮಟ್ಟದ ಜನರನ್ನು ತಲುಪಿರುವುದಕ್ಕೆ ಸಾಕ್ಷಿಯಾಗಿದೆ. ಈ ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗಿತ್ತು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಕೇರಳ ಇನ್ಮುಂದೆ ಕಡು ಬಡತನ ಮುಕ್ತ ರಾಜ್ಯ!

-

ತಿರುವನಂತಪುರಂ: ಕೇರಳ ರಾಜ್ಯವನ್ನು ಕಡು ಬಡತನ ಮುಕ್ತ ರಾಜ್ಯವೆಂದು (Extreme Poverty Free State) ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದು ಕೇರಳ ಸರ್ಕಾರ ಅನುಷ್ಠಾನಗೊಳಿಸಿರುವ ತೀವ್ರ ಬಡತನ ನಿರ್ಮೂಲನಾ ಯೋಜನೆಯ ( Extreme Poverty Eradication Project ) ಫಲಶ್ರುತಿ ಎಂದೇ ಪರಿಗಣಿಸಲಾಗುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Chief Minister Pinarayi Vijayan) ಅವರು ಕೇರಳ ರಾಜ್ಯದ ಸಂಸ್ಥಾಪನಾ ದಿನವಾದ ನವೆಂಬರ್ 1ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳವನ್ನು ಅತ್ಯಂತ ಹೆಚ್ಚಿನ ಬಡತನದಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದ ಭಾರತದ ಮೊದಲ ರಾಜ್ಯವೆಂದು ಔಪಚಾರಿಕವಾಗಿ ಘೋಷಿಸಿದರು. ಈ ಮೂಲಕ ಕೇರಳ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ರಾಜ್ಯವಾಗಿ ಗುರುತಿಸಲ್ಪಡಲಿದೆ.

ಕೇರಳ ರಾಜ್ಯಕ್ಕೆ ಇದೊಂದು ಮೈಲು. ತಿರುವನಂತಪುರಂನಲ್ಲಿ ನಡೆಯುವ ರಾಜ್ಯಮಟ್ಟದ ಸಮಾರಂಭದಲ್ಲಿ ಈ ಬೃಹತ್ ಘೋಷಣೆಯು ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರವು 2021 ರಲ್ಲಿ ಪ್ರಾರಂಭಿಸಿದ ತೀವ್ರ ಬಡತನ ನಿರ್ಮೂಲನಾ ಯೋಜನೆಯ (ಇಪಿಇಪಿ) ಫಲಶ್ರುತಿಯಾಗಿದೆ. ಈ ಸಾಧನೆಯು ಕೇರಳವನ್ನು ವಿಶ್ವಸಂಸ್ಥೆಯು ತೀವ್ರ ಬಡತನವಿಲ್ಲದ ರಾಜ್ಯವಾಗಿ ಗುರುತಿಸುವಂತೆ ಮಾಡಿದೆ.

ಏನಿದು ಇಪಿಇಪಿ ಯೋಜನೆ?

ಕೇರಳ ರಾಜ್ಯವನ್ನು ತೀವ್ರ ಬಡತನದಿಂದ ಮುಕ್ತಗೊಳಿಸುವಂತೆ ಮಾಡಲು ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರವು 2021 ರಲ್ಲಿ ತೀವ್ರ ಬಡತನ ನಿರ್ಮೂಲನಾ ಯೋಜನೆಯನ್ನು ಜಾರಿಗೆ ಗೊಳಿಸಿತ್ತು.

ಇದನ್ನೂ ಓದಿ: Sabarimala Gold Theft: ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇರಳ ಸಚಿವ ಭಾಗಿ; ಬಿಜೆಪಿ ಆರೋಪ



ಇದಕ್ಕಾಗಿ ಆರಂಭದಲ್ಲಿ ಸ್ಥಳೀಯ ಸ್ವ-ಸರ್ಕಾರಿ ಸಂಸ್ಥೆಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಹಯೋಗದೊಂದಿಗೆ ಮಹಿಳಾ ಗುಂಪು ಕುಟುಂಬಶ್ರೀ ಅನ್ನು ರಚಿಸಿದ್ದು, ಇದರ ಸಹಯೋಗದೊಂದಿಗೆ ಬೃಹತ್ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸಿದ್ಧಪಡಿಸಲಾಗಿತ್ತು. ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ 64,006 ಕುಟುಂಬಗಳನ್ನು ಗುರುತಿಸಿ ಈ ಕುಟುಂಬಗಳ ಹಣಕಾಸಿನ ಮಾಪನಗಳು ಮಾತ್ರವಲ್ಲದೆ ನಾಲ್ಕು ಪ್ರಮುಖ ಅಂಶಗಳಾದ ಆಹಾರ ಭದ್ರತೆ, ಸುರಕ್ಷಿತ ಆಶ್ರಯ, ಮೂಲ ಆದಾಯ ಮತ್ತು ಆರೋಗ್ಯ ಸ್ಥಿತಿಗಳನ್ನು ಸಮೀಕ್ಷೆಗೆ ಪರಿಗಣಿಸಿಲಾಗಿದೆ. ಸಾಮಾನ್ಯ ಕಲ್ಯಾಣ ಯೋಜನೆಗಳಿಂದ ದೂರ ಉಳಿದಿದ್ದ ಬಡವರನ್ನು ನಿಖರವಾಗಿ ಗುರುತಿಸಿ ನಕ್ಷೆ ತಯಾರಿಸಲಾಗಿದೆ.

ಬಳಿಕ ರಾಜ್ಯವು ಪ್ರತಿ ಕುಟುಂಬಕ್ಕೆ ಕೆಲವು ಯೋಜನೆಗಳನ್ನು ನೇರವಾಗಿ ತಲುಪಿಪಿಸಲು ಕ್ರಮ ಕೈಗೊಂಡಿತ್ತು. ಯೋಜನೆಯ ವಿಶಿಷ್ಟ ಲಕ್ಷಣವೆಂದರೆ ಸಮಗ್ರ ಬೆಂಬಲವನ್ನು ಒದಗಿಸುವ ಸೂಕ್ಷ್ಮ ಯೋಜನೆಗಳು. ಇದು ವಿವಿಧ ರಾಜ್ಯ ಮತ್ತು ಕೇಂದ್ರ ಯೋಜನೆಗಳನ್ನು ಸಂಯೋಜಿಸಿ ತಯಾರಿಸಲಾಗಿತ್ತು.

ಸರ್ಕಾರದ ಅಂಕಿಅಂಶಗಳ ಪ್ರಕಾರ 10,944 ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಅಥವಾ ನವೀಕರಣ, 439 ಭೂರಹಿತ ಕುಟುಂಬಗಳಿಗೆ ಭೂಮಿಯನ್ನು ಒದಗಿಸಲು, ಸಾವಿರಾರು ಕುಟುಂಬಗಳಿಗೆ ಜೀವನೋಪಾಯಕ್ಕೆ ಅಗತ್ಯ ಬೆಂಬಲ, ವೈದ್ಯಕೀಯ ನೆರವು ಸೇರಿದಂತೆ ಹಲವು ರೀತಿಯ ಅಗತ್ಯಗಳನ್ನು ಒದಗಿಸಲು ಗುರುತು ಚೀಟಿಯನ್ನು ಮಾಡಿ ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಪಡೆಯುವುದನ್ನು ಸುಲಭಗೊಳಿಸುವಂತೆ ಮಾಡಲಾಯಿತು.

ಇದನ್ನೂ ಓದಿ: Lionel Messi: ಅರ್ಜೆಂಟೀನಾ ತಂಡದ ಕೇರಳ ಭೇಟಿ ಮತ್ತೆ ಮುಂದಕ್ಕೆ

64,006 ಕುಟುಂಬಗಳ ಪ್ರಸ್ತುತ ಸ್ಥಿತಿಗತಿಯನ್ನು ವಿವರಿಸುವ ಪಾರದರ್ಶಕ ವರದಿ ಬಿಡುಗಡೆಗೆ ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ನಡುವೆಯೂ ತೀವ್ರ ಬಡತನದಲ್ಲಿರುವವರ ಜೀವನ ಮಟ್ಟವನ್ನು ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಕೇರಳ ಸರ್ಕಾರ ಸಮರ್ಥಿಸಿಕೊಂಡಿದೆ. ಇದಕ್ಕೆ ತೀವ್ರ ಬಡತನ ನಿರ್ಮೂಲನಾ ಯೋಜನೆಯೇ ಕಾರಣ ಎಂದು ಅದು ಹೇಳಿದೆ. ಈ ನಿಟ್ಟಿನಲ್ಲಿ 2021ರಲ್ಲಿ ಪ್ರಾರಂಭವಾದ ಯೋಜನೆಯ ಗುರಿಯನ್ನು ಕೇವಲ ಐದು ವರ್ಷಗಳಲ್ಲಿ ತಲುಪಿರುವುದು ಕೇರಳ ರಾಜ್ಯದ ಐತಿಹಾಸಿಕ ವಿಜಯವೆಂದೇ ಹೇಳಬಹುದು.