Viral Video: ಯುವತಿಯನ್ನು ಕೂರಿಸಿಕೊಂಡು ಡೆಡ್ಲಿ ವ್ಹೀಲಿಂಗ್! ಈ ಹುಚ್ಚಾಟದ ವಿಡಿಯೊ ಇಲ್ಲಿದೆ
Dangerous Wheeling Stunt: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಲು ಕೆಲವರು ತಮ್ಮ ಜೀವವನ್ನು ಪಣಕ್ಕಿಡುತ್ತಾರೆ. ಜೀವನ ದುರಂತ ಅಂತ್ಯ ಮಾಡಿಕೊಂಡವರು ಹಲವರಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ರಸ್ತೆ ಮಧ್ಯ ಅಪಾಯಕಾರಿ ವ್ಹೀಲಿಂಗ್ ಪ್ರದರ್ಶಿಸುವುದನ್ನು ಕಾಣಬಹುದು. ಬೈಕ್ ಸವಾರ ತನ್ನ ಹಿಂದೆ ಯುವತಿಯನ್ನು ಕೂರಿಸಿಕೊಂಡು ಸ್ಟಂಟ್ ಮಾಡಿದ್ದಾನೆ. ಬೈಕ್ ಅನ್ನು ವೇಗವಾಗಿ ಚಲಾಯಿಸಿದ್ದಲ್ಲದೆ, ವ್ಹೀಲಿಂಗ್ ಮಾಡಿದ್ದಾನೆ. ಈ ವೇಳೆ ಬೈಕ್ ನಿಯಂತ್ರಣ ತಪ್ಪಿದೆ. ಇಬ್ಬರೂ ರಸ್ತೆಮಧ್ಯ ಬಿದ್ದಿದ್ದಾರೆ. ಎದೆಝಲ್ಲೆನ್ನಿಸುವ ವಿಡಿಯೊ ನೋಡಿದ ನೆಟ್ಟಿಗರು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
-
Priyanka P
Nov 1, 2025 4:30 PM
ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತರಾಗಲು ಕೆಲವರು ಏನೂ ಮಾಡಲು ಹೆದರುವುದಿಲ್ಲ. ಕ್ಷಣಿಕ ಸಂತೋಷಕ್ಕಾಗಿ ಜೀವನವನ್ನು ದುರಂತ ಅಂತ್ಯ ಮಾಡಿಕೊಂಡವರು ಬಹಳಷ್ಟು ಮಂದಿ ಇದ್ದಾರೆ. ತಮ್ಮ ಸುರಕ್ಷತೆ ಮಾತ್ರವಲ್ಲ, ಏನೂ ಮಾಡದವರ ಜೀವನಕ್ಕೂ ಅಪಾಯ ತರುವವರು ಹಲವರಿದ್ದಾರೆ. ಇತ್ತೀಚೆಗೆ, ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ (wheeling) ಅನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Viral Video) ಹರಿದಾಡುತ್ತಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ, ಒಬ್ಬ ಯುವಕ ಬೈಕ್ ಚಲಾಯಿಸಿದ್ದಾನೆ. ಆತನ ಹಿಂದೆ ಯುವತಿಯೊಬ್ಬಳು ಕುಳಿತಿದ್ದಾಳೆ. ರಸ್ತೆ ಮಧ್ಯದಲ್ಲಿ ಬೈಕ್ ಚಲಾಯಿಸುತ್ತಾ ಆತ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಾನೆ. ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ. ಯುವಕ ಹಾಗೂ ಯುವತಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ದೃಶ್ಯ ನೋಡುಗರಿಗೆ ಭಯನಾಕವೆನಿಸುತ್ತದೆ. ಅಲ್ಲಿಗೆ ವಿಡಿಯೊ ಕೊನೆಗೊಂಡಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಖ್ಯಾತಿಗಾಗಿ ಇಂತಹ ಅಪಾಯಕರ ಸ್ಟಂಟ್ ಮಾಡುವುದರಿಂದ ತಮ್ಮ ಜೀವನ ಮತ್ತು ಇತರರ ಸುರಕ್ಷತೆಗೂ ಭಂಗ ತರುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ.
ವಿಡಿಯೊದಲ್ಲಿ, ಯುವಕನು ವೇಗದಲ್ಲಿ ತನ್ನ ಬೈಕ್ ಅನ್ನು ಚಲಾಯಿಸುತ್ತಿರುವಂತೆ ಕಾಣಿಸುತ್ತದೆ. ಆತನ ಹಿಂದಿನ ಆಸನದಲ್ಲಿ ಯುವತಿಯೊಬ್ಬಳು ಕುಳಿತಿದ್ದಾಳೆ. ಯುವಕ ತನ್ನ ಬೈಕ್‍ನ ಮುಂದಿನ ಚಕ್ರವನ್ನು ನೆಲದಿಂದ ಎತ್ತಿ, ಹಿಂದಿನ ಚಕ್ರದ ಮೇಲೆ ಹಲವಾರು ಮೀಟರ್‌ಗಳ ಕಾಲ ಬೈಕ್ ಅನ್ನು ಚಲಾಯಿಸಿದ್ದಾನೆ. ಯುವತಿ ಕೂಡ ಇದಕ್ಕೆ ಸಹಕರಿಸುತ್ತಾ ಖುಷಿಯಿಂದ ಕೈಯನ್ನು ಮೇಲಕ್ಕೆತ್ತಿದ್ದಾಳೆ. ಬೈಕ್ ಒಂದೇ ಚಕ್ರದ ಮೇಲೆ ಅಪಾಯಕರವಾಗಿ ಚಲಿಸುತ್ತಿದ್ದರೂ, ಇಬ್ಬರೂ ಆನಂದಿಸಿದ್ದಾರೆ.
ಕೆಲವು ಕ್ಷಣಗಳ ನಂತರ, ಸವಾರನು ಬೈಕನ್ನು ಇಳಿಸಲು ಪ್ರಯತ್ನಿಸಿದಾಗ, ಅದು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ ಅವರ ಹಿಂದೆಯೇ ಬಂದ ಮತ್ತೊಂದು ಬೈಕ್ ಕೂಡ ಡಿಕ್ಕಿ ಹೊಡೆದಿದೆ. ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಬೈಕರ್‌ಗಳು ಮೂರ್ಖರು ಎಂಬುದಕ್ಕೆ ಯಾವುದೇ ಪುರಾವೆಯ ಅಗತ್ಯವಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ವಿಡಿಯೊ ವೀಕ್ಷಿಸಿ:
72% Bikers are idiots
— Kreately.in (@KreatelyMedia) October 31, 2025
No proof needed
😭
pic.twitter.com/YpZ4aGrC6G
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ, ಸಾವಿರಾರು ಕಾಮೆಂಟ್‌ಗಳು ಬಂದಿವೆ. ಸಾಮಾಜಿಕ ಮಾಧ್ಯಮದ ಗಮನ ಸೆಳೆಯುವ ಉದ್ದೇಶದಿಂದ ಅಪಾಯಕಾರಿ ಸಾಹಸಗಳನ್ನು ಮಾಡುವ ಪ್ರವೃತ್ತಿಯನ್ನು ನೆಟ್ಟಿಗರು ಖಂಡಿಸಿದರು. ವ್ಹೀಲಿಂಗ್ ಮಾಡುವ ಮೂಲಕ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯುವಕರು ಇದನ್ನು ಒಂದು ಸಾಹಸವೆಂದು ಪರಿಗಣಿಸುತ್ತಾರೆ. ಇದು ತಮ್ಮ ಕುಟುಂಬಗಳಿಗೆ ತರುವ ನೋವು ಮತ್ತು ತೊಂದರೆಯನ್ನು ಅರಿತುಕೊಳ್ಳದೆ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಹಿಂದೆಲ್ಲಾ ಜನರು ಖ್ಯಾತಿಗಾಗಿ ಶ್ರಮಿಸುತ್ತಿದ್ದರು. ಈಗ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಮೂಲಕ ಖ್ಯಾತರಾಗಲು ಬಯಸುತ್ತಾರೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಬೈಕ್ ಸವಾರರ ಜೀವಕ್ಕೆ ಅಪಾಯವನ್ನುಂಟುಮಾಡುವ ಅಪಾಯಕಾರಿ ಮತ್ತು ಅಜಾಗರೂಕ ಸಾಹಸಗಳು ಹೆಚ್ಚುತ್ತಿವೆ. ರಸ್ತೆ ಸುರಕ್ಷತೆ ಮತ್ತು ಜವಾಬ್ದಾರಿಯ ಕೊರತೆಯು ಎದ್ದು ಕಾಣುತ್ತದೆ ಎಂದು ಮಗದೊಬ್ಬರು ಬರೆದಿದ್ದಾರೆ. ಚಾಲನೆ ಮಾಡುವಾಗ ವಿಡಿಯೊಗಳನ್ನು ಚಿತ್ರೀಕರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ವ್ಯಕ್ತಿಯೊಬ್ಬರು ಒತ್ತಾಯಿಸಿದರು.