Love Jihad: ಲವ್ ಜಿಹಾದ್ ವಿರುದ್ಧ ಶೀಘ್ರವೇ ಕಠಿಣ ಕಾನೂನು? ಸಪ್ತ ಸದಸ್ಯ ಸಮಿತಿ ರಚನೆ
ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಿ ಇದೊಂದು ಪಿಡುಗು ಅನ್ನುವಂತೆ ಕಾಡುತ್ತಿದೆ. ಅದೆಷ್ಟೋ ಯುವತಿಯರು ಬಲವಂತದ ಮತಾಂತರಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಈ ಹಿನ್ನೆಲೆ ಈ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ. ಅದಕ್ಕಾಗಿಯೇ ಏಳು ಜನರ ಸಮಿತಿಯನ್ನೂ ರಚಿಸಿದೆ.

ಲವ್ ಜಿಹಾದ್

ಮುಂಬೈ: ಬಲವಂತದ ಮತಾಂತರ ಮತ್ತು ಲವ್ ಜಿಹಾದ್(Love Jihad) ಪ್ರಕರಣಗಳ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಜಾರಿಗೊಳಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ಏಳು ಸದಸ್ಯರ ಸಮಿತಿಯನ್ನೂ ರಚಿಸಿದೆ. ಈ ಸಮಿತಿಯಲ್ಲಿ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ವರ್ಮಾ ನೇತೃತ್ವದ ಈ ಸಮಿತಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ವ್ಯವಹಾರಗಳು, ಕಾನೂನು ಮತ್ತು ನ್ಯಾಯಾಂಗ, ಸಾಮಾಜಿಕ ನ್ಯಾಯ, ವಿಶೇಷ ನೆರವು ಮತ್ತು ಗೃಹ ಇಲಾಖೆಗಳಂತಹ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ, ಬಲವಂತದ ಮತಾಂತರ ಮತ್ತು "ಲವ್ ಜಿಹಾದ್" ಗೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಕ್ರಮಗಳನ್ನು ಸಮಿತಿಯು ಸೂಚಿಸಲಿದ್ದು, ಇದು ಇತರ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಸಹ ಪರಿಶೀಲಿಸಿ ಕಾನೂನು ನಿಬಂಧನೆಗಳನ್ನು ಶಿಫಾರಸು ಮಾಡಲಿದೆ.
ಸಮಿತಿ ರಚನೆ ಬಗ್ಗೆ ಸರ್ಕಾರದ ನಿರ್ಧಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ, ಎನ್‌ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಳೆ "ಮದುವೆಯಾಗುವುದು ಅಥವಾ ಪ್ರೀತಿಸುವುದು ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ. ಸರ್ಕಾರವು ನಿಜವಾದ ಸಮಸ್ಯೆಗಳ ಮೇಲೆ ಗಮನಹರಿಸಬೇಕೆಂದು ನಾನು ವಿನಂತಿಸುತ್ತೇನೆ. ಪ್ರಧಾನಿ ಮೋದಿ ಇದೀಗ ಅಮೆರಿಕದಿಂದ ಹಿಂದಿರುಗಿದ್ದಾರೆ ಮತ್ತು ಅಮೆರಿಕ ಹೊಸ ಸುಂಕಗಳನ್ನು ವಿಧಿಸಿದೆ, ಇದು ನಮ್ಮ ದೇಶದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರವು ಅಂತಹ ವಿಷಯಗಳಿಗೆ ಗಮನ ಕೊಡಬೇಕು ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಗಮನಹರಿಸಬೇಕು"ಎಂದು ಸುಳೆ ಹೇಳಿದರು.
ಈ ಸುದ್ದಿಯನ್ನೂ ಓದಿ: Chhatrapati Sambhaji Maharaj: ಯಾರು ಈ ಛತ್ರಪತಿ ಸಂಭಾಜಿ ಮಹಾರಾಜ? ವಿಕ್ಕಿ ಕೌಶಲ್ ನಟನೆಯ ʼಛಾವಾʼದಲ್ಲಿದೆ ಈ ಮರಾಠ ಹೋರಾಟಗಾರನ ಕಥೆ
ಬಿಜೆಪಿಯನ್ನು ಟೀಕಿಸಿದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ, ಸರ್ಕಾರವು ಮುಸ್ಲಿಮರನ್ನು ಕಿರುಕುಳ ನೀಡುವ ಮತ್ತು ಕೋಮುವಾದವನ್ನು ಹರಡುವುದರ ಮೇಲೆ ಮಾತ್ರ ಗಮನಹರಿಸಿದೆ ಎಂದು ಹೇಳಿದರು. "ಅವರು ಲಿವ್-ಇನ್ ಸಂಬಂಧಗಳಿಗೆ ಸ್ವಾತಂತ್ರ್ಯವನ್ನು ನೀಡಲು ಬಯಸುತ್ತಾರೆ. ದೇಶದಲ್ಲಿ ಲವ್ ಜಿಹಾದ್ ಎಂಬುದೇ ಇಲ್ಲ ಎಂದಿದ್ದಾರೆ. ಬಲವಂತದ ಮತಾಂತರಗಳು ಎಲ್ಲೂ ನಡೆಯುವುದಿಲ್ಲ ಮತ್ತು ಲವ್ ಜಿಹಾದ್" ಒಂದು ಊಹಾಫೋಹ ಎಂದು ಕಾಂಗ್ರೆಸ್ ನಾಯಕ ಹುಸೇನ್ ದಲ್ವಾಯಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಯಾವುದೇ ಧರ್ಮವನ್ನು ಅನುಸರಿಸಲು ಅವಕಾಶ ನೀಡುತ್ತದೆ. ನಮ್ಮ ದೇಶ ಜಾತ್ಯತೀತವಾಗಿದೆ, ಆದರೆ ಕೆಲವರು ನಮ್ಮ ಸಂಸ್ಕೃತಿಯ ರಚನೆಯನ್ನು ನಾಶಮಾಡಲು ಬಯಸುತ್ತಾರೆ. ಅವರು ನಿಜವಾಗಿಯೂ ಎಷ್ಟು ಲವ್ ಜಿಹಾದ್ ಪ್ರಕರಣಗಳನ್ನು ನೋಡಿದ್ದಾರೆಂದು ತೋರಿಸಲಿ. ಈ ಜನರು ಹಿಟ್ಲರ್ ಸಂಸ್ಕೃತಿಯನ್ನು ನಮ್ಮ ದೇಶಕ್ಕೆ ತರಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಹೇಳಿದರು.
ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕ ಮಂಗಲ್ ಲೋಧಾ, ದೇಶಾದ್ಯಂತ "ಲವ್ ಜಿಹಾದ್" ಪ್ರಕರಣಗಳು ಹೆಚ್ಚುತ್ತಿವೆ. ಶ್ರದ್ಧಾ ವಾಕರ್ ಅವರನ್ನು ಎಷ್ಟು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ನಾವೆಲ್ಲರೂ ನೋಡಿದ್ದೇವೆ. ಮಹಾರಾಷ್ಟ್ರದಲ್ಲಿ ಅಂತಹ ಹಲವು ಪ್ರಕರಣಗಳಿವೆ. ಲವ್ ಜಿಹಾದ್ ಅನ್ನು ನಿಲ್ಲಿಸಲು ನಾವು ಪ್ರಯತ್ನಿಸಿದಾಗ, ವಿರೋಧ ಪಕ್ಷಗಳಿಗೆ ಸಮಸ್ಯೆ ಇದೆ ಎಂದು ಲೋಧಾ ಹೇಳಿದರು.