#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral News: ಕಿನ್ನರ ಅಖಾಡದ ಮಹಾಮಂಡಲೇಶ್ವರ ಸ್ಥಾನಕ್ಕೆ ಮಮತಾ ಕುಲಕರ್ಣಿ ರಾಜೀನಾಮೆ!

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಸಂದರ್ಭಲ್ಲಿ ಸಾಧು-ಸಂತರ ಸಮೂಹವಾಗಿರುವ ವಿವಿಧ ಅಖಾಡಗಳಿಗೆ ಮಹಾಮಂಡಲೇಶ್ವರರ ನೇಮಕವಾಗುತ್ತಿದೆ. ಅಂತಹ ಒಂದು ಅಖಾಡಕ್ಕೆ ಮಮತಾ ಕುಲಕರ್ಣಿ ಅವರ ನೇಮಕ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಸಂಬಂಧಿಸಿದ ಸುದ್ದಿ ಇಲ್ಲಿದೆ.

ಮಹಾಮಂಡಲೇಶ್ವರ ಪದತ್ಯಾಗ ಮಾಡಿದ್ಯಾಕೆ ಮಮತಾ ಕುಲಕರ್ಣಿ?

ಕಿನ್ನರ ಅಖಾಡದ ಮಹಾಮಂಡಲೇಶ್ವರರಾಗಿ ಮಮತಾ ಕುಲಕರ್ಣಿ ಪದಪ್ರಧಾನದ ಸಂದರ್ಭ.

Profile Sushmitha Jain Feb 11, 2025 5:12 PM

ಪ್ರಯಾಗ್‌ರಾಜ್: ಆಧ್ಯಾತ್ಮ ಜೀವನ (Spiritual Life) ನಡೆಸುತ್ತಿರುವ ಬಾಲಿವುಡ್ ನಟಿ (Bollywood Actress) ಮಮತಾ ಕುಲಕರ್ಣಿ (Mamta Kulkarni) ಕಿನ್ನರ ಅಖಾಡದ (Kinnar Akhara) ತನ್ನ ಮಹಾಮಮಂಡಲೇಶ್ವರ (Mahamandaleshwar) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನನ್ನು ಈ ಸ್ಥಾನಕ್ಕೆ ನೇಮಿಸಿದ ಕಾರಣ ಕೇಳಿಬಂದ ಟೀಕೆಗಳು ಮತ್ತು ಅಖಾಡದಲ್ಲಿನ ಆಂತರಿಕ ಸಂಘರ್ಷದ ಕಾರಣದಿಂದ ಮಮತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಟಿಯ ಆಧ್ಯಾತ್ಮ ಸಾಧನೆಯ ಬಗ್ಗೆ ಪ್ರಶ್ನೆಗಳೆದ್ದ ಹಿನ್ನಲೆಯಲ್ಲಿ ಕಿನ್ನರ ಅಖಾಡದಿಂದ ಮಮತಾ ಕುಲಕರ್ಣಿ ಮತ್ತು ಆಕೆಯ ಮೆಂಟರ್ (Mentor) ಲಕ್ಷ್ಮೀ ನಾರಾಯಣ ತ್ರಿಪಾಟಿಯನ್ನು ಹೊರಹಾಕಲಾಗಿದ್ದು, ಈ ಮೂಲಕ ಕಿನ್ನರ ಅಖಾಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಇದೀಗ ಆಸ್ತಿಕ ವರ್ಗದಲ್ಲಿ ಮೂಡಲಾರಂಭಿಸಿದೆ.

ವಿಡಿಯೋ ಹೇಳಿಕೆ ಮೂಲಕ ಮಮತಾ ಕುಲಕರ್ಣಿ ತನ್ನ ಪದತ್ಯಾಗದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ‘ಮಹಾಮಂಡಲೇಶ್ವರ ಯಮೈ ಮಮತಾ ನಂದಗಿರಿ ಆಗಿರುವ ನಾನು, ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ..’ ಎಂದು ಪ್ರಕಟಿಸಿದ್ದಾರೆ.

‘ನನ್ನ 25 ವರ್ಷಗಳ ಆಧ್ಯಾತ್ಮ ಸಾಧನೆಯ ಕಾರಣದಿಂದ ನನಗೆ ಈ ಗೌರವ ಲಭಿಸಿತ್ತು, ಆದರೆ ಮಹಾಮಂಡಲೇಶ್ವರಿಯಾಗಿ ನನ್ನ ಪಾತ್ರದ ಬಗ್ಗೆ ಕೆಲವರಿಗೆ ಅನುಮಾನಗಳಿವೆ’ ಎಂದು ಆಕೆ ತನ್ನ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ರೀತಿಯಾಗಿ ಈಕೆ ಯಾಕೆ ಮಾಡಿದಳೆಂದು ಹಲವರು ತನ್ನನ್ನು ಪ್ರಶ್ನೆ ಮಾಡುತ್ತಿರುವುದಾಗಿಯೂ ಆಕೆ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.



‘ನನ್ನ ಗುರುಗಳಾಗಿರುವ ಶ್ರೀ ಚೈತನ್ಯ ಗಗನ್ ಗಿರಿ ಮಹಾರಾಜ್ ಒಬ್ಬರು ಸಿದ್ಧಪುರುಷರಾಗಿದ್ದಾರೆ. ನಾನು ಅವರೊಂದಿಗೆ 25 ವರ್ಷಗಳ ಕಾಲ ಶಿಷ್ಯತ್ವ ಮಾಡಿದ್ದೇನೆ. ನಾನು ಕೈಲಾಸ, ಮಾನಸ ಸರೋವರ ಅಥವಾ ಹಿಮಾಲಯಗಳಿಗೆ ಹೋಗಬೇಕಾಗಿಲ್ಲ, ಯಾಕೆಂದರೆ ಅವೆಲ್ಲವೂ ಈಗಾಗಲೇ ನನ್ನೆದುರಿನಲ್ಲಿವೆ’ ಎಂದು ಕುಲಕರ್ಣಿ ಹೇಳಿಕೊಂಡಿದ್ದಾರೆ.

ತನ್ನ ನೇಮಕಾತಿಯ ಸುತ್ತ ಹಬ್ಬಿರುವ ಹಣಕಾಸಿನ ವಿವಾದಗಳಿಗೂ ಮಮತಾ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ತನ್ನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಕೇಳಲಾಯಿತು, ಆದರೆ ನನ್ನಲ್ಲಿ ಅಷ್ಟೊಂಸು ಹಣವಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral News: ದ್ವಿಚಕ್ರ ವಾಹನದಲ್ಲೇ 1200 km ಕ್ರಮಿಸಿ, ಕುಂಭಮೇಳ ಸುತ್ತಿ ಬಂದ ದಂಪತಿ!

ಈ ಸಂದರ್ಭದಲ್ಲಿ ಜೈ ಅಂಬಾಗಿರಿ ಮಹಾಮಂಡಲೇಶ್ವರರು ಇಷ್ಟೊಂದು ದೊಡ್ಡ ಮೊತ್ತವನ್ನು ತಮ್ಮ ಕೈಯಿಂದಲೇ ನೀಡಿದರು, ಮತ್ತು ತನ್ನ ಬಳಿ ಇರುವ ತನ್ನ ಗಾಢವಾದ ಆಧ್ಯಾತ್ಮ ಸಾಧನೆಯಿಂದ ಬಂದಿರುವುದೇ ಹೊರತು ಲೌಕಿಕ ಗಳಿಕೆಯಿಂದಲ್ಲ ಎಂದೂ ಆಕೆ ಸ್ಪಷ್ಟನೆ ನೀಡಿದ್ದಾರೆ.



ಕಳೆದ ತಿಂಗಳು ಜ.24ರಂದು, 52 ವರ್ಷದ ಕುಲಕರ್ಣಿ ಅವರು ಅಧಿಕೃತವಾಗಿ ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಮಹೇಂದ್ರಾನಂದ ಗಿರಿ, ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮೀ ನಾರಾಯಣ ತ್ರಿಪಾಠಿ ಮತ್ತು ಇನ್ನಿತರ ಕಿನ್ನರ ಮಹಾಮಂಡಲೇಶ್ವರರ ಉಪಸ್ಥಿತಿಯಲ್ಲಿ ಮಹಾಮಂಡಲೇಶ್ವರರಾಗಿ ನಿಯುಕ್ತರಾಗಿದ್ದರು.

ಇದೇ ಸಂದರ್ಭದಲ್ಲಿ ಕುಲಕರ್ಣಿ ಅವರನ್ನು ಯಮಾಯ್ ಮಮತಾ ನಂದ್ ಗಿರಿ ಎಂದು ಮರುನಾಮಕರಣ ಮಾಡಲಾಗಿತ್ತು ಮತ್ತು ಈ ಸಂದರ್ಭದಲ್ಲಿ ಇನ್ನೂ ಐವರಿಗೆ ಮಹಾಮಂಡಲೇಶ್ವರ ಪದವಿಯನ್ನು ನೀಡಲಾಗಿತ್ತು.

‘ಲಕ್ಷ್ಮೀ ನಾರಾಯಣ ತ್ರಿಪಾಠಿ ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ. ಆಕೆ, ಮಮತಾ ಕುಲಕರ್ಣಿಯವರನ್ನು ನೇಮಕ ಮಾಡುವ ಮೂಲಕ ಸನಾತನ ಧರ್ಮದ ತತ್ವಗಳನ್ನು ಹಾಗೂ ರಾಷ್ಟ್ರೀಯ ಹಿತಾಸಕ್ತಿಯನ್ನು ಉಲ್ಲಂಘಿಸಿದ್ದಾರೆ, ಮಮತಾ ಅವರು ಒಂದು ಪ್ರಕರಣವನ್ನೂ ಎದುರಿಸುತ್ತಿದ್ದಾರೆ, ಮಹಾಮಂಡಲೇಶ್ವರರಾಗಿ ಆಕೆ ಅಖಾಡದ ಸಂಪ್ರದಾಯಗಳನ್ನು ಪಾಲಿಸುತ್ತಿಲ್ಲ’ ಎಂದು ಅಜಯ್ ದಾಸ್ ತಮ್ಮ ಶಿಬಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಮತಾ ನೇಮಕ ವಿರುದ್ದ ಮಾಧ್ಯಮಗಳೊಂದಿಗೆ ಮಾತನಾಡಿದ್ದರು.