Mann Ki Baat: ದೇಶವನ್ನು ಮಾದಕ ದ್ರವ್ಯದಿಂದ ಮುಕ್ತಗೊಳಿಸಿ; 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ
PM Moid Mann Ki Baat: ದೇಶವು ಅಭಿವೃದ್ಧಿ ಹೊಂದಲು ಮಾದಕ ದ್ರವ್ಯ ಮುಕ್ತವಾಗಬೇಕು. ಇದಕ್ಕಾಗಿ ಯುವಕರು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿ ಮಾತನಾಡಿದ ಅವರು ವಿಕಸಿತ ಭಾರತ ನಿರ್ಮಾಣವಾಗಲು ಯುವಕರು ಮಾದಕ ದ್ರವ್ಯಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ವಿಕಸಿತ ಭಾರತಕ್ಕೆ (Viksit Bharat) ಯುವಕರು ಮಾದಕ ದ್ರವ್ಯಗಳಿಂದ (drug-free youth) ದೂರವಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಮಾಸಿಕ ರೇಡಿಯೋ ಕಾರ್ಯಕ್ರಮ (radio programme) 'ಮನ್ ಕಿ ಬಾತ್' ನಲ್ಲಿ (PM Moid Mann Ki Baat) ಭಾನುವಾರ ಮಾತನಾಡಿದ ಅವರು, ದೇಶವು ಅಭಿವೃದ್ಧಿ ಹೊಂದಬೇಕಾದರೆ ಮಾದಕ ದ್ರವ್ಯದಿಂದ ಮುಕ್ತವಾಗಿರಬೇಕು. ದೇಶವನ್ನು ಮಾದಕದ್ರವ್ಯ ಮುಕ್ತಗೊಳಿಸುವುದು ಮತ್ತು ದೇಶದ ಭವಿಷ್ಯವನ್ನು ಉಳಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ತಿಳಿಸಿದರು. ಇದಕ್ಕಾಗಿ ನಡೆಸುತ್ತಿರುವ ಸರ್ಕಾರದ ವಿಕಸಿತ ಭಾರತಕ್ಕಾಗಿ ನಾಶ ಮುಕ್ತ ಯುವ ಅಭಿಯಾನವನ್ನು ಅವರು ಶ್ಲಾಘಿಸಿದರು.
'ಮನ್ ಕಿ ಬಾತ್' ನ 137ನೇ ಸರಣಿಯಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯ ಮುಕ್ತ ಯುವಕರು ಮತ್ತು ಭಾರತ ಇದು ಸರ್ಕಾರದ ದೃಢ. ಸಂಕಲ್ಪವಾಗಿದೆ. ಮಾದಕ ದ್ರವ್ಯಗಳಿಂದ ಯುವಕರು ಯಾಕೆ ದೂರವಿರಬೇಕು ಎನ್ನುವ ಕುರಿತು ದೇಶದ ವಿವಿಧ ಭಾಷೆಗಳಲ್ಲಿ ಸಂದೇಶವನ್ನು ಸಾರುವಂತೆ ಅವರು ಸಾಮಾಜಿಕ ಮಾಧ್ಯಮ ವಿಷಯ ರಚನೆಕಾರರಿಗೆ ಸೂಚಿಸಿದರು.
'ನಿಮ್ಮನ್ನು ನೀವು ದೇವರೆಂದುಕೊಂಡಿದ್ದೀರಾ'? ಆಹಾರ ಸುರಕ್ಷತಾ ಸಂಸ್ಥೆ FDAಯನ್ನು ತರಾಟೆ ತೆಗೆದುಕೊಂಡ ಬಾಂಬೆ ಹೈಕೋರ್ಟ್
ಇವತ್ತು ಮಾದಕ ವ್ಯಸನವು ಸಂಪೂರ್ಣ ಕುಟುಂಬವನ್ನು, ಸಮಾಜವನ್ನು ಆವರಿಸುತ್ತಿದೆ. ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಮತ್ತು ವ್ಯಸನದಿಂದ ಹೋರಾಡುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಮುಂದಾಗುವವರನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಮಾದಕ ದ್ರವ್ಯಗಳಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಘೋಷಣೆಗಳು, ಹಾಡುಗಳು ಮತ್ತು ಕಿರು ನಾಟಕಗಳನ್ನು ರೂಪಿಸಿ ಎಂದು ಅವರು ತಿಳಿಸಿದರು.
“I urge creators to create content in various languages that helps to keep India's youth away from drugs and free from addiction.”
— News Arena India (@NewsArenaIndia) August 30, 2026
- PM Modi in Mann ki Baat pic.twitter.com/Qyb8NO2SD8
ಆಗಸ್ಟ್ ತಿಂಗಳಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ದಿನ, ಸ್ವಾತಂತ್ರ್ಯ ದಿನ, ಬಾಹ್ಯಾಕಾಶ ದಿನ, ಕ್ವಿಟ್ ಇಂಡಿಯಾ ಚಳುವಳಿ, ವಿಭಜನೆಯ ಸ್ಮರಣಾರ್ಥ ದಿನಗಳಂತಹ ಆಚರಣೆಗಳು ಭಾರತೀಯರಲ್ಲಿ ದೇಶಭಕ್ತಿಯ ಭಾವನೆಯನ್ನು ಹೇಗೆ ಹುಟ್ಟುಹಾಕಿದೆ ಎಂಬುದರ ಕುರಿತು ಮಾತನಾಡಿದ ಅವರು, 'ಹರ್ ಘರ್ ತಿರಂಗ' ಅಭಿಯಾನವು ಈ ಭಾವನೆಯನ್ನು ಮತ್ತಷ್ಟು ಬಲಪಡಿಸಿದೆ ಎಂದರು.
'ವಂದೇ ಮಾತರಂ' ನ 150 ನೇ ವಾರ್ಷಿಕೋತ್ಸವವನ್ನು ಗುರುತಿಸಿರುವುದು ಈ ವರ್ಷದ ವಿಶೇಷತೆಯಾಗಿದೆ. ತ್ರಿವರ್ಣ ಧ್ವಜದ ಆಚರಣೆಯು ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. 'ಸೂರ್ಯಪಥ ತಿರಂಗ' ಉಪಕ್ರಮದ ಮೂಲಕ ನಮ್ಮ ಧ್ವಜವು ಪ್ರಪಂಚದಾದ್ಯಂತ ಒಂದು ವಿಶಿಷ್ಟ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ತಿಳಿಸಿದರು.
'ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ' ಬಗ್ಗೆ ಮಾತನಾಡಿದ ಅವರು, ಈ ಯೋಜನೆಯು ದೇಶಾದ್ಯಂತ 35 ಲಕ್ಷ ಮಹಿಳೆಯಾರಿಗೆ ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರು ಆರ್ಥಿಕವಾಗಿ ಸದೃಢವಾದಾಗ ಆಕೆಯ ಕುಟುಂಬದ ಭವಿಷ್ಯವು ಸದೃಢವಾಗುತ್ತದೆ ಎಂದರು.
ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿಸಿದ ಅವರು ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಈ ವರ್ಷದ ಶ್ರೀ ಅಮರನಾಥ ಯಾತ್ರೆಯ ಸಮಯದಲ್ಲಿ ಸಾವಿರಾರು ಸ್ವಚ್ಛತಾ ಕಾರ್ಮಿಕರು ಹಗಲಿರುಳು ಶ್ರಮಿಸಿ ಯಾತ್ರಿಕರ ಸೇವೆ ಸಲ್ಲಿಸಿದರು. ಇಲ್ಲಿ ಒಂದು ವಿಶಿಷ್ಟ ಪ್ರಯೋಗವೂ ನಡೆಯಿತು: ತೀರ್ಥಯಾತ್ರೆಯ ಸಮಯದಲ್ಲಿ ಬಳಸಲಾದ ಕುದುರೆ ಮತ್ತು ಹೇಸರಗತ್ತೆಗಳ ಸಗಣಿ ಜೈವಿಕ ಅನಿಲವಾಗಿ ಪರಿವರ್ತನೆಗೊಳಿಸಿ ಇದರ ಶಕ್ತಿಯಿಂದ 'ಸ್ವಚ್ಛ ಜ್ಯೋತಿ'ಯನ್ನು ಬೆಳಗಿಸಲಾಯಿತು ಎಂದು ತಿಳಿಸಿದರು.
ʼʼಪರಿಸ್ಥಿತಿ ಇನ್ನೂ ಹದಗೆಟ್ಟಿಲ್ಲʼʼ: ರುಪಾಯಿ ಮೌಲ್ಯ ಕುಸಿತದ ಬಗ್ಗೆ ಆರ್‌ಬಿಐ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ ಅಭಯ
ಸೆಪ್ಟೆಂಬರ್ 3 ರಂದು ಆಚರಿಸಲಾಗುವ ದಿವಂಗತ ನಟ ಉತ್ತಮ್ ಕುಮಾರ್ ಅವರ ಜನ್ಮ ಶತಮಾನೋತ್ಸವಕ್ಕೆ ಮನ್ ಕೀ ಬಾತ್ ನಲ್ಲಿ ಗೌರವ ಸಲ್ಲಿಸಿದ ಅವರು, ಹಬ್ಬಗಳು ಮತ್ತು ಆಚರಣೆಗಳು ನಮ್ಮ ಸಂಪ್ರದಾಯಗಳನ್ನು ಎತ್ತಿಹಿಡಿಯುವುದಲ್ಲದೆ ಪರಸ್ಪರ ಸಂಪರ್ಕ ಸಾಧಿಸಲು ನಮಗೆ ಅವಕಾಶಗಳನ್ನು ಒದಗಿಸುತ್ತವೆ. ಆದ್ದರಿಂದ ಮುಂಬರುವ ಹಬ್ಬದ ಋತುವಿನಲ್ಲಿ ಜನರು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಮತ್ತು ದೇಶವನ್ನು ಆತ್ಮ ನಿರ್ಬರ್ ಮಾಡಲು ಬದ್ಧರಾಗಿರಬೇಕು ಎಂದು ಹೇಳಿದರು.