ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗರಲಾರ: ಮೋಹನ್ ಭಾಗವತ್
ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗಲಾರ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ನ್ಯೂಯಾರ್ಕ್‌ನಲ್ಲಿ ಶನಿವಾರ ನಡೆದ ಬಹು-ಧರ್ಮದ ಸಂವಾದದಲ್ಲಿ ಅವರು ಧಾರ್ಮಿಕ ಸೌಹಾರ್ದತೆಯ ಪ್ರಾಮುಖ್ಯತೆಯನ್ನು ತಿಳಿಸಿ, ಮುಸ್ಲಿಮರು ಇಲ್ಲದೆ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದರು.
ಸಂಗ್ರಹ ಚಿತ್ರ -
ನ್ಯೂಯಾರ್ಕ್: ಮುಸ್ಲಿಮರು ಇಲ್ಲದೆ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh) ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದರು. ನ್ಯೂಯಾರ್ಕ್‌ನಲ್ಲಿ (New York) ಶನಿವಾರ ನಡೆದ ಬಹು-ಧರ್ಮದ ಸಂವಾದದಲ್ಲಿ (multi-faith dialogue) ಅವರು ಉಪನ್ಯಾಸವೊಂದರಲ್ಲಿ ನಡೆದ ಘಟನೆಯ ಕುರಿತು ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ 'ನೀವು ಹಿಂದೂ ಸಂಘಟನೆ, ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ, ಹಾಗಾದರೆ ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ಏನು ಹೇಳುತ್ತೀರಿ ಎನ್ನುವ ಪ್ರಶ್ನೆಗೆ ನಾನು, ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಬಯಸುವವನು ಹಿಂದೂ ಆಗರಲಾರ ಎಂದು ಹೇಳಿರುವುದಾಗಿ ತಿಳಿಸಿದರು.
ಧಾರ್ಮಿಕ ಸೌಹಾರ್ದತೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಿಂದೂ ರಾಷ್ಟ್ರೀಯವಾದಿ ದೃಷ್ಟಿಕೋನವನ್ನು ಹೊಂದಿದೆ. ಮುಸ್ಲಿಮರು ಕೂಡ ಹಿಂದೂ ಎಂದು ಕರೆಯಲು ಬಯಸಿದರೆ ಎಲ್ಲಾ ಮಾರ್ಗಗಳು ಒಂದೇ ಆಗಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಿಮ್ಮಲ್ಲಿ ನಂಬಿಕೆ ಬೇಕು. ಪ್ರತಿಯೊಬ್ಬ ಮನುಷ್ಯನಿಗೂ ಘನತೆ ಇದೆ. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದರು.
ಬೈಕ್‌ನಲ್ಲಿ ಬಂದು ಗುಂಡಿನ ದಾಳಿ; ಪಂಜಾಬ್‌ನಲ್ಲಿ ಆಮ್ ಆದ್ಮಿ ನಾಯಕನ ಬರ್ಬರ ಹತ್ಯೆ
ಒಂದು ಬಾರಿ ಉಪನ್ಯಾಸವೊಂದರಲ್ಲಿ ಅನೇಕ ಮುಸ್ಲಿಂ ಸಹೋದರರು ಇದ್ದರು. ಅವರು ನನಗೆ ಒಂದು ಪ್ರಶ್ನೆ ಕೇಳಿದರು. ನೀವು ಹಿಂದೂ ಸಂಘಟನೆ, ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ. ಹಾಗಾದರೆ ನಮ್ಮ ಮುಸ್ಲಿಮರ ಬಗ್ಗೆ ಏನು? ನಮ್ಮನ್ನು ಓಡಿಸುತ್ತೀರಾ? ಎಂದು ಪ್ರಶ್ನಿಸಿದರು. ಅದಕ್ಕೆ ನಾನು, ಇಲ್ಲ, ಅದು ಹಿಂದುತ್ವವಲ್ಲ ಎಂದು ಹೇಳಿದೆ.
#WATCH | New York, US: At the "One World One Humanity" event, RSS Chief Mohan Bhagwat says, "If any Hindu thinks that there should be no Muslim in Bharat, he will not remain Hindu. If you want to call yourself Hindu, you must believe that all paths are leading to the same goal… pic.twitter.com/e5UYZPppU8
— ANI (@ANI) August 29, 2026
ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ ಅವನು ಹಿಂದೂವಾಗಿ ಉಳಿಯುವುದಿಲ್ಲ ಎಂದ ಅವರು, ಭಾರತದ ಹರಿಯಾಣದಲ್ಲಿ ನಡೆದ ಮತ್ತೊಂದು ಘಟನೆಯನ್ನು ಉಲ್ಲೇಖಿಸಿದರು.
ಆರ್‌ಎಸ್‌ಎಸ್ ಸ್ವಯಂಸೇವಕರು ಎಲ್ಲೆಡೆ ಸಮಾನವಾಗಿ ಸೇವೆ ಸಲ್ಲಿಸುತ್ತಾರೆ. ಭಾರತದ ಭಾಗವಾಗಿರುವ ಹರಿಯಾಣದ ದಾದ್ರಿ ಎಂಬಲ್ಲಿ ಎರಡು ವಿಮಾನಗಳು ಡಿಕ್ಕಿ ಹೊಡೆದವು. ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರು. ನಮ್ಮ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪಿ ಅವರಿಗೆ ಸೇವೆ ಸಲ್ಲಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು. ಆರ್‌ಎಸ್‌ಎಸ್ ಸ್ವಯಂಸೇವಕರು ಆ ಸಮಯದಲ್ಲಿ ಅವರೆಲ್ಲ ಮುಸ್ಲಿಮರು ಎಂದು ಎಂದಿಗೂ ಭಾವಿಸಿರಲಿಲ್ಲ. ಆರ್‌ಎಸ್‌ಎಸ್ ರಾಜಕೀಯದಲ್ಲಿ ಇಲ್ಲದ ಕಾರಣ ನಾವು ಇದನ್ನು ಮಾಡಲು ಸಾಧ್ಯವಾಯಿತು. ಇವುಗಳಿಂದ ನಾವು ಏನನ್ನೂ ಬಯಸುವುದಿಲ್ಲ. ನಾವು ಸೇವೆ ನೀಡುತ್ತೇವೆ. ಅದಕ್ಕೆ ಪ್ರತಿಯಾಗಿ ನಮಗೆ ಏನೂ ಬೇಡ ಎಂದು ಹೇಳಿದರು.
ಮೋಹನ್ ಭಾಗವತ್ ಅವರು ಉಲ್ಲೇಖಿಸಿರುವ ಈ ಘಟನೆ 1996ರಲ್ಲಿ ನಡೆದಿರುವುದು. ಈ ದುರಂತದಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 349 ಪ್ರಯಾಣಿಕರು ಸಾವನ್ನಪ್ಪಿದ್ದರು. ಸೌದಿ ಅರೇಬಿಯನ್ ಏರ್‌ಲೈನ್ಸ್ ನ 763 ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್‌ಲೈನ್ಸ್ ವಿಮಾನ 1907 ಇಲ್ಯುಶಿನ್ ಇಲ್-76 ನಡುವೆ ಅಪಘಾತ ಸಂಭವಿಸಿತ್ತು. ಭಾಷೆಯ ಸಮಸ್ಯೆಯಿಂದಾಗಿ ವಾಯು ಸಂಚಾರ ನಿಯಂತ್ರಣದೊಂದಿಗೆ ತಪ್ಪು ಸಂವಹನ ಉಂಟಾಗಿ ಈ ಅಪಘಾತ ನಡೆದಿತ್ತು ಎನ್ನಲಾಗಿದೆ.
ರಾಜ್ಯಾದ್ಯಂತ 32 ಸ್ಟೇಡಿಯಂ ಅಭಿವೃದ್ಧಿ : ಡಿಸಿಎಂ ಪರಂ
ಮೋಹನ್ ಭಾಗವತ್ ಅವರ ಅಮೆರಿಕ ಪ್ರವಾಸವನ್ನು ನ್ಯೂಯಾರ್ಕ್ ನ ಮೊದಲ ಭಾರತೀಯ- ಅಮೆರಿಕನ್ ಮುಸ್ಲಿಂ ಮೇಯರ್ ಜೋಹ್ರಾನ್ ಮಮ್ದಾನಿ ಟೀಕಿಸಿದ್ದು, ಆರ್‌ಎಸ್‌ಎಸ್ ಒಂದು ಕೋಮು ಸಂಘಟನೆ ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಅವರು ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಗಳಿಂದ ಅವರಿಗೆ ತಿರುಗೇಟು ನೀಡಿದ್ದಾರೆ.