ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಭಾರತದಲ್ಲಿ ನನ್ನನ್ನು ಓಡಾಡುವ ಎಟಿಎಂನಂತೆ ನೋಡುತ್ತಿದ್ದರುʼʼ: ವಿದೇಶಿ ಪ್ರವಾಸಿ ಹೀಗಂದಿದ್ದೇಕೆ?

Viral News: ಭಾರತಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ ಇಲ್ಲಿ ಎದುರಾದ ಕಹಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಒಂದು ತಿಂಗಳ ಪ್ರವಾಸ ಕೈಗೊಂಡಿದ್ದ ತನ್ನನ್ನು ಇಲ್ಲಿನ ಜನರು ವಾಕಿಂಗ್ ಎಟಿಎಂನಂತೆ ನೋಡಿದ್ದಾರೆ. ವಿದೇಶಿಗರಿಂದ ವ್ಯಾಪಾರಿಗಳು ಹಾಗೂ ಸ್ಥಳೀಯರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ವಿದೇಶಿಗರಿಂದ ಹೆಚ್ಚು ಹಣ ವಸೂಲಿ: ಭಾರತದಲ್ಲಿನ ಅನುಭವ ಬಿಚ್ಚಿಟ್ಟ ಪ್ರವಾಸಿಗ

ಸಾಂದರ್ಭಿಕ ಚಿತ್ರ -

Profile
Pushpa Kumari Sep 9, 2026 11:36 PM

ನವದೆಹಲಿ, ಸೆ. 9: ಭಾರತಕ್ಕೆ ಭೇಟಿ ನೀಡುವ ಬಹುತೇಕ ವಿದೇಶಿಗರು ಇಲ್ಲಿನ ಸಂಸ್ಕೃತಿ ,ಆಹಾರ, ಆತಿಥ್ಯಕ್ಕೆ ಮನ ಸೋಲುತ್ತಾರೆ. ಕೆಲವೇ ಕೆಲವರಿಗೆ ಇಲ್ಲಿ ಕಹಿ ಅನುಭವವಾಗುತ್ತದೆ. ಅದೇ ರೀತಿ ತನಗಾದ ಕಿರಿಕಿರಿಯನ್ನು ವಿದೇಶಿ ಪ್ರವಾಸಿಗನೊಬ್ಬ ವಿವರಿಸಿದ್ದಾನೆ. ಭಾರತಕ್ಕೆ ಬಂದಿದ್ದ ವಿದೇಶಿ ಪ್ರವಾಸಿಗನೊಬ್ಬ ಇಲ್ಲಿ ಎದುರಾದ ಕಹಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ. ಒಂದು ತಿಂಗಳ ಪ್ರವಾಸ ಕೈಗೊಂಡಿದ್ದ ತನ್ನನ್ನು ಇಲ್ಲಿನ ಜನರು ವಾಕಿಂಗ್ ಎಟಿಎಂನಂತೆ ನೋಡುತ್ತಿದ್ದರು. ವಿದೇಶಿಗರ ಬಳಿ ವ್ಯಾಪಾರಿಗಳು ಹಾಗೂ ಸ್ಥಳೀಯರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾನೆ.

ಆತನ ಒಂದು ತಿಂಗಳ ಭಾರತ ಪ್ರವಾಸದ ಅನುಭವ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಒಂದು ತಿಂಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದ ವಿದೇಶಿ ಪ್ರವಾಸಿಗ, "ಇಲ್ಲಿನ ಜನರು ನನ್ನನ್ನು ಮನುಷ್ಯನಂತೆ ನೋಡದೆ ‘ವಾಕಿಂಗ್ ಎಟಿಎಂ’ ಥರ ನೋಡಿದ್ದಾರೆʼʼ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾನೆ. ರೆಡ್ಡಿಟ್‌ನಲ್ಲಿ ಅನುಭವ ಹಂಚಿಕೊಂಡ ಆತ ತಾನು ಯುರೋಪ್‌ನ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನಾಗಿದ್ದು, ಸಣ್ಣ ಬಜೆಟ್‌ನಲ್ಲಿ ಭಾರತಕ್ಕೆ ಬಂದಿದ್ದಾಗಿ ತಿಳಿಸಿದ್ದಾನೆ‌.

ಆತನ ಪ್ರಕಾರ, ಭಾರತದಾದ್ಯಂತ ನಾಲ್ಕು ವಾರಗಳ ಪ್ರಯಾಣವು ಬಹುಪಾಲು ವಿದೇಶಿ ತೆರಿಗೆ ಎಂಬಂತೆ ಭಾಸವಾಗಿದೆ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ನಗರಗಳಲ್ಲಿ ವ್ಯಾಪಾರಿಗಳು ವಿದೇಶಿಯರರಿಂದ ಅತಿಯಾದ ಬೆಲೆ ವಸೂಲಿ ಮಾಡುತ್ತಿದ್ದಾರೆ. ವ್ಯಾಪಾರಿಗಳು ಹಾಗೂ ಸ್ಥಳೀಯರು ತಮ್ಮಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಬಗ್ಗೆ ಆತ ಆರೋಪಿಸಿದ್ದಾನೆ. ನೀರಿನ ಬಾಟಲಿ, ಆಟೋ ರಿಕ್ಷಾ ಬಾಡಿಗೆ ಹಾಗೂ ನೆನಪಿನ ಕಾಣಿಕೆಗಳನ್ನು ಖರೀದಿಸುವಾಗ ಹೀಗೆ ಪ್ರತಿಯೊಂದಕ್ಕೂ ಹೆಚ್ಚು ಮೊತ್ತ ನಿಗದಿ ಮಾಡಿದ್ದು, ಇದು ತನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಆಯಾಸ ತಂದಿದೆ ಎಂದು ಹೇಳಿಕೊಂಡಿದ್ದಾನೆ.

ಸೂರತ್ ರೈಲ್ವೆ ನಿಲ್ದಾಣದಲ್ಲಿ ಕಳಪೆ ಆಹಾರ; ಫುಡ್ ಕೌಂಟರ್‌ನಲ್ಲಿ ಪ್ರಯಾಣಿಕರಿಗಾಗಿ ತಯಾರಿಸಿದ ಪಫ್ ತಿಂದ ಇಲಿ

ಚೌಕಾಶಿ ಮಾಡಲು ಯತ್ನಿಸಿದಾಗ, ಅನೇಕರು ತಕ್ಷಣ ಕೋಪಗೊಳ್ಳುತ್ತಿದ್ದರು ಅಥವಾ ಅಲ್ಲಿಂದ ಹೊರಟುಹೋಗುವಂತೆ ಉದ್ಧಟತನ ತೋರುತ್ತಿದ್ದರು ಎಂದು ತಿಳಿಸಿದ್ದಾನೆ. ಕೊನೆಗೆ ಬೀದಿ ಬದಿಗಳಲ್ಲಿ ಶಾಪಿಂಗ್ ಮಾಡಲು ಬಯಸದೆ ಬ್ಲಿಂಕ್‌ಇಟ್‌ ಮೂಲಕ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿದ್ದಾಗಿ ಹೇಳಿದ್ದಾನೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼವಿದೇಶಿಯರನ್ನು ಹೀಗೆ ಸುಲಿಗೆ ಮಾಡುವುದು ತಪ್ಪು. ಇದು ಪ್ರವಾಸೋದ್ಯಮದ ಹೆಸರಿಗೆ ಧಕ್ಕೆ ತರುತ್ತದೆʼʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ʼʼಭಾರತದ ಬಗ್ಗೆ ಈ ರೀತಿ ಕಾಮೆಂಟ್‌ಗಳು ಬಂದಿಲ್ಲ. ​ಇದು ಎಐ ಸೃಷ್ಟಿತ ಪೋಸ್ಟ್ ಇರಬಹುದುʼʼ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.