Mobile Phone: ನೀವು ಖರೀದಿಸಿದ ಮೊಬೈಲ್ ಫೋನ್ ಅಸಲಿಯೋ, ನಕಲಿಯೋ? ಡೋಂಟ್ ವರಿ ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್
Mobile Phone: ಫೋನ್ ಖರೀದಿ ಮಾಡುವ ಮೊದಲೇ ಫೋನ್ ಅನ್ ಬಾಕ್ಸಿಂಗ್ ಮಾಡುವ ಮೊದಲೇ ನೀವು ಖರೀದಿ ಸಿದ ಮೊಬೈಲ್ ಹೊಸದೋ ಅಥವಾ ಈಗಾಗಲೇ ಬಳಸಿರುವ ಮೊಬೈಲ್ ಆಗಿದೆಯೆ ಎಂದು ಪತ್ತೆಹಚ್ಚುವ ಸುಲಭ ವಿಧಾನವು ಇರಲಿದೆ. ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಈಎಮ್ಇಐ ನಂಬರ್ ಇರಲಿದ್ದು ನಕಲಿ ಸ್ಮಾರ್ಟ್ಫೋನ್ಗಳಲ್ಲಿ ಈ ನಂಬರ್ಗಳಿರುವುದಿಲ್ಲ. ಹಾಗಾಗಿ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ ನಕಲಿಯೋ, ಅಸಲಿಯೋ ಎಂಬುದನ್ನು ತಿಳಿಯಬಹುದಾಗಿದೆ.

ನವ ದೆಹಲಿ: ಮಾರುಕಟ್ಟೆಗೆ ವಿವಿಧ ರೀತಿಯ ಸ್ಮಾರ್ಟ್ ಫೋನ್ (Mobile Phone) ಲಗ್ಗೆ ಇಡುತ್ತಿವೆ. ಸ್ಮಾರ್ಟ್ ಫೋನ್‌ಗಳಿಂದ ಬಳಕೆದಾರರಿಗೆ ಎಲ್ಲ ರೀತಿಯಲ್ಲಿ ಅನುಕೂಲವಾಗುತ್ತಿದೆ. ಹೊಸ ಫೋನ್ ಖರೀದಿ ಸಮಯದಲ್ಲಿ ಫೋನ್‌ನ ಬ್ಯಾಟರಿ ಸಾಮರ್ಥ್ಯ, ಫೋನ್ ಬೆಲೆ, ಇತ್ಯಾದಿ ಕಡೆ ನಾವೆಲ್ಲರೂ ಗಮನ ಹರಿಸುವುದು ಸಾಮಾನ್ಯ. ಆದರೆ ಹೆಚ್ಚಿನವರು ಹೊಸ ಫೋನ್ ಖರೀದಿಸಿದ ಬಳಿಕ ಅದು ಅಸಲಿಯೋ ನಕಲಿಯೋ ಎಂದು ಗೊಂದಲಕ್ಕೆ ಒಳಗಾಗುವುದು ಇದೆ.
ನೀವು ಖರೀದಿಸಿದ ಮೊಬೈಲ್ ಹೊಸದೋ ಅಥವಾ ಈಗಾಗಲೇ ಬಳಸಿರುವ ಮೊಬೈಲಾ, ಅಸಲಿಯಾ, ನಕಲಿಯಾ ಎಂದು ಪತ್ತೆಹಚ್ಚುವ ಸುಲಭ ವಿಧಾನದ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ಫೋನ್ಗಳಲ್ಲಿ ಐಎಂಇಐ ನಂಬರ್ ಇರಲಿದ್ದು ನಕಲಿ ಸ್ಮಾರ್ಟ್ಫೋನ್ಗಳಲ್ಲಿ ಈ ನಂಬರ್ಗಳಿರುವುದಿಲ್ಲ. ಹಾಗಾಗಿ ನಿಮ್ಮಲ್ಲಿರುವ ಸ್ಮಾರ್ಟ್ಫೋನ್ ನಕಲಿಯೋ, ಅಸಲಿಯೋ ಎಂಬುದನ್ನು ತಿಳಿಯಬಹುದಾಗಿದೆ.
ಈ ರೀತಿ ಪತ್ತೆ ಹಚ್ಚಬಹುದು!
ನಿಮ್ಮ ಐಎಂಇಐ ನಂಬರ್ ಅನ್ನು ಪಡೆಯಲು ಮೊದಲು ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ ಅಬೌಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ಅಲ್ಲಿ ನಿಮ್ಮ ಸ್ಮಾರ್ಟ್ಫೋನ್ನ ಐಎಂಇಐ ನಂಬರ್ ಅನ್ನು ನೋಡಬಹುದು. ಬಳಿಕ ನೀವು ceir.gov.in ವೆಬ್‌ಸೈಟ್‌ಗೆ ತೆರಳಿ Know your mobile ಆಯ್ಕೆಯ ಲಿಂಕ್ ಓಪನ್ ಮಾಡಿ. ಬಳಿಕ ಓಟಿಪಿ ಹಾಗೂ ಫೋನಿನ IMEI ಸಂಖ್ಯೆ ನಮೂದಿಸಿ ಖರೀದಿ ಮಾಡಿದ ಮೊಬೈಲ್‌ನ ಎಲ್ಲ ವಿವರ ಪಡೆಯಬಹುದು.
ಮೊಬೈಲ್ ಫೋನ್ ಅಸಲಿ ಅಥವಾ ನಕಲಿ ಫೊನ್ ಆಗಿದೆಯೇ ತಿಳಿಯಲು Know your mobile (KYM) ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಪರಿಶೀಲನೆ ಮಾಡಬಹುದು. ಕೆವೈಎಂ ಟೈಪ್ ಮಾಡಿ ನಿಮ್ಮ ಮೊಬೈಲ್‌ನಲ್ಲಿರುವ 15 ಡಿಜಿಟ್‌ನ ಐಎಂಇಐ ಸಂಖ್ಯೆಯನ್ನು ನಮೂದಿಸಿ 14422ಗೆ ಮೆಸೇಜ್ ಮಾಡಿದರೂ ನಿಮ್ಮ ಮೊಬೈಲ್ ಬಗ್ಗೆ ಮಾಹಿತಿ ಸಿಗಲಿದೆ.
ಇದನ್ನು ಓದಿ:Rajendra Bhat Column: ಮಕ್ಕಳ ಕೈಗೆ ಮೊಬೈಲ್ ಎಂಬ ಮಾಯಾಂಗನೆ!