ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 9.44 ಲಕ್ಷ ಮತದಾರರು
ಜಿಲ್ಲೆಯ ಐದು ಕ್ಷೇತ್ರಗಳ ವ್ಯಾಪ್ತಿಯ 10,69,504 ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸ ಲಾಗಿತ್ತು. ಈ ಪೈಕಿ ಆಗಸ್ಟ್ 17ರವರೆಗೆ 9,44,623 ಮತದಾರರ ಮಾಹಿತಿಯನ್ನು ಸ್ವೀಕರಿಸಿ ಗಣಕೀಕರಣ ಮಾಡಲಾಗಿದೆ. ಗೌರಿಬಿದನೂರು ಕ್ಷೇತ್ರದಲ್ಲಿ 1,89,197, ಬಾಗೇಪಲ್ಲಿಯಲ್ಲಿ 1,83,728, ಚಿಕ್ಕಬಳ್ಳಾಪುರದಲ್ಲಿ 1,91,567, ಶಿಡ್ಲಘಟ್ಟದಲ್ಲಿ 1,84,975 ಹಾಗೂ ಚಿಂತಾಮಣಿಯಲ್ಲಿ 1,95,156 ಮತದಾರರ ಮಾಹಿತಿ ಪರಿಷ್ಕರಿಸಲಾಗಿದೆ