ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahakumbh 2025: ಮಹಾ ಕುಂಭಮೇಳ;ಬೆಂಗಳೂರು-ಪ್ರಯಾಗರಾಜ್ ವಿಮಾನಗಳು 41% ದುಬಾರಿ!

ಪ್ರಯಾಗ್‌ರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಕೋಟ್ಯಂತರ ಭಕ್ತಾದಿಗಳು ಸಾಕ್ಷಿಯಾಗಿದ್ದಾರೆ. ಆದರೆ ಇತ್ತ ಬೆಂಗಳೂರಿನಿಂದ ಪ್ರಯಾಗ್‌ರಾಜ್‌ ಗೆ ಹೋಗುವ ವಿಮಾನದ ಟಿಕೆಟು ದರ ಬರೋಬ್ಬರಿ ಶೇಕಡ 41ರಷ್ಟು ಏರಿಕೆಯಾಗಿದೆ.

ದುಬಾರಿಯಾದ ಪ್ರಯಾಗ್‌ರಾಜ್ ವಿಮಾನ ಟಿಕೆಟು ದರ

Profile Deekshith Nair Jan 15, 2025 10:01 PM

ಬೆಂಗಳೂರು: ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳವು (Mahakumbh 2025) ಉತ್ತರಪ್ರದೇಶದ(Uttar Pradesh) ಪ್ರಯಾಗ್‌ರಾಜ್‌ ನಗರದ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮೊನ್ನೆ(ಜ.13) ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನ ಟಿಕೆಟು ದರಗಳು ದುಪ್ಪಟ್ಟಾಗಿವೆ. ದೆಹಲಿಯಿಂದ ಪ್ರಯಾಗ್‌ರಾಜ್‌ ಹೋಗುವ ವಿಮಾನ ಟಿಕೆಟ್ ದರಗಳು ಶೇಕಡಾ 21 ಕ್ಕೆ ಏರಿದ್ದು, ಬೆಂಗಳೂರಿನಿಂದ ಪ್ರಯಾಗ್‌ರಾಜ್‌ ಹೊರಡುವ ವಿಮಾನಗಳ ಟಿಕೆಟು ದರವು ಬರೋಬ್ಬರಿ ಶೇಕಡ 41 ಕ್ಕೆ ಏರಿದೆ.

ದೆಹಲಿಯಿಂದ ಪ್ರಯಾಗರಾಜ್ ಗೆ ಹೋಗುವ ವಿಮಾನ ಟಿಕೆಟ್‌ ದರವು ಒಬ್ಬರಿಗೆ ₹ 5,748 ಆಗಿದೆ. ಇನ್ನು ಮುಂಬೈನಿಂದ ಉತ್ತರ ಪ್ರದೇಶ ನಗರಕ್ಕೆ ಪ್ರಯಾಣಿಸುವ ಜನರು ₹ 6,381 ಟಿಕೆಟು ವೆಚ್ಚವನ್ನು ಭರಿಸಬೇಕಾಗಿದೆ. ಬೆಂಗಳೂರಿನಿಂದ ಹೊರಡುವ ಪ್ರಯಾಣಿಕರು ತಮ್ಮ ಟಿಕೆಟ್‌ಗಳಿಗೆ ₹ 11,158 (ಶೇ 41 ) ಖರ್ಚು ಮಾಡಬೇಕಾಗುತ್ತದೆ. ಅಹಮದಾಬಾದ್‌ನಿಂದ ಬರುವವರು ₹ 10,364 ಟಿಕೆಟು ಖರೀದಿಸಬೇಕಿದೆ.ಇದು ಕೂಡ ಶೇಕಡಾ 41 ರಷ್ಟು ಹೆಚ್ಚಳವಾಗಿದೆ ಎಂದು ತಿಲಿದು ಬಂದಿದೆ.



ಈ ಮಧ್ಯೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಬರುವ ವಿಮಾನಗಳ ಟಿಕೆಟು ದರವು ಕೂಡ ತೀರಾ ದುಬಾರಿಯಾಗಿದೆ. ಉತ್ತರ ಪ್ರದೇಶದ ನಗರಗಳಲ್ಲಿ ಮತ್ತು ಅದರ ರಾಜಧಾನಿ ಲಕ್ನೋ ಮತ್ತು ಪವಿತ್ರ ನಗರ ವಾರಣಾಸಿಯಿಂದ ಪ್ರಯಾಗ್‌ರಾಜ್‌ಗೆ ವಿಮಾನಗಳು ಶೇಕಡಾ 3-21 ರಷ್ಟು ದುಬಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ:Mahakumbh: ಪಾಕಿಸ್ತಾನ ಕೂಡ ಪ್ರಭಾವಿತವಾಗಿದೆ; ಮಹಾ ಕುಂಭಮೇಳವನ್ನು ಹಾಡಿ ಹೊಗಳಿದ ಮುಸ್ಲಿಂ ಧರ್ಮಗುರು!

ಪ್ರಯಾಗರಾಜ್ ಈಗ 20 ಕ್ಕೂ ಹೆಚ್ಚು ಸ್ಥಳಗಳಿಗೆ ನೇರ ಮತ್ತು ಏಕ-ನಿಲುಗಡೆ ವಿಮಾನಗಳ ಮೂಲಕ ಸಂಪರ್ಕ ಹೊಂದಿದೆ. ಈ ಹಿಂದಿನ ಮಹಾಕುಂಭಮೇಳದ ಸಮಯದಲ್ಲಿ ದೆಹಲಿಯಿಂದ ಕೇವಲ ಒಂದು ನಿಲುಗಡೆಯ ಸ್ಥಳವಿತ್ತು.