ಜಿ ರಾಮ್ ಜಿ ಮಸೂದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ: ಸಂಸತ್ತಿನ ಆವರಣದಲ್ಲಿ ರಾತ್ರಿ ಪೂರ್ತಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳಿಂದ ಎಚ್ಚರಿಕೆ
ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಜಿ ರಾಮ್ ಜಿ ಮಸೂದೆ ಎಂದು ಬದಲಾಯಿಸುತ್ತಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ರಾತ್ರಿಯಿಡೀ ಪ್ರತಿಭಟನೆ ನಡೆಸಿದವು. ಸಂಸತ್ ಸಂಕೀರ್ಣದಲ್ಲಿ 12 ಗಂಟೆಗಳ ಧರಣಿ ನಡೆಸಿದ ಪ್ರತಿಪಕ್ಷಗಳ ನಾಯಕರು ಜಿ ರಾಮ್ ಜಿ ಮಸೂದೆ ಅಂಗೀಕಾರ ಮಾಡಿದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
-
ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹೆಸರು ಬದಲಾಯಿಸಿ ಜಿ ರಾಮ್ ಜಿ ಮಸೂದೆಯಾಗಿ ( Viksit Bharat Guarantee for Rozgar and Ajeevika Mission) ಅಂಗೀಕರಿಸುವುದನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು (Opposition leaders) ಗುರುವಾರ ರಾತ್ರಿ ಸಂಸತ್ ಸಂಕೀರ್ಣದಲ್ಲಿ 12 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಈ ಮಸೂದೆ ವಿರುದ್ಧ ದೇಶಾದ್ಯಂತ ಬೀದಿಗಿಳಿಯುವುದಾಗಿ ಎಚ್ಚರಿಕೆಯನ್ನು ನೀಡಿದರು. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೂ ರೋಜ್‌ಗಾರ್ ಮತ್ತು ಅಜೀವಿಕಾ ಗ್ರಾಮೀಣ ಮಿಷನ್ (ವಿಬಿ-ಜಿ ರಾಮ್ ಜಿ) ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದಕ್ಕೆ ಮಧ್ಯರಾತ್ರಿಯ ಬಳಿಕ ರಾಜ್ಯಸಭೆಯಲ್ಲಿ (Rajya Sabha) ಅನುಮೋದನೆ ನೀಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್, ಕೇಂದ್ರ ಸರ್ಕಾರವು ಬಡವರ ವಿರೋಧಿ, ಜನ ವಿರೋಧಿ, ರೈತ ವಿರೋಧಿ, ಗ್ರಾಮೀಣ ಬಡವರ ವಿರೋಧಿ ವಿಬಿ-ಜಿ ರಾಮ್ ಜಿ ಮಸೂದೆಯನ್ನು ತಂದಿರುವ ರೀತಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ರದ್ದುಗೊಳಿಸಿರುವ ರೀತಿ ಬುಲ್ಡೋಜರ್ ಹಾಕಿರುವಂತಿದೆ. ಇದು ಬಡವರಿಗೆ ಮಾಡಿರುವ ಅವಮಾನ ಎಂದರು.
ದೆಹಲಿಯಲ್ಲಿ ಮುಂದುವರಿದ ದಟ್ಟ ಮಂಜು; 150 ಕ್ಕೂ ವಿಮಾನ ಸಂಚಾರದಲ್ಲಿ ವ್ಯತ್ಯಯ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾಯಿಸಿರುವುದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಅವರಿಗೆ ಮಾಡಿದ ಅವಮಾನ. ಕೇವಲ ಐದು ಗಂಟೆಗಳ ಕಾಲಾವಕಾಶ ನೀಡಿ ನಮಗೆ ಈ ಮಸೂದೆಯನ್ನು ನೀಡಲಾಯಿತು. ಸರಿಯಾದ ಚರ್ಚೆಗೆ ಅವಕಾಶ ನೀಡಲಾಗಿಲ್ಲ ಎಂದು ಆರೋಪಿಸಿದರು.
VIDEO | Delhi: As TMC MPs continue their protest against the VB-G RAM G Bill, party MP Sagarika Ghose (@sagarikaghose) says, “The MPs of the Trinamool Congress have been sitting on a 12-hour dharna since midnight against the VB-G RAM G Bill. The Modi government is using… pic.twitter.com/IUWUxPLtnK
— Press Trust of India (@PTI_News) December 19, 2025
ಇಂತಹ ಮಹತ್ವದ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕು. ವಿರೋಧ ಪಕ್ಷಗಳು ಅದನ್ನು ಪರಿಶೀಲಿಸಲಿ, ಚರ್ಚಿಸಲಿ. ಆದರೆ ದಬ್ಬಾಳಿಕೆಯ ಪ್ರದರ್ಶನ ಮಾಡಿ ಪ್ರಜಾಪ್ರಭುತ್ವದ ಕೊಲೆ ಮಾಡಬಾರದು ಎಂದು ಅವರು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ದಿನ ದೇಶದ ಕಾರ್ಮಿಕ ಬಲಕ್ಕೆ ದುಃಖದ ದಿನ ಎಂದರು. ನರೇಗಾ ರದ್ದುಗೊಳಿಸುವ ಮೂಲಕ ಮೋದಿ ಸರ್ಕಾರ 12 ಕೋಟಿ ಜನರ ಜೀವನೋಪಾಯದ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿದರು.
1,500 ಜನಸಂಖ್ಯೆಯ ಈ ಗ್ರಾಮದಲ್ಲಿ ಕೇವಲ 3 ತಿಂಗಳಲ್ಲಿ 27 ಸಾವಿರ ಶಿಶುಗಳ ಜನನ! ಏನಿದು ವೈಚಿತ್ರ್ಯ?
ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್ ಮಾತನಾಡಿ, ನರೇಗದಾ ಕರಡು ರಚಿಸಿದಾಗ 14 ತಿಂಗಳುಗಳ ಕಾಲ ಸಮಾಲೋಚನೆಗಳನ್ನು ನಡೆಸಲಾಗಿದೆ. ಇದನ್ನು ಸಂಸತ್ತು ಒಮ್ಮತದಿಂದ ಅಂಗೀಕರಿಸಿತು ಎಂದು ತಿಳಿಸಿದರು.