ಒಂದೇ ಬೈಕ್ ನಲ್ಲಿ 7 ಮಂದಿ ಪ್ರಯಾಣ; ಅಪಾಯಕಾರಿ ವಿಡಿಯೊ ಇಲ್ಲಿದೆ
Viral Video: ಒಂದೇ ಬೈಕ್ ನಲ್ಲಿ ಬರೋಬ್ಬರಿ 7 ಜನ ಯುವಕರು ಸವಾರಿ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮುಂಬೈನ ಸಾಕಿ ನಾಕಾದಲ್ಲಿ ಸಂಚಾರ ದಟ್ಟಣೆಯ ನಡುವೆ ಏಳು ಯುವಕರು ಒಂದೆ ಬೈಕ್ ನಲ್ಲಿ ಕೂತು ಅಪಾಯಕಾರಿಯಾಗಿ ಸವಾರಿ ಮಾಡಿದ್ದಾರೆ. ಅಪ್ರಾಪ್ತ ವಯಸ್ಕರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು.
ಸಂಗ್ರಹ ಚಿತ್ರ -
ಮುಂಬೈ, ಡಿ. 19: ಭಾರತದಲ್ಲಿ ರಸ್ತೆ ನಿಯಮಗಳು ಪದೆ ಪದೇ ಉಲ್ಲಂಘನೆ ಆಗುತ್ತಲೇ ಇರುತ್ತದೆ. ವೇಗವಾಗಿ ವಾಹನ ಚಾಲಾ ಯಿಸುವುದು, ಓವರ್ ಟೇಕ್ ಮಾಡುವುದು, ಹೆಲ್ಮೆಟ್ ಧರಿಸದಿರುವುದು, ಒಂದೆ ಬೈಕ್ ನಲ್ಲಿ ತ್ರಿಬಲ್ ರೈಡ್ ಹೋಗುವುದು ಇಂತಹ ಅನೇಕ ಘಟನೆಗಳು ದಿನನಿತ್ಯ ನಡೆ ಯುತ್ತಲೇ ಇರುತ್ತದೆ. ಜನರಿಗೆ ಪ್ರಾಣಾಪಾಯ ಆಗಬಾರದು, ಅವರ ಜೀವಕ್ಕೆ ರಕ್ಷಣೆ ಒದಗಿಸಬೇಕು ಎಂಬ ಕಾರಣಕ್ಕೆ ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಉಲ್ಲಂಘಿಸುವವರಿಗೆ ದಂಡ, ಜೈಲು ಶಿಕ್ಷೆ ಇತರ ನಿಯಮ ಕೂಡ ಇದೆ. ಹಾಗಿದ್ದರೂ ಜನರಿಗೆ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಇದೆ. ಅಂತೆಯೇ ಅಂತಹ ಟ್ರಾಫಿಕ್ ನಿಯಮದಲ್ಲಿ ದ್ವಿ ಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಕೂರಬೇಕು ಎಂಬ ನಿಯಮ ಇದೆ. ಆದರೆ ಒಂದೇ ಬೈಕ್ ನಲ್ಲಿ ಬರೋಬ್ಬರಿ 7 ಜನ ಯುವಕರು ಸವಾರಿ ಮಾಡುತ್ತಿದ್ದ ಘಟನೆ ಮುಂಬೈನಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ.
ಮುಂಬೈನ ಸಾಕಿ ನಾಕಾದಲ್ಲಿ ಸಂಚಾರ ದಟ್ಟಣೆಯ ನಡುವೆ ಏಳು ಯುವಕರು ಒಂದೆ ಬೈಕ್ ನಲ್ಲಿ ಕೂತು ಅಪಾಯಕಾರಿಯಾಗಿ ಸವಾರಿ ಮಾಡಿದ್ದಾರೆ. ಅಪ್ರಾಪ್ತ ವಯಸ್ಕರು ಸಂಚಾರ ನಿಯಮ ಗಳನ್ನು ಉಲ್ಲಂಘಿಸಿದ್ದು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು. ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ನೆಟ್ಟಿಗರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿ ಆಗ್ರಹಿಸಿದ್ದಾರೆ.
ವಿಡಿಯೋ ನೋಡಿ:
ಸ್ಥಳೀಯ ವರದಿಯ ಪ್ರಕಾರ, ಮುಂಬೈನಲ್ಲಿ ರಾತ್ರಿಯ ವೇಳೆ ಜನದಟ್ಟಣೆಯ ನಡುವೆ ಏಳು ಯುವಕರು ಹೋಂಡಾ ಯೂನಿಕಾರ್ನ್ ಬೈಕ್ ನಲ್ಲಿ ಸವಾರಿ ಮಾಡಿದ್ದು ಮೊಬೈಲ್ ಕ್ಯಾಮೆರಾ ದಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ವೀಡಿಯೊದಲ್ಲಿ ಒಬ್ಬ ಸವಾರನು ಅತ್ಯಂತ ಅಪಾಯ ಕಾರಿಯಾಗಿ ನೇತಾಡುತ್ತಿರುವಂತೆ ಕಂಡುಬಂದಿದೆ. ಸದ್ಯ ನಗರದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳು ಕೂಡ ವ್ಯಕ್ತವಾಗುತ್ತಿದೆ. ಬೈಕ್ ನೋಂದಣಿ ಸಂಖ್ಯೆ MH 03 EY 3649 ಎಂದು ತಿಳಿದು ಬಂದಿದ್ದು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮತ್ತು ತಮ್ಮ ಸ್ವಂತ ಜೀವಗಳಿಗೆ ಮಾತ್ರವಲ್ಲದೆ ಇತರ ರಸ್ತೆ ಬಳಕೆದಾರರ ಜೀವಗಳಿಗೂ ಅಪಾಯವನ್ನುಂಟು ಮಾಡುತ್ತಿದ್ದ ದೃಶ್ಯಗಳನ್ನು ಕಾಣಬಹುದು.
Viral Video: ಗಾಂಜಾ ಬಗ್ಗೆ ದೂರು ನೀಡಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು
ಈ ದೃಶ್ಯಗಳ ಬಗ್ಗೆ ನೆಟ್ಟಿಗರು ನಾನಾತರನಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ ಪೊಲೀಸರು ಮತ್ತು ಮುಂಬೈ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿ ತ್ವರಿತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿ ಏಳು ಮಂದಿಯಲ್ಲಿ ಕೆಲವರು ಅಪ್ರಾಪ್ತರಂತೆ ಕಾಣಿಸಿಕೊಂಡಿದ್ದಾರೆ ಹೀಗಾಗಿ ಅವರ ಪೋಷಕರಿಗೆ ಈ ಬಗ್ಗೆ ಮನವರಿಕೆ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚಿನ ಯುವ ಜನಾಂಗಕ್ಕೆ ಇಂತಹ ವಿಚಾರಗಳ ಬಗ್ಗೆ ತುಂಬಾ ನಿರ್ಲಕ್ಷ್ಯ ಇದೆ. ಅವರಿಗಾಗಿ ಅವರ ಮನೆಯಲ್ಲಿ ತಂದೆ, ತಾಯಿ ಕಾಯುತ್ತಿರಬಹುದು, ಆದರೆ ಅದ್ಯಾವುದರ ಚಿಂತೆ ಇವರಿಗೆ ಇದ್ದಂತಿಲ್ಲ. ಹೀಗಾಗಿ ಘಟನೆಗೆ ಸಂಬಂಧಿಸಿದವರನ್ನು ಪತ್ತೆಹಚ್ವಿ ಎಚ್ಚರಿಕೆಯನ್ನು ಪೊಲೀಸರು ನೀಡಬೇಕು ಎಂದು ಬಳಕೆದಾರ ರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಘಟನೆ ಬಗ್ಗೆ ಮುಂಬೈ ಸಂಚಾರ ಪೊಲೀಸರು ಅಧಿಕೃತವಾಗಿ ಪ್ರತಿಕ್ರಯೆ ನೀಡಿಲ್ಲ.