ನೀಟ್ ಪರೀಕ್ಷೆ: ಮಾಸಾಂತ್ಯಕ್ಕೆ ನಿಲೇಕಣಿ ʼಸುಧಾರಣಾʼ ವರದಿ
ನೀಟ್ ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಕಚೇರಿಗೆ ಖುದ್ದಾಗಿ ನಿಲೇಕಣಿ ನೇತೃತ್ವದ ಕಾರ್ಯಪಡೆ ಭೇಟಿ ನೀಡಿ, ಹಿಂದಿನ ಸಮಿತಿ ಸದಸ್ಯರೊಂದಿಗೂ ಈ ಸಮಿತಿಯು ಚರ್ಚಿಸಿದೆ ಎಂದು ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ತಿಳಿಸಿದರು.
-
ದೆಹಲಿ: ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಲು, ಸುಧಾರಣೆ ಮಾಡಲು ಕೇಂದ್ರ ಸರ್ಕಾರ ರಚಿಸಿರುವ ನಂದನ್ ನಿಲೇಕಣಿ ನೇತೃತ್ವದ ಉನ್ನತ ಕಾರ್ಯಪಡೆ, ಈ ತಿಂಗಳ ಅಂತ್ಯಕ್ಕೆ ತನ್ನ ಮೊದಲ ವರದಿ ಸಲ್ಲಿಸುವ ಸಾಧ್ಯತೆಯಿದೆ. ಹೀಗೆಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ನೀಟ್ ಪರೀಕ್ಷೆಗಳನ್ನು ನಡೆಸುವ ಎನ್‌ಟಿಎ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ) ಕಚೇರಿಗೆ ಖುದ್ದಾಗಿ ನಿಲೇಕಣಿ ನೇತೃತ್ವದ ಕಾರ್ಯಪಡೆ ಭೇಟಿ ನೀಡಿ, ಹಿಂದಿನ ಸಮಿತಿ ಸದಸ್ಯರೊಂದಿಗೂ ಈ ಸಮಿತಿ ಯು ಚರ್ಚಿಸಿದೆ ಎಂದು ಸರ್ಕಾರದ ಹಿರಿಯ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: NTAಗೆ ಮೇಜರ್ ಸರ್ಜರಿ; 600 ಅಧಿಕಾರಿಗಳಿಗೆ ಗೇಟ್‌ಪಾಸ್: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಖಡಕ್ ಆದೇಶ
ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ನೀಲೇಕಣಿ ಸಮಿತಿಗೆ ನೆರವಾಗುತ್ತಿರುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಜಂಟಿ ಕಾರ್ಯದರ್ಶಿ ಗೆ ಸೂಚಿಸಿತು. ಸುಧಾರಣೆಯಾಗಿದೆಯೇ ಎಂದು ಗಮನಿಸಬೇಕು ಎಂದು ಸರ್ವೋಚ್ಚ ನ್ಯಾಯಪೀಠ ಹೇಳಿದೆ. ‘ಸ್ವೀಕರಿಸಲಾದ ಎಲ್ಲ ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ಸಮಿತಿಗೆ ನೀಡಲಾಗಿದೆ.
ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಅವರ ನೇತೃತ್ವದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು ನಡೆಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಾಂಸ್ಥಿಕಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕೆಂಬುದೇ ಈ ವಿಷಯ ದಲ್ಲಿ ಪ್ರಮುಖ ಅಂಶ ಎಂದು ಪೀಠವು ಮೆಹ್ತಾಗೆ ತಿಳಿಸಿತು