ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂದಿನ ವರ್ಷದಿಂದ ನೀಟ್ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ; ಕೇಂದ್ರದಿಂದ ಮಹತ್ವದ ಘೋಷಣೆ

ಮುಂದಿನ ವರ್ಷದಿಂದ ನೀಟ್ ಯುಜಿ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಘೋಷಿಸಿದ್ದಾರೆ. ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ NEET-UG 2026 ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುತ್ತದೆ.

ಮುಂದಿನ ವರ್ಷದಿಂದ ನೀಟ್ ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar May 15, 2026 12:52 PM

ನವದೆಹಲಿ: ಮುಂದಿನ ವರ್ಷದಿಂದ ನೀಟ್ ಯುಜಿ ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಘೋಷಿಸಿದ್ದಾರೆ. ಈಗಾಗಲೇ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ NEET-UG 2026 ಮರುಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಶುಕ್ರವಾರ ಪ್ರಕಟಿಸಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ್, ಜೂನ್ 14 ರೊಳಗೆ NEET UG 2026 ರ ಪ್ರವೇಶ ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಖಚಿತವಾದ ತಕ್ಷಣ, ವಿದ್ಯಾರ್ಥಿಗಳ ನ್ಯಾಯಯುತ ಅವಕಾಶದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ನಾವು ತಕ್ಷಣ ನಿರ್ಧರಿಸಿದ್ದೇವೆ" ಎಂದು ಪ್ರಧಾನ್ ಹೇಳಿದ್ದಾರೆ.

ಭಾರತ ಸರ್ಕಾರದ ಅನುಮೋದನೆಯೊಂದಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ NEET (UG) 2026 ಮರುಪರೀಕ್ಷೆಯನ್ನು 2026ರ ಜೂನ್ 21, ಭಾನುವಾರಕ್ಕೆ ನಿಗದಿಪಡಿಸಿದೆ ಎಂದು ಎನ್‌ಟಿಎ ತಿಳಿಸಿದೆ. ಪರೀಕ್ಷೆಗೆ ಸಂಬಂಧಿಸಿದ ಅಧಿಕೃತ ಮತ್ತು ನಿಖರ ಮಾಹಿತಿಗಾಗಿ ಅಭ್ಯರ್ಥಿಗಳು ಹಾಗೂ ಪೋಷಕರು ಎನ್‌ಟಿಎಯ ಅಧಿಕೃತ ಪ್ರಕಟಣೆಗಳನ್ನೇ ಅವಲಂಬಿಸಬೇಕು ಎಂದು ಸಂಸ್ಥೆ ಸಲಹೆ ನೀಡಿದೆ.

ನೀಟ್ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಯು ಈಗ ನಿರ್ಣಾಯಕ ಹಂತವನ್ನು ತಲುಪಿದೆ. ಮೇ 7ರ ಸುಮಾರಿಗೆ ಎನ್‌ಟಿಎ (NTA) ಕುಂದುಕೊರತೆ ಪರಿಹಾರ ವ್ಯವಸ್ಥೆಯ ಮೂಲಕ ಮಹತ್ವದ ದೂರುಗಳನ್ನು ಸ್ವೀಕರಿಸಲಾಗಿತ್ತು. ಕೆಲವು 'ಊಹೆ ಪತ್ರಿಕೆಗಳಲ್ಲಿ ಇದ್ದ ಪ್ರಶ್ನೆಗಳು ಈ ವರ್ಷದ ಮೂಲ ಪ್ರಶ್ನೆ ಪತ್ರಿಕೆಯ ಸೆಟ್‌ನಲ್ಲಿಯೂ ಕಾಣಿಸಿಕೊಂಡಿವೆ ಎಂಬ ಗಂಭೀರ ಆಕ್ಷೇಪಣೆಗಳು ಕೇಳಿಬಂದಿದ್ದವು. ಈ ದೂರುಗಳು ಕಂಡುಬಂದ ತಕ್ಷಣವೇ ಎನ್​ಟಿಎ ಮತ್ತು ಸರ್ಕಾರವು ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಸೇರಿ ಪ್ರಾಥಮಿಕ ತನಿಖೆಯನ್ನು ಆರಂಭಿಸಿದವು. ಇದಾದ ಬಳಿಕ ಈ ವಿಷಯವನ್ನು ಭಾರರ ಸರ್ಕಾರದ ಸಂಬಂಧಪಟ್ಟ ಸಂಸ್ಥೆಗಳುಗೆ ಹಸ್ತಾಂತರಿಸಲಾಯಿತು.

ಜೂನ್‌ 21ರಂದು ನೀಟ್‌ ಮರು ಪರೀಕ್ಷೆ; ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಂತರ ಎನ್‌ಟಿಎ ಹೊಸ ದಿನಾಂಕ ಪ್ರಕಟ

ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷಾ ವ್ಯವಸ್ಥೆಯತ್ತ ಕೊಂಡೊಯ್ಯುವ ಅವಶ್ಯಕತೆಯಿದೆ. ಪ್ರಸ್ತುತ ನಡೆಯುವ ಪೇಪರ್ ಪೆನ್ ಆಧಾರಿತ ಪರೀಕ್ಷೆ​ ಬಿಟ್ಟು ಆನ್​ಲೈನ್​ ಮೂಡ್​ಗೆ ಬದಲಾಯಿಸಬೇಕು ಎಂದು ಧರ್ಮೇಂದ್ರ ಪ್ರಧಾನ್ ಸೂಚಿಸಿದ್ದಾರೆ.