ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶಾದ್ಯಂತ ಇಂಧನ ಕೊರತೆಯಾಗಿದ್ದರೂ ಉತ್ತರ ಪ್ರದೇಶದ ಈ ಹಳ್ಳಿಯಲ್ಲಿಲ್ಲ ಎಲ್‌ಪಿಜಿ ಸಮಸ್ಯೆ; ಹೇಗೆ ಅಂತೀರಾ? ಈ ಸ್ಟೋರಿ ಓದಿ

No LPG shortage in this village: ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿಗೆ ಇಂಧನ ಕೊರತೆಯ ಸಮಸ್ಯೆ ತಟ್ಟೇ ಇಲ್ಲ. ದೇಶದ ಹಲವು ಭಾಗಗಳಲ್ಲಿ ಜನರು ಸಿಲಿಂಡರ್‌ಗಳಿಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದರೆ ಈ ಹಳ್ಳಿಯ ಜನರು ಮಾತ್ರ ನಿರಾಳವಾಗಿದ್ದಾರೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

ಉತ್ತರ ಪ್ರದೇಶದ ಈ ಹಳ್ಳಿಯಲ್ಲಿಲ್ಲ ಎಲ್‌ಪಿಜಿ ಸಮಸ್ಯೆ

ಉತ್ತರ ಪ್ರದೇಶದ ಎಕೌನಿ ಗ್ರಾಮದಲ್ಲಿರುವ ಬಯೋಗ್ಯಾಸ್‌ ಘಟಕ -

Priyanka P
Priyanka P Apr 6, 2026 9:28 PM

ಲಖನೌ, ಏ. 6: ಇಸ್ರೇಲ್-ಅಮೆರಿಕ-ಇರಾನ್ ಸಂಘರ್ಷವು ಭಾರತದಾದ್ಯಂತ ಎಲ್‌ಪಿಜಿ ಸರಬರಾಜನ್ನು ಅಡ್ಡಿಪಡಿಸಿದೆ. ಎಲ್ಲೆಡೆ ಇಂಧನ ಕೊರತೆ ಕಾಣಿಸಿಕೊಂಡಿದೆ. ಹಳ್ಳಿಗಳಲ್ಲೂ ಬಹುತೇಕರು ಎಲ್‌ಪಿಜಿ ಸಿಲಿಂಡರ್‌ಗೆ (LPG crisis) ಒಗ್ಗಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಆದರೆ ಉತ್ತರ ಪ್ರದೇಶದ (Uttar Pradesh) ಒಂದು ಸಣ್ಣ ಹಳ್ಳಿಯು ಜೈವಿಕ ಅನಿಲ ಬಳಕೆ ಮಾಡುತ್ತಿರುವುದರಿಂದ ಎಲ್‌ಪಿಜಿ ಕೊರತೆ ಯಾವುದೇ ಪರಿಣಾಮ ಬೀರಿಲ್ಲ.

ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಎಕೌನಿ ಗ್ರಾಮದ 150 ಕುಟುಂಬಗಳ ಪೈಕಿ ಸುಮಾರು 125 ಕುಟುಂಬಗಳು ಅಡುಗೆಗಾಗಿ ಬಯೋಗ್ಯಾಸ್ ಬಳಸುತ್ತಿದೆ. ದೇಶದ ಹಲವು ಭಾಗಗಳಲ್ಲಿ ಜನರು ಸಿಲಿಂಡರ್‌ಗಳಿಗಾಗಿ ಸಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎಲ್‌ಪಿಜಿ ಬಿಕ್ಕಟ್ಟು ಈ ಹಳ್ಳಿಗೆ ತಟ್ಟೇ ಇಲ್ಲ ಎನ್ನುವುದು ವಿಶೇಷ.

ಇಲ್ಲಿನ ನಿವಾಸಿಗಳು ಬೆಳಗ್ಗೆ ಮೂರು ಗಂಟೆ ಮತ್ತು ಸಂಜೆ ಮೂರು ಗಂಟೆಗಳ ಕಾಲ ಜೈವಿಕ ಅನಿಲ ಪಡೆಯುತ್ತಾರೆ. ಇದನ್ನು ಅವರು ದೈನಂದಿನ ಅಡುಗೆ ಅಗತ್ಯಗಳಿಗಾಗಿ ಬಳಸುತ್ತಾರೆ. ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಲಾದ ಈ ವ್ಯವಸ್ಥೆಯು ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ಕೈ ಹಿಡಿದಿದೆ.

ಎಲ್‌ಪಿಜಿ ವಿತರಣೆ ಬಗ್ಗೆ ದೈನಂದಿನ ಮಾಹಿತಿ, ಕಾಳ ಸಂತೆಯಲ್ಲಿ ಮಾರಾಟ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ

2022ರಲ್ಲಿ ಸ್ಥಳೀಯ ನಿವಾಸಿ ಚಂದ್ರ ಪ್ರಕಾಶ್ ಸಿಂಗ್ ಎಂಬವವರು ಗ್ರಾಮದಲ್ಲಿ ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸಿ ಮನೆಗಳಿಗೆ ಸಂಪರ್ಕಗಳನ್ನು ನೀಡುವ ಮೂಲಕ ಈ ಕ್ರಾಂತಿಗೆ ಮುನ್ನಡಿ ಬರೆದರು. ಆ ಸಮಯದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಿಂದ ರಾಷ್ಟ್ರವ್ಯಾಪಿ ಎಲ್‌ಪಿಜಿ ಕೊರತೆ ಕಾಡಿದಾಗ ತಮ್ಮನ್ನು ಈ ಯೋಜನೆ ಕಾಪಾಡಲಿದೆ ಎನ್ನುವ ಕಲ್ಪನೆಯೂ ಸ್ಥಳೀಯರಿಗ ಎಇರಲಿಲ್ಲ.

ಗ್ರಾಮಸ್ಥರು ಈ ನಿರ್ಧಾರ ಈಗ ಫಲ ನೀಡಿದೆ ಎಂದು ಹೇಳಿದ್ದಾರೆ. ಗೃಹಿಣಿ ಕಾಂಚನ್ ಸಿಂಗ್ ಮಾತನಾಡಿ, ಮೊದಲು ಈ ಗ್ಯಾಸ್‌ ಸಂಪರ್ಕವು ದಿನನಿತ್ಯದ ಉಪಯೋಗಕ್ಕೆ ಅಗತ್ಯ ಎಂದು ಭಾಸವಾಗಿತ್ತು. ಇದೀಗ ಎಲ್‌ಪಿಜಿ ಬಿಕ್ಕಟ್ಟಿನ ಸಮಯದಲ್ಲಿ ಅದರ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಿದೆ ಎಂದಿದ್ದಾರೆ.

ಗ್ರಾಮಸ್ಥರು ಇದೀಗ ಗ್ಯಾಸ್‌ ಸರಬರಾಜು ವೇಳೆಗೆ ತಮ್ಮ ದಿನಚರಿಯನ್ನು ಹೊಂದಿಸಿಕೊಂಡಿದ್ದು, ಆಗಲೇ ಅಡುಗೆ ಮಾಡುತ್ತಿದ್ದಾರೆ. ಅದಾಗ್ಯೂ ಈ ಯೋಜನೆ ದೀರ್ಘ ಸರದಿಯಲ್ಲಿ ಕಾಯುವುದನು ತಪ್ಪಿಸಿದೆ ಎನ್ನುವುದು ಸ್ಥಳೀಯರ ಮಾತು. ಇಂಡಕ್ಷನ್ ಕುಕ್‌ಟಾಪ್‌ಗಳಂತಹ ಪರ್ಯಾಯ ಮಾರ್ಗಗಳಿದ್ದರೂ ಅವು ದುಬಾರಿ. ಹೀಗಾಗಿ ಜೈವಿಕ ಅನಿಲದ ಈ ಯೋಜನೆ ಬಹಳಷ್ಟು ಅನುಕೂಲ ಒದಗಿಸಿದೆ ಎಂದಿದ್ದಾರೆ.

ಹೊರ್ಮುಜ್‌ ಜಲಸಂಧಿ ದಾಟಿ ದೇಶದತ್ತ ಧಾವಿಸುತ್ತಿದೆ ಎಲ್‌ಪಿಜಿ ಹೊತ್ತ 7ನೇ ಹಡಗು

ಖರ್ಚು ಕಡಿಮೆ

ಈ ಬಗ್ಗೆ ಅಖಿಲೇಶ್ ಸಿಂಗ್ ಪ್ರತಿಕ್ರಿಯಿಸಿ, ಎಲ್‌ಪಿಜಿ ಬಿಕ್ಕಟ್ಟಿನ ಹೊರತಾಗಿಯೂ ಬಯೋಗ್ಯಾಸ್ ಸೌಲಭ್ಯವು ನಮ್ಮನ್ನು ಪಾರು ಮಾಡಿದೆ ಎಂದು ಹೇಳಿದರು. ಬಯೋಗ್ಯಾಸ್‌ ಖರರ್ಚೂ ಕಡಿಮೆ ಇದ್ದು, ಇದಕ್ಕೆ ಎಲ್‌ಪಿಜಿ ಸಿಲಿಂಡರ್‌ನ ಅರ್ಧದಷ್ಟು ವೆಚ್ಚವಾಗುತ್ತದೆ ಎಂದು ತಿಳಿಸಿದರು.

ಚಂದ್ರ ಪ್ರಕಾಶ್ ಸಿಂಗ್ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಬಿ.ಟೆಕ್ ಮುಗಿಸಿದ ನಂತರ ಉದ್ಯೋಗ ಅರಸಲಿಲ್ಲ. ಬದಲಾಗಿ ತಮ್ಮ ತಂದೆಯೊಂದಿಗೆ ತಮ್ಮ ಗೋಶಾಲೆ ನೋಡಿಕೊಳ್ಳತೊಡಗಿದರು. ಒಂದು ದಶಕದ ಹಿಂದೆ ಸುಮಾರು 50 ಹಸುಗಳಿಂದ ಪ್ರಾರಂಭವಾದ ಹೈನುಗಾರಿಕೆ ಇಂದು ಅವರ ಕೈ ಹಿಡಿದಿದೆ. ಇಂದು ಸುಮಾರು 200 ಹಸುಗಳಿವೆ.

ಪ್ರತಿದಿನ ಉತ್ಪತ್ತಿಯಾಗುವ ಸುಮಾರು 3,000 ಕೆಜಿ ಹಸುವಿನ ಸಗಣಿ ವ್ಯರ್ಥವಾಗುತ್ತಿರುವುದನ್ನು ಗಮನಿಸಿದ ಸಿಂಗ್, ಜೈವಿಕ ಅನಿಲ ಸ್ಥಾವರವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಗ್ರಾಮಸ್ಥರ ಬೆಂಬಲದೊಂದಿಗೆ, ಸ್ಥಾವರವನ್ನು ನಿರ್ಮಿಸಲಾಯಿತು. ಆ ಮೂಲಕ ಸಗಣಿಯನ್ನು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಇಂಧನ ಮೂಲವನ್ನಾಗಿ ಪರಿವರ್ತಿಸಲಾಯಿತು.