ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಓರ್ವ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ
Jagannath Rath Yatra: ಒಡಿಶಾದ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟು ಸುಮಾರು 100 ಮಂದಿ ಗಾಯಗೊಂಡಿದ್ದಾರೆ. ಬಡಾ ದಂಡಾ (ಗ್ರಾಂಡ್ ರೋಡ್) ಎಂಬಲ್ಲಿ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಭುವನೇಶ್ವರ, ಜು. 16: ಒಡಿಶಾದ ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ (Jagannath Rath Yatra) ಆರಂಭವಾಗಿದೆ. ರಥಯಾತ್ರೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು ಓರ್ವ ಮೃತಪಟ್ಟಿದ್ದು, ಸುಮಾರು 100 ಮಂದಿ ಗಾಯಗೊಂಡ ಘಟನೆ ಗುರುವಾರ (ಜುಲೈ 16) ಸಂಜೆ ನಡೆದಿದೆ. ಬಡಾ ದಂಡಾ (ಗ್ರಾಂಡ್ ರೋಡ್) ಎಂಬಲ್ಲಿ ಈ ಘಟನೆ ನಡೆದಿದೆ. ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ದೇವಿಯ ರಥವನ್ನು ಎಳೆಯುವ ದೃಶ್ಯ ನೋಡಲು ಈ ಸ್ಥಳದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು.
ಗಾಯಗೊಂಡ ಭಕ್ತರನ್ನು ಕೂಡಲೇ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಕೆಲವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಪ್ರಾಥಮಿಕ ವರದಿ ಹೇಳಿದೆ. ಮೂಲಗಳ ಪ್ರಕಾರ ಸುಮಾರು 100 ಜನರು ಗಾಯಗೊಂಡಿದ್ದಾರೆ, ಆದರೆ ಅಧಿಕಾರಿಗಳು ಇನ್ನೂ ಅಂತಿಮ ಸಾವುನೋವುಗಳ ಸಂಖ್ಯೆಯನ್ನು ದೃಢಪಡಿಸಿಲ್ಲ. ʼʼಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆʼʼ ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ನವೀನ್ ಪಟ್ನಾಯಕ್ ಅವರ ಎಕ್ಸ್ ಪೋಸ್ಟ್:
ରଥଯାତ୍ରା ସମୟରେ ବଡ଼ଦାଣ୍ଡର ଭିଡ଼ରେ ଶ୍ରଦ୍ଧାଳୁଙ୍କ ପ୍ରାଣହାନୀ ହୋଇଥିବା ଖବର ପାଇ ମୁଁ ଅତ୍ୟନ୍ତ ଦୁଃଖିତ। ପ୍ରାଣ ହରାଇଥିବା ଶ୍ରଦ୍ଧାଳୁଙ୍କ ଅମର ଆତ୍ମାର ସଦଗତି ସହ ଆହତ ହୋଇଥିବା ଶତାଧିକ ଭକ୍ତଙ୍କ ଆଶୁଆରୋଗ୍ୟ କାମନା କରୁଛି। ଏପରି ଦୁଃଖଦ ସମୟରେ ସଭିଙ୍କ ସହାୟତା ପାଇଁ ବିଜୁ ଜନତା ଦଳର ସମସ୍ତ କର୍ମୀ ପୂର୍ଣ୍ଣ ସହଯୋଗ ଯୋଗାଇ ଦେବେ। ମୁଁ…
— Naveen Patnaik (@Naveen_Odisha) July 16, 2026
ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಐಜಿಪಿ ಡಾ. ಉಮಾಶಂಕರ್ ದಾಶ್ ಈ ಬಗ್ಗೆ ಮಾಹಿತಿ ನೀಡಿ, "ಇಲ್ಲಿಯವರೆಗೆ ಉಸಿರುಗಟ್ಟಿ ತೊಂದರೆಗೆ ಒಳಗಾಗಿದ್ದ, ಜನಸಂದಣಿಯೊಳಗೆ ಒತ್ತಡಕ್ಕೊಳಗಾಗಿದ್ದ ಸುಮಾರು 100 ಮಂದಿಯನ್ನು ರಕ್ಷಿಸಿದ್ದೇವೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆʼʼ ಎಂದು ಹೇಳಿದ್ದಾರೆ.
ಪುರಿ ವಾರ್ಷಿಕ ರಥಯಾತ್ರೆ ವೇಳೆ ಭಕ್ತರ ನೆರವಿಗೆ ಧಾವಿಸಿದ ರಿಲಯನ್ಸ್ ಫೌಂಡೇಷನ್
"ವಿಶ್ವ ಪ್ರಸಿದ್ಧ ರಥಯಾತ್ರೆಯ ಸಮಯದಲ್ಲಿ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸೇವೆ ಮತ್ತು ಸುರಕ್ಷತೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆ" ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಭರವಸೆ ನೀಡಿದ್ದಾರೆ. ಲಕ್ಷಾಂತರ ಭಕ್ತರು ಭಾಗವಹಿಸುವ ಈ ರಥ ಯಾತ್ರೆಯನ್ನು ಅಪಘಾತ ಮುಕ್ತವಾಗಿಸಲು ಮತ್ತು ಸುಗಮಗೊಳಿಸಲು 100ಕ್ಕೂ ಹೆಚ್ಚು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ದೊಡ್ಡ ಪ್ರಮಾಣದ ತಾತ್ಕಾಲಿಕ ಆಸ್ಪತ್ರೆ ಸ್ಥಾಪಿಸಲಾಗಿದೆ. ಆಂಬ್ಯುಲೆನ್ಸ್‌ಗಳನ್ನು ಕೂಡ ಸಜ್ಜುಗೊಳಿಸಲಾಗಿದೆ ಎಂದು ಅವರು ಯಾತ್ರೆ ಆರಂಭಕ್ಕೂ ಮುನ್ನ ಅವರು ತಿಳಿಸಿದ್ದರು.
ಭಕ್ತರ ಸುರಕ್ಷತೆಗೆ ಆದ್ಯತೆ ನೀಡಿ
ಘಟನೆಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯ ಸರ್ಕಾರವು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ಭಕ್ತರ ಸುರಕ್ಷತೆ ಖಚಿತಪಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
"ರಥಯಾತ್ರೆಯ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಭಕ್ತರೊಬ್ಬರು ಮೃತಪಟ್ಟ ಸುದ್ದಿ ತಿಳಿದು ದುಃಖವಾಗಿದೆ. ಪ್ರಾಣ ಕಳೆದುಕೊಂಡ ಭಕ್ತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ನೂರಕ್ಕೂ ಹೆಚ್ಚು ಗಾಯಗೊಂಡ ಭಕ್ತರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಜನಸಂದಣಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ರಾಜ್ಯ ಸರ್ಕಾರ ಭಕ್ತರು ಅನುಕೂಲ ಮಾಡಿಕೊಡಬೇಕುʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ನಾಗ ಚೈತನ್ಯ ದಂಪತಿ
ವಾರ್ಷಿಕ ರಥಯಾತ್ರೆ
ಭವ್ಯ ಜಗನ್ನಾಥ ರಥಯಾತ್ರೆಯು ಒಡಿಶಾದ ಪುರಿಯಲ್ಲಿ ವಾರ್ಷಿಕವಾಗಿ ಆಚರಿಸುವ ಧಾರ್ಮಿಕ ವಿಧಿ ವಿಧಾನ. ಯಾತ್ರೆಯ ಸಮಯದಲ್ಲಿ, ಭಕ್ತರು ಜಗನ್ನಾಥ, ಆತನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯ ಬೃಹತ್ ಅಲಂಕೃತ ಮರದ ರಥಗಳನ್ನು ಮುಖ್ಯ ದೇವಾಲಯದಿಂದ ಗುಂಡಿಚಾ ದೇವಾಲಯಕ್ಕೆ ಎಳೆಯುತ್ತಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.