ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shidlaghatta News: ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ತಾಂತ್ರಿಕ ಸಮಸ್ಯೆಗಳಿದ್ದರೆ ಮಾತ್ರ ಕಚೇರಿಗೆ ಭೇಟಿ ನೀಡಿ: ಸಿಡಿಪಿಒ ವಿದ್ಯಾ ವಸ್ತ್ರದ್

ಯೋಜನೆಯ ಹಣ ಖಾತೆಗೆ ಜಮೆಯಾಗದಿರುವುದು, ಬ್ಯಾಂಕ್ ಖಾತೆ-ಆಧಾರ್ ಜೋಡಣೆ, ಇ-ಕೆವೈಸಿ ಅಥವಾ ಇತರೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮಾತ್ರ ಸಂಬಂಧಿತ ದಾಖಲೆಗಳೊಂದಿಗೆ ಸಿಡಿಪಿಒ ಕಚೇರಿಗೆ ಭೇಟಿ ನೀಡಬೇಕು. ಅಂತಹ ಪ್ರಕರಣಗಳನ್ನು ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ

ಹೊಸ ಅರ್ಜಿ ಅಗತ್ಯವಿಲ್ಲ; ತಾಂತ್ರಿಕ ಸಮಸ್ಯೆಗಳಿದ್ದರೆ ಕಚೇರಿಗೆ ಭೇಟಿ ನೀಡಿ

ಸಿಡಿಪಿಒ ವಿದ್ಯಾ ವಸ್ತ್ರದ್ -

Profile
Ashok Nayak Jul 16, 2026 8:47 PM

ಶಿಡ್ಲಘಟ್ಟ: ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯಡಿ ಈಗಾಗಲೇ ನೋಂದಾಯಿಸಿ ಕೊಂಡಿರುವ ಫಲಾನುಭವಿಗಳು ಮತ್ತೊಮ್ಮೆ ಹೊಸ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಶಿಡ್ಲಘಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವಿದ್ಯಾ ವಸ್ತ್ರದ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸಿಡಿಪಿಒ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳು ಹಾಗೂ ವದಂತಿಗಳಿಂದ ಫಲಾನುಭವಿಗಳು ಗೊಂದಲಕ್ಕೊಳಗಾಗಬಾರದು ಎಂದು ಮನವಿ ಮಾಡಿದರು.

"ಯೋಜನೆಯಡಿ ಈಗಾಗಲೇ ಹೆಸರು ನೋಂದಾಯಿಸಿರುವ ಮಹಿಳೆಯರು ಹೊಸ ಅರ್ಜಿ ಸಲ್ಲಿಸ ಬೇಕೆಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಸರ್ಕಾರದಿಂದ ಇಂತಹ ಯಾವುದೇ ನಿರ್ದೇಶನ ನೀಡಲಾ ಗಿಲ್ಲ. ಆದ್ದರಿಂದ ಯಾರೂ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ," ಎಂದು ಹೇಳಿದರು.

ಇದನ್ನೂ ಓದಿ: Shidlaghatta News: ಎಸ್‌ಐಆರ್ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅಗತ್ಯ, ಮತದಾನದ ಹಕ್ಕು ಉಳಿಸಿಕೊಳ್ಳಿ: ತಹಶೀಲ್ದಾರ್ ಗಗನ ಸಿಂಧು

ಯೋಜನೆಯ ಹಣ ಖಾತೆಗೆ ಜಮೆಯಾಗದಿರುವುದು, ಬ್ಯಾಂಕ್ ಖಾತೆ-ಆಧಾರ್ ಜೋಡಣೆ, ಇ-ಕೆವೈಸಿ ಅಥವಾ ಇತರೆ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಮಾತ್ರ ಸಂಬಂಧಿತ ದಾಖಲೆಗಳೊಂದಿಗೆ ಸಿಡಿಪಿಒ ಕಚೇರಿಗೆ ಭೇಟಿ ನೀಡಬೇಕು. ಅಂತಹ ಪ್ರಕರಣಗಳನ್ನು ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಫಲಾನುಭವಿಗಳು ಮಧ್ಯವರ್ತಿಗಳ ಅಥವಾ ಅನಧಿಕೃತ ಮೂಲಗಳ ಮಾಹಿತಿ ನಂಬದೆ, ಇಲಾಖೆ ಯಿಂದ ದೊರೆಯುವ ಅಧಿಕೃತ ಮಾಹಿತಿಯನ್ನೇ ಅನುಸರಿಸಬೇಕು. ಯಾವುದೇ ಅನುಮಾನ ಗಳಿದ್ದರೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆಯುವಂತೆ ಅವರು ಸಲಹೆ ನೀಡಿದರು.

ಸರ್ಕಾರದ ಮಾರ್ಗಸೂಚಿಯಂತೆ ಗೃಹಲಕ್ಷ್ಮಿ ಯೋಜನೆ ಸಮರ್ಪಕವಾಗಿ ಜಾರಿಯಲ್ಲಿದ್ದು, ಅರ್ಹ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ಯೋಜನೆಯ ಸೌಲಭ್ಯ ತಲುಪಿಸಲು ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಿಡಿಪಿಒ ವಿದ್ಯಾ ವಸ್ತ್ರದ್ ತಿಳಿಸಿದರು.