Operation Sindoor: ಭಾರತದ ದಾಳಿಗೆ ಬೆಚ್ಚಿಬಿದ್ದ ಪಾಕ್; ಪ್ರಧಾನಿ ಶೆಹಬಾಜ್ ಷರೀಫ್ ಅಡಗುತಾಣಕ್ಕೆ ಶಿಫ್ಟ್
ಇದೀಗ ಭಾರತ ನಡೆಸುತ್ತಿರುವ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಪಾಕಿಸ್ತಾನದ ವಿವಿಧ ನಗರಗಳಿಗೆ ಭಾರತದ ಮೂರೂ ಸೇನೆಗಳಿಂದ ದಾಳಿ ನಡೆಸಲಾಗುತ್ತಿದೆ. ಜತೆಗೆ ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಅಧಿಕೃತ ನಿವಾಸದ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ನಡೆದಿದ್ದು, ಅವರನ್ನು ಅಡಗು ತಾಣಕ್ಕೆ ಶಿಫ್ಟ್ ಮಾಡಲಾಗಿದೆ.


ಹೊಸದಿಲ್ಲಿ: ಪಾಕಿಸ್ತಾನದ ವಿರುದ್ದ ಭಾರತ ಮೇ 8ರಂದು 2ನೇ ದಿನವೂ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು (Operation Sindoor) ಮುಂದುವರಿಸಿದೆ. ಈ ಮಧ್ಯೆ ಪಾಕಿಸ್ತಾನವೂ ಪ್ರತಿ ದಾಳಿ ನಡೆಸಿ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿ ಸಂಪೂರ್ಣವಾಗಿ ವಿಫಲವಾಗಿದೆ. ಇದೀಗ ಭಾರತ ನಡೆಸುತ್ತಿರುವ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದೆ. ಪಾಕಿಸ್ತಾನದ ವಿವಿಧ ನಗರಗಳಿಗೆ ಭಾರತದ ಮೂರೂ ಸೇನೆಗಳಿಂದ ದಾಳಿ ನಡೆಸಲಾಗುತ್ತಿದೆ. ಜತೆಗೆ ಪಾಕ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅಧಿಕೃತ ನಿವಾಸದ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ ನಡೆದಿದ್ದು, ಅವರನ್ನು ಅಡಗು ತಾಣಕ್ಕೆ ಶಿಫ್ಟ್ ಮಾಡಲಾಗಿದೆ.
Big news : As per reports, Pakistani PM Shehbaz Sharif has gone into hiding in a bunker.
— Zubair chowdhary (@ZubairChowdhary) May 8, 2025
Jai hind 🇮🇳 #IndianArmy #opretionsindoor2#IndiaPakistanWar pic.twitter.com/15coGtFuAC
ಇತ್ತ ಬಂದಲು ನಗರಿ ಕರಾಚಿಯಲ್ಲಿಯೂ ಭಾರತದ ದಾಳಿ ಮುಂದುವರಿದಿದೆ. ಸಂಜೆ ಸುಮಾರು 1 ಗಂಟೆಗಳ ಕಾಲ ಭಾರತದ ಮೇಲೆ ದಾಳಿ ನಡೆಸಿದ್ದ ಪಾಕ್ ಪ್ರತಿಫಲ ಅನುಭವಿಸುತ್ತಿದೆ.