PM Kisan Scheme: ತಿಂಗಳಾಂತ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ 19ನೇ ಕಂತು ಬಿಡುಗಡೆ? ಅರ್ಜಿ ಸಲ್ಲಿಕೆ ಹೇಗೆ?
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019ರ ಫೆಬ್ರವರಿ 24ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈವರೆಗೆ 18 ಕಂತು ಜಾರಿಯಾಗಿದ್ದು, ಸರ್ಕಾರವು ಅಕ್ಟೋಬರ್ 05, 2024 ರಂದು ಬಿಡುಗಡೆ ಮಾಡಿತು. ಫಲಾನುಭವಿಗಳು ಈಗ ಯೋಜನೆಯ 19ನೇ ಕಂತಿಗಾಗಿ ಕಾಯುತ್ತಿದ್ದಾರೆ.
![ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆ ಯಾವಾಗ?](https://cdn-vishwavani-prod.hindverse.com/media/original_images/PM_Kisan_Scheme.jpg)
PM Kisan Scheme
![Profile](https://vishwavani.news/static/img/user.png)
ನವದೆಹಲಿ: ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2019ರ ಫೆಬ್ರವರಿ 24ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM Kisan Scheme) ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಮೂಲಕ ಅರ್ಹ ರೈತರು ವಾರ್ಷಿಕವಾಗಿ 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ 2 ಸಾವಿರ ರೂ. ಗಳಂತೆ ನೀಡಲಾಗುತ್ತದೆ. ಸದ್ಯ ಈ ಯೋಜನೆಯ ಅನುಗುಣವಾಗಿ ಈ ವರೆಗೆ 18 ಕಂತು ಜಾರಿಯಾಗಿದ್ದು, ಸರ್ಕಾರವು 2024ರ ಅಕ್ಟೋಬರ್ 5ರಂದು ಬಿಡುಗಡೆ ಮಾಡಿತು. ಫಲಾನುಭವಿಗಳು ಈಗ ಯೋಜನೆಯ 19 ನೇ ಕಂತಿಗಾಗಿ ಕಾಯುತ್ತಿದ್ದಾರೆ.
19ನೇ ಕಂತಿನ ಹಣವನ್ನು ಫೆಬ್ರವರಿಯ ಕೊನೆಯ ವಾರದಲ್ಲಿ ವಿತರಿಸುವ ನಿರೀಕ್ಷೆಯಿದೆ. ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಪಿಎಂ ಕಿಸಾನ್ ಪಾವತಿಗಳನ್ನು ಸಾಮಾನ್ಯವಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಸ್ಥಿರವಾದ ವೇಳಾಪಟ್ಟಿಯನ್ನು ಅನುಸರಿಸಿ ನೀಡಲಾಗುತ್ತದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು 2025ರ ಫೆಬ್ರವರಿ ಅಂತ್ಯದ ವೇಳೆಗೆ 19ನೇ ಕಂತನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂ ಕಿಸಾನ್‌ಗೆ ಅರ್ಜಿ ಸಲ್ಲಿಸಲು ಸುಲಭ ವಿಧಾನಗಳಿವೆ
- ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಹೊಸ ರೈತರು ನೋಂದಣಿ ಬಟನ್' ಮೇಲೆ ಕ್ಲಿಕ್ ಮಾಡಿ.
- ನಂತರ ಆಧಾರ್ ಸಂಖ್ಯೆ, ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ಬ್ಯಾಂಕ್ ಮಾಹಿತಿ ಸೇರಿದಂತೆ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ನಂತರ ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸೇವ್ ಮಾಡಿ ಇಟ್ಟುಕೊಳ್ಳಿ.
- ನಿಮ್ಮ ಅರ್ಜಿ ಸಲ್ಲಿಕೆ ಆದ ನಂತರ ಅನುಮೋದನೆ ನೀಡುವ ಮೊದಲು ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
ಈ ಸುದ್ದಿಯನ್ನೂ ಓದಿ: ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್ (ಪಿಎಂ-ಡಿಎಚ್‌ಎಂ) ಗೆ ನಾಳೆ ಚಾಲನೆ
ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ?
- ಹೊಸ ಅಧಿಸೂಚನೆಗಳನ್ನು ಪಡೆಯಲು ಹಾಗೂ ಹಣ ಜಮಾವಣೆಯ ಬಗ್ಗೆ ತಿಳಿಯಲು ಮೊಬೈಲ್ ಸಂಖ್ಯೆಯನ್ನು ಪಿಎಂ ಕಿಸಾನ್ ಪೋರ್ಟಲ್‌ಗೆ ಲಿಂಕ್ ಮಾಡುವುದು ಬಹಳ ಮುಖ್ಯ. ಒಟಿಪಿ OTP ಆಧಾರಿತ eKYC ಅನ್ನು ಪೂರ್ಣಗೊಳಿಸಲು ಮೊಬೈಲ್ ಸಂಖ್ಯೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
- ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಿ ಅಥವಾ PM ಕಿಸಾನ್ ವೆಬ್‌ಸೈಟ್‌ಗೆ ಲಾಗಿನ್ ಮಾಡಿ: https://pmkisan.gov.in
- ಮೊಬೈಲ್ ಸಂಖ್ಯೆಯನ್ನು ನವೀಕರಿಸಿ ಎಂಬುದನ್ನು ಆಯ್ಕೆ ಮಾಡಿ.ಮ್ಮ ನೋಂದಾಯಿತ ಆಧಾರ್ ಸಂಖ್ಯೆ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಅಪ್‌ಡೇಟ್ ಮಾಡಿ. ಅಷ್ಟೇ ಮೊಬೈಲ್ ಸಂಖ್ಯೆ ನೋಂದಣಿಯಾಗಿರುತ್ತದೆ.