ರಾಜಕೀಯ ಮರೆತು ಭಜನೆಯಲ್ಲಿ ತೊಡಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ; ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದ ವಿಡಿಯೊ ವೈರಲ್
Bhajan Clubbing: ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಅಂಗವಾಗಿ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಉದ್ಯಾನದಲ್ಲಿ ಶುಕ್ರವಾರ (ಸೆಪ್ಟೆಂಬರ್ 25) ಸಂಜೆ ಆಯೋಜಿಸಿದ್ದ ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದರು.
ದೆಹಲಿಯಲ್ಲಿ ನಡೆದ ಭಜನೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ -
ನವದೆಹಲಿ, ಸೆ. 25: ಭಾರತೀಯ ಜನಸಂಘದ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ (Pandit Deendayal Upadhyaya) ಅವರ ಜನ್ಮದಿನದ ಅಂಗವಾಗಿ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಉದ್ಯಾನದಲ್ಲಿ ರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾಗವಹಿಸಿದರು. ವೇದಿಕೆಯಲ್ಲಿ ಗಾಯಕರ ಹಾಗೂ ಸಂಗೀತಗಾರರ ತಂಡ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿತು. ಕೇಸರಿ ಬಣ್ಣದ ಛಾಯೆ ಹೊಂದಿರುವ ಉಡುಪುಗಳನ್ನು ಧರಿಸಿದ್ದ ಕಲಾವಿದರು ಭಜನೆಗಳನ್ನು ಹಾಡುತ್ತಿದ್ದರೆ, ಪ್ರಧಾನಿ ಮೋದಿ ಮುಂಭಾಗದ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಈ ವೇಳೆ ಅವರು ಬಿಳಿ ಕುರ್ತಾ-ಪೈಜಾಮದ ಮೇಲೆ ಕಿತ್ತಳೆ ಬಣ್ಣದ ಜಾಕೆಟ್ ಧರಿಸಿದ್ದರು.
ಇದಕ್ಕೂ ಮುನ್ನ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ನಮನ ಸಲ್ಲಿಸಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನೇ ರಾಷ್ಟ್ರ ನಿರ್ಮಾಣದ ಆಧಾರವೆಂದು ಪರಿಗಣಿಸಿದ್ದ ಅವರ ‘ಅಂತ್ಯೋದಯ’ ತತ್ವವು ಇಂದಿಗೂ ಸಾರ್ವಜನಿಕ ಕಲ್ಯಾಣ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪ್ರೇರಣೆ ಎಂದು ಮೋದಿ ಹೇಳಿದ್ದಾರೆ.
ಭಜನೆಯಲ್ಲಿ ಪಾಲ್ಗೊಂಡ ಮೋದಿ:
#WATCH | Prime Minister Narendra Modi attends 'Bhajan Clubbing' at Deen Dayal Upadhyaya Park in Delhi, on the occasion of Bharatiya Jana Sangh leader Pandit Deendayal Upadhyaya's birth anniversary.
— ANI (@ANI) September 25, 2026
(Source: DD News) pic.twitter.com/KbIENKo93C
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ, ದೀನದಯಾಳ್ ಉಪಾಧ್ಯಾಯರ ಚಿಂತನೆಗಳು ಇಂದಿನ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳು ಹಾಗೂ ತಳಮಟ್ಟದ ಸಬಲೀಕರಣಕ್ಕೆ ದಿಕ್ಕು ತೋರಿಸುತ್ತಿವೆ ಎಂದು ಉಲ್ಲೇಖಿಸಿದ್ದಾರೆ.
ದೀನದಯಾಳ್ ಉಪಾಧ್ಯಾಯ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ಮತ್ತು ರಾಷ್ಟ್ರೀಯ ಜವಾಬ್ದಾರಿಗಳನ್ನು ಈಡೇರಿಸುವ ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು. ನಿರಂತರ ಪ್ರಯತ್ನ ಮತ್ತು ಧೈರ್ಯದಿಂದಲೇ ಸಾಧನೆ ಹಾಗೂ ಹೊಸತನ ಸಾಧ್ಯ ಎಂಬ ಸಂದೇಶ ಸಾರುವ ಸಂಸ್ಕೃತ ಸುಭಾಷಿತವನ್ನೂ ಅವರು ಹಂಚಿಕೊಂಡರು.
ದೀನದಯಾಳ್ ಉಪಾಧ್ಯಾಯರ 110ನೇ ಜನ್ಮದಿನ
ಪಂಡಿತ್ ದೀನದಯಾಳ್ ಉಪಾಧ್ಯಾಯ1916ರ ಸೆ ಪ್ಟೆಂಬರ್ 25ರಂದು ಜನಿಸಿದರು. ಭಾರತೀಯ ಜನಸಂಘದ ಪ್ರಮುಖ ನಾಯಕರಾಗಿ ಅವರು ಗುರುತಿಸಿಕೊಂಡಿದ್ದರು. 1940ರ ದಶಕದಲ್ಲಿ ‘ರಾಷ್ಟ್ರಧರ್ಮ’ ಎಂಬ ಮಾಸಿಕ ಪ್ರಕಟಣೆಯನ್ನು ಆರಂಭಿಸಿ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತಕರಾಗಿಯೂ ಗುರುತಿಸಿಕೊಂಡಿದ್ದರು.
1967ರ ಡಿಸೆಂಬರ್‌ನಲ್ಲಿ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಭಾರತೀಯ ಜನಸಂಘವೇ ನಂತರ ಭಾರತೀಯ ಜನತಾ ಪಕ್ಷದ ಪೂರ್ವರೂಪವಾಗಿ ಹೊರಹೊಮ್ಮಿತು. 1968ರ ಫೆಬ್ರವರಿ 11ರಂದು ಅವರು ನಿಧನರಾದರು. ಅವರ ಮೃತದೇಹ ಮೊಘಲ್ ಸರಾಯ್ ಜಂಕ್ಷನ್ ಬಳಿ ಪತ್ತೆಯಾಗಿತ್ತು. ಬಳಿಕ ಈ ರೈಲು ನಿಲ್ದಾಣಕ್ಕೆ ‘ದೀನದಯಾಳ್ ಉಪಾಧ್ಯಾಯ ಜಂಕ್ಷನ್’ ಎಂದು ಮರುನಾಮಕರಣ ಮಾಡಲಾಗಿದೆ.