ಪ್ರಧಾನಿ ಮೋದಿಗೆ ಸ್ವೀಡನ್‌ನ ಅತ್ಯುನ್ನತ ಗೌರವ 'ರಾಯಲ್ ಆರ್ಡರ್ ಆಫ್ ಪೋಲಾರ್ ಸ್ಟಾರ್' ಪ್ರದಾನ
ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಡನ್‌ನ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಅವರಿಗೆ ದೊರೆತ 31ನೇ ಅಂತಾರಾಷ್ಟ್ರೀಯ ಗೌರವಾಗಿದೆ. ಸರ್ಕಾರದ ಮುಖ್ಯಸ್ಥರಿಗೆ ನೀಡುವ ಸ್ವೀಡನ್‌ನ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ಭಾನುವಾರ ಸ್ವೀಕರಿಸಿದರು.
ಸಂಗ್ರಹ ಚಿತ್ರ -
ಸ್ವೀಡನ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸ್ವೀಡನ್‌ನ ಅತ್ಯುನ್ನತ ಪ್ರಶಸ್ತಿಯನ್ನು (Sweden's greatest honour) ಭಾನುವಾರ ಸ್ವೀಕರಿಸಿದರು. ಇದು ಅವರಿಗೆ ದೊರೆತ 31ನೇ ಅಂತಾರಾಷ್ಟ್ರೀಯ ಗೌರವವಾಗಿದೆ. ದ್ವಿಪಕ್ಷೀಯ ಸಂಬಂಧ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಅಸಾಧಾರಣ ಕೊಡುಗೆಗಳನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರು 31ನೇ ಅಂತಾರಾಷ್ಟ್ರೀಯ ಗೌರವವಾದ (31st global honour) ಸ್ವೀಡನ್‌ನ ಅತ್ಯುನ್ನತ ಪ್ರಶಸ್ತಿ 'ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್' (Royal Order of the Polar Star, Degree Commander Grand Cross) ಅನ್ನು ಸ್ವೀಕರಿಸಿದರು.
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇದು ಸ್ನೇಹದ ಪುನರ್ ದೃಢೀಕರಣವಾಗಿದೆ. ಭಾರತ ಮತ್ತು ಸ್ವೀಡನ್ ಸಂಬಂಧ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಪ್ರಧಾನಿ ಮೋದಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಸ್ವೀಡನ್‌ನ ರಾಜಮನೆತನದ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕೇರಳದ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ವಿ.ಡಿ. ಸತೀಶನ್
ಎರಡು ದಿನಗಳ ಭೇಟಿಗಾಗಿ ಭಾನುವಾರ ಸ್ವೀಡನ್‌ಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಗೋಥೆನ್‌ಬರ್ಗ್ ವಿಮಾನ ನಿಲ್ದಾಣದಲ್ಲಿ ಸ್ವೀಡಿಷ್ ರಾಯಭಾರಿ ಉಲ್ಫ್ ಕ್ರಿಸ್ಟರ್ಸನ್ ಅವರು ಸ್ವಾಗತಿಸಿದರು.
Heartiest congratulations to Hon. PM Shri @narendramodi Ji on being conferred with Sweden’s highest civilian honour, the ‘Royal Order of the Polar Star, Commander Grand Cross.’
— Yogi Adityanath (@myogiadityanath) May 17, 2026
This prestigious recognition reflects your visionary leadership, unwavering commitment to global… pic.twitter.com/biYd3HBFMO
ಸ್ವೀಡನ್ ನ 'ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್, ಡಿಗ್ರಿ ಕಮಾಂಡರ್ ಗ್ರ್ಯಾಂಡ್ ಕ್ರಾಸ್' ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರು ಭಾರತ ಮತ್ತು ಸ್ವೀಡನ್ ನಡುವಿನ ಐತಿಹಾಸಿಕ ಸಂಬಂಧಗಳಿಗೆ ಅರ್ಪಿಸಿ, ಇದು ಭಾರತ ಮತ್ತು ಸ್ವೀಡನ್ ಜನರ ನಡುವಿನ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನೀಡಿದ ಗೌರವ ಎಂದು ಹೇಳಿದ್ದಾರೆ.
1748ರಿಂದ ನೀಡಲಾಗುತ್ತಿರುವ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ಪ್ರಶಸ್ತಿಯನ್ನು ಸ್ವೀಡನ್‌ಗಾಗಿ ಅಥವಾ ಸ್ವೀಡನ್‌ನ ಹಿತಾಸಕ್ತಿಗಳಿಗಾಗಿ ದುಡಿಯುವವರಿಗೆ ನೀಡಲಾಗುವ ಅತ್ಯುನ್ನತ ಗೌರವವಾಗಿದೆ. ವಿಶೇಷವಾಗಿ ಇದನ್ನು ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಗುರುತಿಸುವ ಉದ್ದೇಶವನ್ನು ಹೊಂದಿದೆ.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸ್ವೀಡಿಷ್ ಕೌಂಟರ್ ಉಲ್ಫ್ ಕ್ರಿಸ್ಟರ್ಸನ್ ಸ್ವೀಡನ್ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಅವರಿಗೆ ಭಾರತ ಮತ್ತು ಸ್ವೀಡನ್ ನಡುವಿನ ಶಾಶ್ವತ ನಾಗರಿಕ ಮತ್ತು ಬೌದ್ಧಿಕ ಸಂಬಂಧಗಳನ್ನು ಸ್ಮರಿಸುವ ವಿಶೇಷ ಉಡುಗೊರೆಗಳನ್ನು ನೀಡಿದರು.
ಯುರೋಪಿಯನ್ ಅಲ್ಲದ ಮೊದಲ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದ ರವೀಂದ್ರನಾಥ ಟ್ಯಾಗೋರ್ ಅವರಿಗೆ 1913ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಸ್ವೀಕರಿಸಲು ಸ್ವೀಡನ್‌ಗೆ ತೆರಳಲು ಆಗಿರಲಿಲ್ಲ.ಹೀಗಾಗಿ ಅವರು 1921ರಲ್ಲಿ ಸ್ವೀಡನ್‌ಗೆ ಭೇಟಿ ನೀಡಿದ್ದಾಗ ಅಲ್ಲಿನ ದೊರೆ ಐದನೇ ಗುಸ್ತಾವ್ ಅವರು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ಈ ವರ್ಷದ ಭೇಟಿಯು ಟ್ಯಾಗೋರ್ ಅವರ ಐತಿಹಾಸಿಕ ಭೇಟಿಯ 100 ನೇ ವರ್ಷಾಚರಣೆಯನ್ನು ಸೂಚಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವೀಡನ್ ಕ್ರೌನ್ ಪ್ರಿನ್ಸೆಸ್ ವಿಕ್ಟೋರಿಯಾ ಅವರಿಂದ ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಅನೇಕ ನಾಯಕರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.