ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್​ಸಿಒ ಶೃಂಗಸಭೆ: ಗ್ರೂಪ್ ಫೋಟೊದಿಂದ ಪ್ರಧಾನಿ ನರೇಂದ್ರ ಮೋದಿಯನ್ನು ಕ್ರಾಪ್‌ ಮಾಡಿದ ಪಾಕಿಸ್ತಾನ

Shehbaz Sharif: ಎಸ್‌ಸಿಒ ಶೃಂಗಸಭೆಯ ಮೂಲ ಫೋಟೊದಲ್ಲಿ ಹಲವು ವಿಶ್ವ ನಾಯಕರಿದ್ದರೂ, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕಚೇರಿ ಹಂಚಿಕೊಂಡ ಚಿತ್ರದಲ್ಲಿ ಇತರ ನಾಯಕರನ್ನು ಕ್ರಾಪ್ ಮಾಡಿ ಷರೀಫ್ ಅವರನ್ನು ಮಧ್ಯದಲ್ಲಿ ಕಾಣುವಂತೆ ಮಾಡಲಾಗಿದೆ ಎಂಬುದು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಮೋದಿ ಹಂಚಿಕೊಂಡ ಮೂಲ ಚಿತ್ರದಲ್ಲಿ ಷರೀಫ್ ಬಲಭಾಗದಿಂದ ನಾಲ್ಕನೇ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ.

ಎಸ್​ಸಿಒ ಶೃಂಗಸಭೆಯ ಫೋಟೊದಿಂದ ಮೋದಿ ಕ್ರಾಪ್‌ ಮಾಡಿದ ಪಾಕಿಸ್ತಾನ

ಎಸ್‌ಸಿಒ ಶೃಂಗಸಭೆಯಲ್ಲಿ ಪೋಸ್‌ ನೀಡಿದ ವಿಶ್ವ ನಾಯಕರು -

Profile
Sushmitha Jain Sep 1, 2026 11:30 PM

ಬಿಷ್ಕೆಕ್, ಸೆ. 1: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif ) ಅವರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಎಸ್‌ಸಿಒ ಶೃಂಗಸಭೆಯ (SCO summit) ಫೋಟೊ ಇದೀಗ ಚರ್ಚೆಗೆ ಕಾರಣವಾಗಿದೆ. ಮೂಲ ಫೋಟೊವನ್ನು ಕ್ರಾಪ್ ಮಾಡಿ, ಷರೀಫ್ ಅವರನ್ನು ಮಧ್ಯ ಭಾಗದಲ್ಲಿ ಕಾಣುವಂತೆ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಿರ್ಗಿಸ್ತಾನದ ಬಿಷ್ಕೆಕ್‌ನಲ್ಲಿ ನಡೆದ 26ನೇ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯ ಅಧಿವೇಶನಕ್ಕೂ ಮುನ್ನ ಈ ಫೋಟೊ ತೆಗೆಯಲಾಗಿತ್ತು.

ಮೂಲ ಚಿತ್ರದಲ್ಲಿ ಸದಸ್ಯ ರಾಷ್ಟ್ರಗಳ ಹಲವು ನಾಯಕರು ಒಟ್ಟಿಗೆ ನಿಂತಿದ್ದರು. ಆದರೆ ಪಾಕಿಸ್ತಾನ ಪ್ರಧಾನಿ ಕಚೇರಿ ಹಂಚಿಕೊಂಡ ಚಿತ್ರದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಕಿರ್ಗಿಸ್ತಾನ ಅಧ್ಯಕ್ಷ ಸದಿರ್ ಜಪರೋವ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ತಜಿಕಿಸ್ತಾನ ಅಧ್ಯಕ್ಷ ಎಮೋಮಲಿ ರಹಮೋನ್, ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಹಾಗೂ ಕಿರ್ಗಿಸ್ತಾನದ ಕರ್ನಲ್ ಉಲರ್ಬೆಕ್ ಜಾರ್ಲಿಕೋವಿಚ್ ಶಾರ್ಶೀವ್ ಮಾತ್ರ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಎಕ್ಸ್‌ ಪೋಸ್ಟ್‌:



ಇದಕ್ಕೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ ಮೂಲ ಫೋಟೊವನ್ನು ಹಂಚಿಕೊಂಡಿದ್ದು, ವಾಸ್ತವವಾಗಿ ಶೆಹಬಾಜ್ ಷರೀಫ್ ಬಲಭಾಗದಿಂದ ನಾಲ್ಕನೇ ಸ್ಥಾನದಲ್ಲಿ ನಿಂತಿದ್ದರು ಎಂಬುದು ಸ್ಪಷ್ಟವಾಗಿದೆ. ಮೂಲ ಚಿತ್ರದಲ್ಲಿದ್ದ ಇತರ ಐವರು ವಿಶ್ವ ನಾಯಕರನ್ನು ಕ್ರಾಪ್ ಮಾಡಲಾಗಿದೆ ಎಂದು ವರದಿಯಾಗಿದೆ.

ಎಸ್‌ಸಿಒ ಶೃಂಗಸಭೆಯಲ್ಲಿ ಮೋದಿ ಮಾತು

26ನೇ ಎಸ್‌ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಭದ್ರತೆ, ಸಂಪರ್ಕ ಮತ್ತು ಅವಕಾಶ-ಎಸ್‌ಸಿಒನ ಮೂರು ಪ್ರಮುಖ ಸ್ತಂಭಗಳ ಸುತ್ತ ರಾಷ್ಟ್ರಗಳು ಹೆಚ್ಚಿನ ಸಹಕಾರ ಸಾಧಿಸಬೇಕು ಎಂದು ಅವರು ಹೇಳಿದರು.

ಜ್ಯುವೆಲರಿ ಶಾಪ್‌ನಲ್ಲಿ 10 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣ ಕಳ್ಳತನ; ಕದ್ದಿದ್ದು ಮನುಷ್ಯನಲ್ಲ, ಇಲಿಯೇ ಕಳ್ಳ!

ಕೇವಲ ದೃಷ್ಟಿಕೋನ ರೂಪಿಸುವುದಕ್ಕಿಂತ ಮುಂದೆ ಸಾಗಬೇಕು ಮತ್ತು ಅಳೆಯಬಹುದಾದ ಫಲಿತಾಂಶಗಳತ್ತ ಗಮನ ಹರಿಸಬೇಕು ಎಂದು ಮೋದಿ ಕರೆ ನೀಡಿದರು. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಇಂಧನ ಪೂರೈಕೆ ಮತ್ತು ಆರ್ಥಿಕತೆಗಳ ಮೇಲೂ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.

2001ರಲ್ಲಿ ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಗಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನ ಸೇರಿ ಎಸ್‌ಸಿಒ ಸ್ಥಾಪಿಸಿದವು. ಭಾರತ ಮತ್ತು ಪಾಕಿಸ್ತಾನ 2017ರಲ್ಲಿ ಪೂರ್ಣ ಸದಸ್ಯ ರಾಷ್ಟ್ರಗಳಾದವು. ಬಳಿಕ ಇರಾನ್ 2023ರಲ್ಲಿ ಹಾಗೂ ಬೆಲಾರಸ್ 2024ರಲ್ಲಿ ಸದಸ್ಯತ್ವ ಪಡೆದವು.