ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan Opens Fire: ಮತ್ತೆ ಬಾಲ ಬಿಚ್ಚಿದ ಪಾಕ್‌; LOC ಬಳಿ ಸೈನಿಕರ ನಡುವೆ ಗುಂಡಿನ ಚಕಮಕಿ

ಆಪರೇಷನ್‌ ಸಿಂದೂರದ (Operation Sindoor) ಬಳಿಕ ತಣ್ಣಗಾಗಿದ್ದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಬಾಲ ಬಿಚ್ಚಿದೆ. ಕುಪ್ವಾರದ ಗಡಿ ನಿಯಂತ್ರಣ ರೇಖೆ ಬಳಿ ಭಾರತ ಹಾಗೂ ಪಾಕ್​ ಸೇನೆ (Pakistan) ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ ಈ ಘಟನೆ ಕನದ ವಿರಾಮ ಉಲ್ಲಂಘನೆಗೆ ಸಮವಲ್ಲ ಎಂದು ಸೇನೆ ಹೇಳಿದೆ.

LOC ಬಳಿ ಭಾರತ ಪಾಕ್‌  ಸೈನಿಕರ ನಡುವೆ ಗುಂಡಿನ ಚಕಮಕಿ

-

Vishakha Bhat Vishakha Bhat Sep 21, 2025 11:36 AM

ಶ್ರೀನಗರ: ಆಪರೇಷನ್‌ ಸಿಂದೂರದ (Operation Sindoor) ಬಳಿಕ ತಣ್ಣಗಾಗಿದ್ದ ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಬಾಲ ಬಿಚ್ಚಿದೆ. ಕುಪ್ವಾರದ (Pakistan Opens Fire) ಗಡಿ ನಿಯಂತ್ರಣ ರೇಖೆ ಬಳಿ ಭಾರತ ಹಾಗೂ ಪಾಕ್​ ಸೇನೆ (Pakistan) ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ ಈ ಘಟನೆ ಕನದ ವಿರಾಮ ಉಲ್ಲಂಘನೆಗೆ ಸಮವಲ್ಲ ಎಂದು ಸೇನೆ ಹೇಳಿದೆ. ಎಲ್‌ಒಸಿ ಉದ್ದಕ್ಕೂ ಎರಡೂ ಕಡೆಯಿಂದ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಸಂಜೆ 6.15 ರ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು ಮತ್ತು ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ಮುಂದುವರೆಯಿತು, ನಂತರ ತಣ್ಣಗಾಗಿದೆ.

ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ ಮತ್ತು ಇದು ಕದನ ವಿರಾಮ ಉಲ್ಲಂಘನೆಯಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ. ಈ ತಿಂಗಳ ಆರಂಭದಲ್ಲಿ, ಪೂಂಚ್ ಜಿಲ್ಲೆಯ ಬಾಲಕೋಟ್ ಸೆಕ್ಟರ್‌ನ ಎಲ್‌ಒಸಿ ಬಳಿ ಶಂಕಿತ ಒಳನುಸುಳುವಿಕೆಯನ್ನು ಭಾರತೀಯ ಸೇನೆ ವಿಫಲಗೊಳಿಸಿತು, ಇದರಿಂದಾಗಿ ಭಾರೀ ಗುಂಡಿನ ಚಕಮಕಿ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆದಿದ್ದು, ಶಂಕಿತ ಒಳನುಸುಳುವವರ ಚಲನವಲನಗಳನ್ನು ಪಡೆಗಳು ಯಶಸ್ವಿಯಾಗಿ ತಡೆಯಲಾಗಿದೆ.

ಸೆಪ್ಟೆಂಬರ್ 1 ರಂದು ಬೆಳಿಗ್ಗೆ 5:30 ರ ಸುಮಾರಿಗೆ, ಬಾಲಕೋಟ್‌ನ ಸಾಮಾನ್ಯ ಪ್ರದೇಶದಲ್ಲಿ ವೈಟ್ ನೈಟ್ ಕಾರ್ಪ್ಸ್‌ನ ಪಡೆಗಳು ಎಲ್‌ಒಸಿ ಬಳಿ ಅನುಮಾನಾಸ್ಪದ ಚಲನೆಯನ್ನು ಪತ್ತೆಹಚ್ಚಿದವು. ತಕ್ಷಣವೇ ಜಾಗೃತ ಪಡೆಗಳು ಗುಂಡು ಹಾರಿಸಿ, ಒಳನುಸುಳುವಿಕೆ ಪ್ರಯತ್ನವನ್ನು ತಡೆಯಿತು. ಆಗಸ್ಟ್ 5 ರಂದು, ಎರಡೂ ದೇಶಗಳ ನಡುವೆ ಕದನ ವಿರಾಮ ಉಲ್ಲಂಘನೆಯ ಕೆಲವು ವರದಿಗಳು ಹೊರಬಂದವು. ಆದಾಗ್ಯೂ, ಭಾರತೀಯ ಸೇನೆಯು ಪಾಕಿಸ್ತಾನದಿಂದ ಯಾವುದೇ ಕದನ ವಿರಾಮ ಉಲ್ಲಂಘನೆಯನ್ನು ನಿರಾಕರಿಸಿತು.

ಈ ಸುದ್ದಿಯನ್ನೂ ಓದಿ: Terrorist Encounter: ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಭಯೋತ್ಪಾದಕನ ಎನ್‌ಕೌಂಟರ್‌; ಓರ್ವ ಸೈನಿಕನಿಗೆ ಗಾಯ

ಆ.13 ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತೀಯ ಸೇನಾ ಯೋಧರು ನಿಯಂತ್ರಣ ರೇಖೆಯ ಬಳಿ ಕಾವಲು ಕಾಯುತ್ತಿದ್ದಾಗ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.