ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bailahongala News: ದೊರೆತ ಕಾಲಾವಕಾಶದಲ್ಲಿ ಅನುದಾನಗಳ ಸದ್ಬಳಕೆ ಮಾಡಿದ್ದೇನೆ: ಈರಣ್ಣ ಕಡಾಡಿ

ರಾಜ್ಯಸಭಾ ಸದಸ್ಯರಿಗೆ ಅನುದಾನಗಳು ಬಹಳ ಕಡಿಮೆ ಆದರೂ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ ಜನರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದ್ದೇನೆ, ಈ ಸಮುದಾಯ ಭವನಗಳ ಸದ್ಬಳಕೆ ಸರಿಯಾಗಿ ಆಗಲಿ, ನರೇಂದ್ರ ಮೋದಿಜಿ ಅವರ ವಿಕಸಿತ ಭಾರತದ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸಗಳನ್ನು ಮಾಡೋಣ, ಭಾರತ ವಿಶ್ವಗುರು ಸ್ಥಾನದಲ್ಲಿ ವಿಜೃಂಭಿಸುವ ವೇಳೆಯನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ

ದೊರೆತ ಕಾಲಾವಕಾಶದಲ್ಲಿ ಅನುದಾನಗಳ ಸದ್ಬಳಕೆ ಮಾಡಿದ್ದೇನೆ

-

Ashok Nayak
Ashok Nayak Jan 10, 2026 10:47 PM

ಬೈಲಹೊಂಗಲ: ಸಮಿಪದ ಚಿವಟಗುಂಡಿ ಹಾಗೂ ಗರಜೂರ ಗ್ರಾಮಗಳಲ್ಲಿ ಈರಣ್ಣ ಕಡಾಡಿ (Iranna Kadadi) ರಾಜ್ಯಸಭಾ ಸದಸ್ಯರ ಅನುದಾನ ಅಡಿಯಲ್ಲಿ ನಿರ್ಮಿಸಿದ ನೂತನ ಸಮುದಾಯ ಭವನ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು ರಾಜ್ಯಸಭಾ ಸದಸ್ಯರಿಗೆ ಅನುದಾನಗಳು ಬಹಳ ಕಡಿಮೆ ಆದರೂ ನೀಡಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿ ಜನರಿಗೆ ನೆರವಾಗುವ ಕೆಲಸವನ್ನು ಮಾಡುತ್ತಿದ್ದೇನೆ, ಈ ಸಮುದಾಯ ಭವನಗಳ ಸದ್ಬಳಕೆ ಸರಿಯಾಗಿ ಆಗಲಿ, ನರೇಂದ್ರ ಮೋದಿಜಿ ಅವರ ವಿಕಸಿತ ಭಾರತದ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಕೆಲಸಗಳನ್ನು ಮಾಡೋಣ, ಭಾರತ ವಿಶ್ವಗುರು ಸ್ಥಾನದಲ್ಲಿ ವಿಜೃಂಭಿಸುವ ವೇಳೆಯನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Prakash Hegde Column: ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್‌ನ ಉಸಾಬರಿ ಏಕೆ?

ಈ ಸಂದರ್ಭದಲ್ಲಿ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್ ಎಸ್ ಸಿದ್ದನಗೌಡರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಂಡಲ ಅಧ್ಯಕ್ಷ ಸುಭಾಷ ತುರಮರಿ, ಹಿರಿಯ ಮುಖಂಡ ಗುರುಪಾದ ಕಳ್ಳಿ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರಗಿ, ವಿಶಾಲ ಬೋಗೂರ, ನಿಂಗಪ್ಪ ಚೌಡನ್ನವರ, ಬಸನಗೌಡ ಪಾಟೀಲ, ಚಂದ್ರಪ್ಪ ಗಡೆನ್ನವರ,ಅರ್ಜುನ ಗಣಾಚಾರಿ, ಸಿದ್ದಪ್ಪ ಕುರಿ, ಸಿದ್ದಪ್ಪ ಕಡಕಬಾವಿ, ಶಿವಾನಂದ ಕೋರೆ, ಮಾರುತಿ ಪಟಾತ, ಸುಭಾಷ್ ಪಟಾತ, ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.