ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“11 ದೇಶಗಳಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿದೆ”: ಜಾಗತಿಕ ವ್ಯಾಪ್ತಿ ಮತ್ತಷ್ಟು ಹೆಚ್ಚಳ ಎಂದ ಪ್ರಧಾನಿ ಮೋದಿ

UPI Global Expansion: ಯುಪಿಐ ಈಗ 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಿಂಗಾಪುರದ ಸ್ಥಳೀಯ ಪಾವತಿ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಇದು ಉಭಯ ದೇಶಗಳ ನಡುವಿನ ವಹಿವಾಟುಗಳನ್ನು, ಸ್ಥಳೀಯ ಪ್ರದೇಶಗಳ ನಡುವೆ ಮಾಡುವ ಪಾವತಿಗಳಷ್ಟೇ ಸುಲಭವಾಗಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

11 ದೇಶಗಳಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿದೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ -

Priyanka P
Priyanka P Sep 9, 2026 2:01 PM

ಮುಂಬೈ ಸೆ.9: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ನ ಜಾಗತಿಕ ವ್ಯಾಪ್ತಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕರೆ ನೀಡಿದ್ದಾರೆ. ಯುಪಿಐ ವ್ಯವಸ್ಥೆಯನ್ನು ವಿಶ್ವದ ಇತರ ದೇಶಗಳ ಸ್ಥಳೀಯ ಪಾವತಿ ನೆಟ್‌ವರ್ಕ್‌ಗಳೊಂದಿಗೆ ಜೋಡಿಸಲು ಒತ್ತು ನೀಡುವಂತೆ ಫಿನ್‌ಟೆಕ್ ವಲಯಕ್ಕೆ ಕರೆ ನೀಡಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ಹಣವನ್ನು ಕಳುಹಿಸುವಾಗ ತಗಲುವ ಭಾರಿ ಮೊತ್ತದ ಹಣ ವರ್ಗಾವಣೆ ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ 7ನೇ ಆವೃತ್ತಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, ಭಾರತೀಯ ಆರ್ಥಿಕತೆಯ ಶೇಕಡಾ 7.8ರಷ್ಟು ಜಿಡಿಪಿ ಪ್ರಗತಿಯು ಇಡೀ ಜಗತ್ತಿಗೆ ಹೆಚ್ಚಿನ ವಿಶ್ವಾಸವನ್ನು ನೀಡಿದೆ ಎಂದು ಹೇಳಿದರು.

ಪ್ರಸಕ್ತ ವರ್ಷದ ಆಗಸ್ಟ್ ತಿಂಗಳ ವೇಳೆಗೆ ಯುಪಿಐ ಮೂಲಕ ನಡೆಯುವ ನೈಜ-ಸಮಯದ ಪಾವತಿಗಳು ಬರೋಬ್ಬರಿ 24.51 ಶತಕೋಟಿ ವಹಿವಾಟುಗಳಿಗೆ ತಲುಪಿವೆ. ಕಳೆದ ದಶಕದ ಈ ಅದ್ಭುತ ಸಾಧನೆಗೆ ತೃಪ್ತರಾಗಿ ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ) ವಲಯಕ್ಕೆ ಕರೆ ನೀಡಿದ ಮೋದಿ, ಯುಪಿಐನ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುವುದೇ ನಮ್ಮ ಮುಂದಿನ ಗುರಿಯಾಗಿರಬೇಕು ಎಂದು ಹೇಳಿದರು.

ಭಾರತಕ್ಕೆ ಬರಲಿದೆ ಸು-57 ವಿಮಾನ?: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಮಾತುಕತೆಗೆ ದಿನ ನಿಗದಿ

ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ವಾಸಿಸುತ್ತಿರುವ, ಭಾರತದೊಂದಿಗೆ ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು ಹೊಂದಿರುವ ಅಥವಾ ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲು ಸಿದ್ಧರಿರುವ ದೇಶಗಳ ಮೇಲೆ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಯುಪಿಐ ಈಗ 11 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಿಂಗಾಪುರದ ಸ್ಥಳೀಯ ಪಾವತಿ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದೆ. ಇದು ಉಭಯ ದೇಶಗಳ ನಡುವಿನ ವಹಿವಾಟುಗಳನ್ನು, ಸ್ಥಳೀಯ ಪ್ರದೇಶಗಳ ನಡುವೆ ಮಾಡುವ ಪಾವತಿಗಳಷ್ಟೇ ಸುಲಭವಾಗಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಜಾಗತಿಕ ಕಾರ್ಡ್ ಪಾವತಿಗಳು ಪ್ರಸ್ತುತ ಇತರ ದೇಶಗಳಲ್ಲಿ ವಿನ್ಯಾಸಗೊಳಿಸಲಾದ ವ್ಯವಸ್ಥೆಗಳಲ್ಲಿ ನಡೆಯುತ್ತವೆ ಎಂದು ಅವರು ಹೇಳಿದರು.

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರ ಮಾತುಗಳನ್ನು ಪುನರುಚ್ಚರಿಸಿದ ಮೋದಿ, ಯುಪಿಐ ಕೇವಲ ಒಂದು ತಾಂತ್ರಿಕ ಕಥೆಯಲ್ಲ, ಬದಲಿಗೆ ಅದು ಮಾನವ ನಾಗರಿಕತೆಯ ಬೆಳವಣಿಗೆಯ ಕಥೆಯೂ ಆಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತೆ ಸ್ವದೇಶಿ ಮಂತ್ರ :‌ ವಿದೇಶದಲ್ಲಿ ಮದುವೆ, ಬಂಗಾರ ಖರೀದಿ ಬೇಡ

ಕಳೆದ ಕೆಲವು ವರ್ಷಗಳಲ್ಲಿ ಪಾವತಿಗಳ ಕ್ಷೇತ್ರದಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ ನಂತರ, ಭಾರತೀಯ ಫಿನ್‌ಟೆಕ್ ಉದ್ಯಮದ ಮುಂದಿನ ಅಧ್ಯಾಯವು ಉಳಿತಾಯ ಉತ್ಪನ್ನಗಳು, ಪಿಂಚಣಿ, ವಿಮೆ ಮತ್ತು ಇತರ ಹಣಕಾಸು ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಮಾಡುವ ಪಾವತಿಯೇತರ ವಹಿವಾಟುಗಳ ಮೇಲಿರಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಜಪಾನ್ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಭಾರತದ ರೇಟಿಂಗ್ ಅನ್ನು ಬಿಬಿಬಿ+ ನಿಂದ ಎ- ಗೆ ಹೆಚ್ಚಿಸಿರುವುದು ಭಾರತದ ಮೇಲೆ ಇಡೀ ವಿಶ್ವಕ್ಕೆ ಇರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ಮೂರು ದಶಕಗಳಲ್ಲಿ ನಡೆದ ಮೊದಲ ರೇಟಿಂಗ್ ಸುಧಾರಣಾ ಕ್ರಮ ಇದಾಗಿದೆ ಎಂದೂ ಅವರು ಹೇಳಿದ್ದಾರೆ.