ಮೆಟ್ರೋದಲ್ಲಿ ಎಸ್‌ಆರ್‌ಸಿಸಿಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ; ಜೆನ್ ಝೀ ಮಕ್ಕಳೊಂದಿಗೆ ಮುಕ್ತ ಮಾತು, ಹರಟೆ: ವಿಡಿಯೊ ಇಲ್ಲಿದೆ
SRCC's 100 Year Celebrations: ಎಸ್‌ಆರ್‌ಸಿಸಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಮೆಟ್ರೋ ಕಾರ್ಡ್ ಹಿಡಿದು ವಿದ್ಯಾರ್ಥಿಗಳು ಹಾಗೂ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ಮೋದಿ, 13 ವರ್ಷಗಳ ಬಳಿಕ ಎಸ್‌ಆರ್‌ಸಿಸಿಗೆ ಭೇಟಿ ನೀಡಿದರು.
ದೆಹಲಿ ಮೆಟ್ರೋದಲ್ಲಿ ಪ್ರಧಾನಿ ನರೇಂದ್ರ ಮೋದಿ -
ನವದೆಹಲಿ, ಸೆ. 5: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಶನಿವಾರ ವಿಶಿಷ್ಟ ರೀತಿಯಲ್ಲಿ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ಗೆ (SRCC) ತೆರಳಿದರು. ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದು ವಿಶೇಷ (SRCC's 100 Year Celebrations). ಕೈಯಲ್ಲಿ ಮೆಟ್ರೋ ಕಾರ್ಡ್ ಹಿಡಿದು ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ, ಸಹಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಾಮಾನ್ಯವಾಗಿ ದೈನಂದಿನ ಪ್ರಯಾಣಕ್ಕೆ ಬಳಕೆಯಾಗುವ ಮೆಟ್ರೋ, ಮೋದಿ ಅವರ ಉಪಸ್ಥಿತಿಯಿಂದ ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಿತು.
ಎಸ್‌ಆರ್‌ಸಿಸಿ ಸ್ಥಾಪನೆಯಾಗಿ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ನರೇಂದ್ರ ಮೋದಿ:
#WATCH | Delhi: Prime Minister Narendra Modi traveled by the Delhi Metro today as he headed to Shri Ram College of Commerce (SRCC) to participate in the college's centenary celebrations.
— ANI (@ANI) September 5, 2026
(Source: DD) pic.twitter.com/AVqtS38z6P
ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲೇ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಹಾಲಿ ವಿದ್ಯಾರ್ಥಿಗಳ ಜತೆಗೆ ಕಾಲೇಜಿನ ಮಾಜಿ ಪ್ರಾಂಶುಪಾಲರು, ಬೋಧಕ ಸಿಬ್ಬಂದಿ ಹಾಗೂ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇನ್ನು ಪ್ರಯಾಣದ ವೇಳೆ ಮೋದಿ ಮೆಟ್ರೋದಲ್ಲಿ ವಿದ್ಯಾರ್ಥಿಗಳೊಂದಿಗೆ, ಪ್ರಯಾಣಿಕರೊಂದಿಗೆ ಬೆರೆತು ಮಾತುಕತೆ ನಡೆಸಿದರು.
ಫ್ರಾನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ ಶೇಕ್ ಹ್ಯಾಂಡ್; ಈ ಬಾರಿ ಅಪ್ಪುಗೆ ಮಿಸ್ಸಿಂಗ್
13 ವರ್ಷಗಳ ಬಳಿಕ ಎಸ್‌ಆರ್‌ಸಿಸಿಗೆ ಭೇಟಿ
ಪ್ರಧಾನಿ ಮೋದಿ 13 ವರ್ಷಗಳ ಬಳಿಕ ಮತ್ತೆ ಎಸ್‌ಆರ್‌ಸಿಸಿಗೆ ಭೇಟಿ ನೀಡಿದ್ದಾರೆ. 2013ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ಕೊನೆಯ ಬಾರಿ ಕಾಲೇಜಿಗೆ ಭೇಟಿ ನೀಡಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಎಸ್‌ಆರ್‌ಸಿಸಿಯ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಹಾಗೂ ನಿಯೋಗವನ್ನು ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಎಸ್‌ಆರ್‌ಸಿಸಿಯ 100 ವರ್ಷಗಳ ಸಂಭ್ರಮವನ್ನು ಸಾರುವ ಸ್ಮರಣಾರ್ಥ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದ್ದರು.
ಇದೀಗ ಮೆಟ್ರೋ ಕಾರ್ಡ್ ಹಿಡಿದು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಾ ಕಾಲೇಜಿಗೆ ಆಗಮಿಸಿರುವ ಪ್ರಧಾನಿ ಮೋದಿ ಅವರ ಶತಮಾನೋತ್ಸವ ಭಾಷಣದತ್ತ ಎಲ್ಲರ ಕುತೂಹಲ ಕೆರಳಿಸಿದೆ.