ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಪ್ತ ಧಾರೆ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದೇನು? ಭಾರತವನ್ನು ಮುಂಚೂಣಿಗೆ ತರಲು ಏಳು ಶಕ್ತಿಯ ಬಗ್ಗೆ ಮೋದಿ ವಿವರಿಸಿದ್ದು ಹೀಗೆ

Modi explained the seven strengths: 2047ರ ವೇಳೆಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರಲು ಅವರು ಉತ್ಪಾದನಾ ಕ್ಷೇತ್ರ, ಸಾಂಸ್ಕೃತಿಕ ಪ್ರಭಾವ (ಸಾಫ್ಟ್ ಪವರ್), ಜಾಗತಿಕ ಬ್ರ್ಯಾಂಡ್‌ಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ರಂಗಗಳ ಅಭಿವೃದ್ಧಿಯ ಗುರಿಗಳನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಪಟ್ಟಿ ಮಾಡಿದ್ದಾರೆ.

ಸಪ್ತ ಧಾರೆ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ -

Priyanka P
Priyanka P Aug 15, 2026 10:21 AM

ನವದೆಹಲಿ, ಆ.15: ಭಾರತದ 80ನೇ ಸ್ವಾತಂತ್ರ್ಯ ದಿನದಂದು (Independence Day) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ದೇಶವು ಅಳವಡಿಸಿಕೊಳ್ಳಬೇಕೆಂದು ಅವರು ಬಯಸುವ ಏಳು ಶಕ್ತಿಯ ಧಾರೆಗಳಾದ ಸಪ್ತ ಧಾರವನ್ನು ಅನಾವರಣಗೊಳಿಸಿದರು. 2047ರ ವೇಳೆಗೆ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರಲು ಅವರು ಉತ್ಪಾದನಾ ಕ್ಷೇತ್ರ, ಸಾಂಸ್ಕೃತಿಕ ಪ್ರಭಾವ (ಸಾಫ್ಟ್ ಪವರ್), ಜಾಗತಿಕ ಬ್ರ್ಯಾಂಡ್‌ಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ರಂಗಗಳ ಅಭಿವೃದ್ಧಿಯ ಗುರಿಗಳನ್ನು ಈ ಭಾಷಣದಲ್ಲಿ ಪಟ್ಟಿ ಮಾಡಿದ್ದಾರೆ.

ಕೆಂಪು ಕೋಟೆಯಿಂದ ಮಾತನಾಡಿದ ಮೋದಿ, ಈ ಸಪ್ತ ಧಾರೆಗಳನ್ನು ದೇಶದ ಯುವಶಕ್ತಿಯೊಂದಿಗೆ ಬೆಸೆದರು. ಯುವ ಸಮೂಹದ ಸಾಮರ್ಥ್ಯ ಮತ್ತು ಶಕ್ತಿಯನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಮೋದಿ ತಮ್ಮ ಭಾಷಣದ ಅತ್ಯಂತ ವಿವರವಾದ ಭಾಗವನ್ನು ಮೊದಲ ಶಕ್ತಿಯ ಮೂಲವಾದ ಉತ್ಪಾದನಾ ಕ್ಷೇತ್ರಕ್ಕೆ (Manufacturing) ಮೀಸಲಿಟ್ಟರು. ಭಾರತವು ಕೇವಲ ದೊಡ್ಡ ಉತ್ಪನ್ನಗಳನ್ನು ಜೋಡಿಸುವುದಷ್ಟೇ ಅಲ್ಲದೆ, ಅದರ ಹಿಂದಿರುವ ಬಿಡಿಭಾಗಗಳು ಸೇರಿದಂತೆ ವಿನ್ಯಾಸದಿಂದ ಉತ್ಪಾದನೆಯವರೆಗೆ ಎಲ್ಲವನ್ನೂ ದೇಶದಲ್ಲೇ ನಿರ್ಮಿಸಬೇಕು ಎಂದು ಉದ್ಯಮಿಗಳಿಗೆ ಹಾಗೂ ಎಂಎಸ್ಎಂಇ (MSME) ವಲಯಕ್ಕೆ ಕರೆ ನೀಡಿದರು. ಈ ಮೂಲಕ ಜಾಗತಿಕ ಪೂರೈಕೆ ಜಾಲದಲ್ಲಿ ಭಾರತವು ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಿ ಹೊರಹೊಮ್ಮಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ರಕ್ಷಣೆ, ರೈಲ್ವೆ, ಎಲೆಕ್ಟ್ರಾನಿಕ್ಸ್ ಉತ್ಪಾದನೆ 7 ಪಟ್ಟು ಹೆಚ್ಚಳ; ಬಿಜೆಪಿ ಸರ್ಕಾರದ ಯೋಜನೆ ಕುರಿತು ಮೋದಿ ಹೇಳಿದ್ದೇನು?

ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಇದು ನಮ್ಮ ಕಾಲದ ಸುವರ್ಣ ಅವಕಾಶ ಎಂದು ಪ್ರಧಾನಿ ಬಣ್ಣಿಸಿದರು. ಇದನ್ನು ಯಾವುದೇ ಕಾರಣಕ್ಕೂ ಕೈಬಿಡಬೇಡಿ ಎಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಅವರು ಮೂರು ಪ್ರಮುಖ ಅಂಶಗಳನ್ನು ಉದ್ಯಮಿಗಳ ಮುಂದಿಟ್ಟಿದ್ದಾರೆ. ಭಾರತೀಯ ಕಾರ್ಖಾನೆಗಳು ವೆಚ್ಚ, ಅತ್ಯುನ್ನತ ಗುಣಮಟ್ಟ ಮತ್ತು ಬೃಹತ್ ಪ್ರಮಾಣದ ಉತ್ಪಾದನೆಯಲ್ಲಿ ಜಾಗತಿಕ ಮಾನದಂಡಗಳನ್ನು ಪೂರೈಸಬೇಕು ಎಂದರು.

ಉತ್ಪನ್ನಗಳು ಬಳಕೆದಾರ ಸ್ನೇಹಿ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿರಬೇಕು. ಹಾಗೆಯೇ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವಂತಹ ಕೈಗೆಟುಕುವ ಬೆಲೆಯನ್ನು ಹೊಂದಿರಬೇಕು. ಕೇವಲ ವ್ಯಾಪಾರಕ್ಕಾಗಿ ಅಲ್ಲದೆ, ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಆಧಾರದ ಮೇಲೆ ಪ್ರಬಲವಾಗಿ ಕಟ್ಟಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ದೇಶದ ಸರ್ವತೋಮುಖ ಬೆಳವಣಿಗೆಗಾಗಿ ಘೋಷಿಸಿದ ಶಕ್ತಿಯ ಏಳು ಮೂಲಗಳು ಅಥವಾ ಸಪ್ತ ಧಾರೆಗಳಲ್ಲಿ ಉತ್ಪಾದನಾ ಕ್ಷೇತ್ರವನ್ನು ಮೊದಲನೆಯದಾಗಿ ಪಟ್ಟಿ ಮಾಡಿದ್ದಾರೆ. ನಂತರ ಕೃಷಿ, ತಂತ್ರಜ್ಞಾನ, ಮೂಲಸೌಕರ್ಯ, ರಕ್ಷಣೆ, ಹಸಿರು ಮತ್ತು ನೀಲಿ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪ್ರಭಾವವನ್ನು ಒಳಗೊಂಡಿವೆ.

ಉತ್ಪಾದನಾ ಕ್ಷೇತ್ರಕ್ಕೆ ಯಾಕೆ ಮೊದಲ ಆದ್ಯತೆ?

ಜಾಗತಿಕ ಮಾರುಕಟ್ಟೆಯಲ್ಲಿ ಭಾರತವನ್ನು ಆರ್ಥಿಕ ಮಹಾಶಕ್ತಿಯನ್ನಾಗಿ ಮಾಡಲು ಮತ್ತು ದೇಶದ ಕೋಟ್ಯಂತರ ಯುವಕರಿಗೆ ಉದ್ಯೋಗ ಸೃಷ್ಟಿಸಲು ಉತ್ಪಾದನಾ ಕ್ಷೇತ್ರವು ಅತ್ಯಂತ ಪ್ರಮುಖ ಆಧಾರಸ್ತಂಭವಾಗಿರುವುದರಿಂದ ಪ್ರಧಾನಿ ಮೋದಿ ಅವರು ಇದಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ವೆಚ್ಚ ಕಡಿತ, ಜಾಗತಿಕ ಗುಣಮಟ್ಟ, ಬೃಹತ್ ಪ್ರಮಾಣದ ಉತ್ಪಾದನೆ, ಉತ್ಪನ್ನದ ವಿನ್ಯಾಸ ಮತ್ತು ಆಕರ್ಷಕ ಪ್ಯಾಕೇಜಿಂಗ್‌ನಂತಹ ನಿಖರವಾದ ಆಂಶಗಳ ಕುರಿತು ಅವರು ವಿವರಿಸಿದರು.