Narendra Modi: ಗೋವಾದಲ್ಲಿ ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ
World’s Tallest Statue of Lord Ram: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಗೋವಾದ ಪಣಜಿಯಲ್ಲಿ ವಿಶ್ವದ ಅತಿ ಎತ್ತರದ ಶ್ರೀ ರಾಮನ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಈ ಮಹತ್ವಪೂರ್ಣ ಕಾರ್ಯಕ್ರಮವು ಜ್ಞಾನ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವವನ್ನು ಹೊಂದಿದೆ.
ರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ (ಸಂಗ್ರಹ ಚಿತ್ರ) -
ಪಣಜಿ: ಗೋವಾದ (Goa) ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಶ್ರೀರಾಮನ (Sri Ram) 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಾರ್ಧ ಪಂಚಶತಮಾನೋತ್ಸವದ ಸಂದರ್ಭದಲ್ಲಿ ಅನಾವರಣಗೊಳಿಸಿದರು. ಇದನ್ನು ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ರಚಿಸಿದ್ದಾರೆ. ಇದನ್ನು ವಿಶ್ವದ ಅತಿ ಎತ್ತರದ ಶ್ರೀರಾಮನ ಪ್ರತಿಮೆ ಎಂದು ಬಣ್ಣಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಠದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅವರು ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಗೋವಾ ರಾಜ್ಯಪಾಲ ಅಶೋಕ್ ಗಜಪತಿ ರಾಜು, ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀಪಾದ ನಾಯಕ್ ಮತ್ತು ರಾಜ್ಯ ಸಚಿವ ಸಂಪುಟ ಸಮಾರಂಭದಲ್ಲಿ ಭಾಗವಹಿಸಿತ್ತು.
ಅಂದಹಾಗೆ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠವು ಮೊದಲ ಗೌಡ ಸಾರಸ್ವತ ಬ್ರಾಹ್ಮಣ ವೈಷ್ಣವ ಮಠವಾಗಿದೆ. ಇದು 13ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಕ್ರಮವನ್ನು ಅನುಸರಿಸುತ್ತದೆ. ಈ ಮಠವು ಕುಶಾವತಿ ನದಿಯ ದಡದಲ್ಲಿರುವ ದಕ್ಷಿಣ ಗೋವಾದ ಸಣ್ಣ ಪಟ್ಟಣವಾದ ಪರ್ತಗಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ವಿಡಿಯೊ ವೀಕ್ಷಿಸಿ:
#WATCH | Goa | Prime Minister Narendra Modi unveiled a 77-foot statue of Lord Ram made up of bronze at Shree Samsthan Gokarn Partagali Jeevottam Math.
— ANI (@ANI) November 28, 2025
The Prime Minister is visiting the math on the occasion of ‘Sardha Panchashatamanotsava’, the 550th-year celebration of the… pic.twitter.com/LgSQEvASbc
ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಗೋವಾ ಲೋಕೋಪಯೋಗಿ ಇಲಾಖೆ ಸಚಿವ ದಿಗಂಬರ್ ಕಾಮತ್, ಆಧ್ಯಾತ್ಮಿಕ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿದ್ದ ಮಠವನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ. ಮಠ ಸಂಪ್ರದಾಯದ 550 ವರ್ಷಗಳನ್ನು ಗುರುತಿಸಲು ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ಹಲವಾರು ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ ಎಂದರು.
ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಠವು ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಹೇಳಿದರು. ಒಂದು ಸಂಸ್ಥೆಯು ಸತ್ಯ ಮತ್ತು ಸೇವೆಯ ಮೇಲೆ ನಿರ್ಮಿಸಲ್ಪಟ್ಟಾಗ, ಅದು ಕಾಲದ ಬದಲಾವಣೆಗಳೊಂದಿಗೆ ಅಲುಗಾಡುವುದಿಲ್ಲ; ಬದಲಾಗಿ, ಅದು ಸಮಾಜಕ್ಕೆ ದೃಢವಾಗಿ ನಿಲ್ಲುವ ಶಕ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.
Mahatma Gandhi Statue: ಇವರು ಗಾಂಧೀಜಿಯಂತೆ! ವಿರೂಪ ಪ್ರತಿಮೆ ತಯಾರಿಸಿ ರಾಷ್ಟ್ರಪಿತನಿಗೆ ಅಗೌರವ
ಸುಸಜ್ಜಿತ ವಸ್ತುಸಂಗ್ರಹಾಲಯ ಮತ್ತು ಆಧುನಿಕ ತಂತ್ರಜ್ಞಾನ-ಸಜ್ಜಿತ ಸೌಲಭ್ಯಗಳ ಮೂಲಕ, ಈ ಮಠವು ತನ್ನ ಸಂಪ್ರದಾಯವನ್ನು ಸಂರಕ್ಷಿಸುತ್ತಿದೆ. ಅದೇ ರೀತಿ, ಕಳೆದ 550 ದಿನಗಳಲ್ಲಿ, ದೇಶಾದ್ಯಂತ ಲಕ್ಷಾಂತರ ಭಕ್ತರು ಭಾಗವಹಿಸುವ ಶ್ರೀ ರಾಮ ನಾಮ ಜಪ ಯಜ್ಞ ಮತ್ತು ಸಂಬಂಧಿತ ರಾಮ ರಥಯಾತ್ರೆಯು ನಮ್ಮ ಸಮಾಜದಲ್ಲಿ ಸಾಮೂಹಿಕ ಭಕ್ತಿ ಮತ್ತು ಶಿಸ್ತಿನ ಸಂಕೇತವಾಗಿದೆ ಎಂದು ಅವರು ಹೇಳಿದರು.
ಶತಮಾನಗಳ ಹಿಂದೆ, ಈ ಪ್ರದೇಶವು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದಾಗ, ಜನರು ತಮ್ಮ ಮನೆಗಳು ಮತ್ತು ಕುಟುಂಬಗಳನ್ನು ತೊರೆದು ಹೊಸ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಈ ವೇಳೆ ಮಠವು ಸಮುದಾಯವನ್ನು ಬೆಂಬಲಿಸಿತು. ಹೊಸ ಸ್ಥಳಗಳಲ್ಲಿ ದೇವಾಲಯಗಳು ಮತ್ತು ಆಶ್ರಯಗಳನ್ನು ಸ್ಥಾಪಿಸಿತು. ಇದು ಧರ್ಮವನ್ನು ಮಾತ್ರವಲ್ಲದೆ ಮಾನವೀಯತೆ ಮತ್ತು ಸಂಸ್ಕೃತಿಯನ್ನು ಸಹ ರಕ್ಷಿಸಿತು. ಕಾಲಾನಂತರದಲ್ಲಿ, ಮಠದ ಸೇವೆ ವಿಸ್ತರಿಸಿದೆ. ಇಂದು, ಶಿಕ್ಷಣದಿಂದ ಹಾಸ್ಟೆಲ್‌ಗಳವರೆಗೆ, ವೃದ್ಧರ ಆರೈಕೆಯಿಂದ ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.