ಮಸೀದಿಯ ಒಂದು ಭಾಗ ತೆರವಿಗೆ ವಿರೋಧ: ಉಜ್ಜಯಿನಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು
Protesters Clash with Police: ರಸ್ತೆ ಕಾಮಗಾರಿಯ ಭಾಗವಾಗಿ ಮಧ್ಯ ಪ್ರದೇಶದ ಉಜ್ಜಿಯಿನಿಯಲ್ಲಿ ಮಸೀದಿಯ ಒಂದು ಭಾಗವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪ್ರತಿಭಟನೆಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಿವೆ. ಕೆಲವರು ಮಸೀದಿಯ ಆ ಭಾಗವನ್ನು ತೆರವುಗೊಳಿಸುವುದನ್ನು ವಿರೋಧಿಸಿದ್ದು, ಸಂಘರ್ಷ ಭುಗಿಲೆದ್ದಿದೆ.
ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಭಾರಿ ಪ್ರತಿಭಟನೆ -
ಭೋಪಾಲ್, ಸೆ. 28: ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ವಿಸ್ತರಣೆ ಯೋಜನೆಯ ಭಾಗವಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ (Protest) ನಡೆಸಲಾಗುತ್ತಿದೆ. ಪೊಲೀಸರೊಂದಿಗೆ ಪ್ರತಿಭಟನಾಕಾರರು ಘರ್ಷಣೆ ನಡೆದಿದೆ. ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರಿಗೆ ಪೊಲೀಸರು ಅಶ್ರುವಾಯು ದಾಳಿ ನಡೆಸಿದರು. ಭಾರಿ ಪ್ರತಿಭಟನೆಗಳು ಮತ್ತು ಕಲ್ಲು ತೂರಾಟದ ನಂತರ ಶಾಹಿ ಮಸೀದಿ ಸಂಕೀರ್ಣದ ಸುತ್ತಲೂ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿಯ ಭಾಗವಾಗಿ ಮಸೀದಿಯ ಒಂದು ಭಾಗವನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪ್ರತಿಭಟನೆಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗಿವೆ. ಕೆಲವರು ಮಸೀದಿಯ ಆ ಭಾಗವನ್ನು ತೆರವುಗೊಳಿಸುವುದನ್ನು ವಿರೋಧಿಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಮಧ್ಯ ಪ್ರದೇಶ ಹೈಕೋರ್ಟ್ ಸೋಮವಾರ (ಸೆಪ್ಟೆಂಬರ್ 28) ವಿಚಾರಣೆ ನಡೆಸಲಿದೆ.
ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಪ್ರತಿಭಟನೆ:
#BREAKING
— Nabila Jamal (@nabilajamal_) September 28, 2026
A portion of a nearly 600-year-old mosque is all set to be demolished in Madhya Pradesh’s Ujjain, triggering huge protests
Authorities had planned to demolish part of the Shahi Masjid for a road-widening project. Massive crowds gathered through the night, attempting… pic.twitter.com/DDhy5NUxrU
ಸ್ಥಳದಲ್ಲಿ ಪ್ರತಿಭಟನಾಕಾರರು ಕಿರಿದಾದ ಗಲ್ಲಿಗಳ ಮೂಲಕ ಮುಂದೆ ಸಾಗಲು ಪ್ರಯತ್ನಿಸುತ್ತಿರುವುದು ಕಂಡುಬಂತು. ಪ್ರತಿಭಟನೆಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತಿದ್ದಾಗ ಕೆಲವು ಮಹಿಳೆಯರನ್ನು ಮುಂದೆ ತಳ್ಳಲಾಯಿತು. ಅದೇ ವೇಳೆ, ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ಎಸೆಯಲಾಯಿತು. ಪೊಲೀಸರು ಸ್ಥಳದಲ್ಲಿ ಬಿಗಿ ಭದ್ರತೆ ಮುಂದುವರಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಗಿತ್ತು.
ಇಲ್ಲಿದೆ ವಿಡಿಯೊ:
#WATCH | Madhya Pradesh: Police use tear gas shells to control a crowd in Ujjain as stone pelting occurred when a large group of people clashed with them at the spot where a portion of Shahi Masjid is planned to be demolished for a road-widening project. Rapid Action Force (RAF)… pic.twitter.com/zRLlSzgXoj
— ANI (@ANI) September 28, 2026
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಮಸೀದಿ ಸಂಕೀರ್ಣವನ್ನು ಧ್ವಂಸಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಭಾವನೆಗಳನ್ನು ರಾಜ್ಯ ಸರ್ಕಾರ ಗೌರವಿಸಬೇಕು ಎಂದು ಆಗ್ರಹಿಸಿದರು. “ರಸ್ತೆ ವಿಸ್ತರಣೆ ನೆಪದಲ್ಲಿ ಉಜ್ಜಯಿನಿಯ ಶಾಹಿ ಮಸೀದಿಯನ್ನು ಧ್ವಂಸಗೊಳಿಸಲು ಆಡಳಿತ ಕೈಗೊಳ್ಳುತ್ತಿರುವ ಕ್ರಮಗಳು ಇನ್ನಷ್ಟು ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯಿಂದ ಕೂಡಿರಬೇಕು. ಅಭಿವೃದ್ಧಿಯ ಹೆಸರಿನಲ್ಲಿ, ಕೇವಲ ರಸ್ತೆ ವಿಸ್ತರಣೆಗೊಳಿಸಲು 600 ವರ್ಷಗಳಷ್ಟು ಹಳೆಯ ಐತಿಹಾಸಿಕ ಪರಂಪರೆಯ ತಾಣವನ್ನು ಧ್ವಂಸಗೊಳಿಸುವುದು ದ್ವೇಷದ ಪರಾಕಾಷ್ಠೆ” ಎಂದು ತಿಳಿಸಿದರು.
ಪಂಜಾಬ್ ಕಾಲೇಜ್‌ನಲ್ಲಿ ಭುಗಿಲೆದ್ದ ವಿದ್ಯಾರ್ಥಿಗಳ ಪ್ರತಿಭಟನೆ; ತರಗತಿಗಳು ರದ್ದು
“ಈ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಾಗ, ಮಸೀದಿಯನ್ನು ಪದೇ ಪದೆ ಸುತ್ತುವರಿಯುವ ಮೂಲಕ ಆಡಳಿತ ಯಾವ ಸಂದೇಶವನ್ನು ನೀಡಲು ಬಯಸುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಉಜ್ಜಯಿನಿಯ ಸಾವಿರಾರು ಯುವಕರು ಈ ವಿಷಯದ ಬಗ್ಗೆ ನಿರಂತರವಾಗಿ ತಮ್ಮ ಧ್ವನಿ ಎತ್ತುತ್ತಿದ್ದಾರೆ” ಎಂದು ಅವರು ಹೇಳಿದರು.
“ಆಡಳಿತವು ಸಾರ್ವಜನಿಕರ ಭಾವನೆಗಳನ್ನು ಗೌರವಿಸಬೇಕು ಮತ್ತು ರಸ್ತೆ ವಿಸ್ತಾರ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಮಸೀದಿಯ ಇನ್ನೊಂದು ಭಾಗದಿಂದ ಪಡೆದುಕೊಳ್ಳಬೇಕು ಎಂಬುದು ನನ್ನ ಮನವಿ. ಇಂತಹ ಐತಿಹಾಸಿಕ ಮಹತ್ವ ಹೊಂದಿರುವ ಪರಂಪರೆಯ ತಾಣವನ್ನು ಧ್ವಂಸಗೊಳಿಸುವುದನ್ನು ಯಾವುದೇ ಸಂದರ್ಭದಲ್ಲೂ ಸಾಮಾನ್ಯ ಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಸಂಸದ ಇಮ್ರಾನ್ ಪ್ರತಾಪ್‌ಗಢಿ ಹೇಳಿದರು.