ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಜ್ಯೋತಿಕಾ ಜೊತೆಯೇ ಮದುವೆ ಆಗಬೇಕೆಂದು ಸೂರ್ಯ 4 ವರ್ಷ ಕಾದಿದ್ದ..ʼ; ತಂದೆ ಶಿವಕುಮಾರ್‌ ಹೇಳಿದ ಬಿಚ್ಚಿಟ್ಟ ರಹಸ್ಯವಿದು

Suriya Jyothika Marriage: ನಟ ಸೂರ್ಯ ಮತ್ತು ಜ್ಯೋತಿಕಾ ಕುರಿತು ಹಿರಿಯ ನಟ ಶಿವಕುಮಾರ್ ಅಚ್ಚರಿಯ ವಿಚಾರ ತಿಳಿಸಿದ್ದಾರೆ. ಪ್ರೀತಿಸಿದ ಹುಡುಗಿಯನ್ನೇ ವರಿಸಲು ಸೂರ್ಯ ನಾಲ್ಕು ವರ್ಷ ಕಾದಿದ್ದರು. ಮದುವೆ ಬಳಿಕ ಜ್ಯೋತಿಕಾ ಮುಂಬೈಗೆ ಹೋಗಿ ಸೆಟಲ್‌ ಆಗದೇ 18 ವರ್ಷ ಅತ್ತೆ-ಮಾವನ ಜೊತೆಯೇ ಸಂಸಾರ ನಿಭಾಯಿಸಿದರು. ಇಬ್ಬರು ಮಕ್ಕಳಿಗೆ ಜನ್ಮ ನೀಡಿ ಆದರ್ಶ ಸೊಸೆ ಎನಿಸಿಕೊಂಡರು ಎಂದು ಶಿವಕುಮಾರ್ ಹೇಳಿದ್ದಾರೆ.

ಜ್ಯೋತಿಕಾಗಾಗಿ 4 ವರ್ಷ ಕಾದಿದ್ದ ಸೂರ್ಯ; ರಹಸ್ಯ ಬಿಚ್ಚಿಟ್ಟ ತಂದೆ ಶಿವಕುಮಾರ್

-

Avinash GR
Avinash GR Sep 28, 2026 3:52 PM

ತಮಿಳಿನ ಹಿರಿಯ ನಟ ಶಿವಕುಮಾರ್ ತಮ್ಮ ಪುತ್ರ ಸೂರ್ಯ - ಜ್ಯೋತಿಕಾ ಅವರ ದಾಂಪತ್ಯ ಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಮದುವೆಗೂ ಮುನ್ನವೇ ಜ್ಯೋತಿಕಾ ಅವರನ್ನು ವರಿಸುವ ವಿಚಾರದಲ್ಲಿ ಸೂರ್ಯ ಎಷ್ಟು ದೃಢವಾಗಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಈ ದಂಪತಿಯ 20 ವರ್ಷಗಳ ವೈವಾಹಿಕ ಜೀವನದ ಕುರಿತು ಮಾತನಾಡಿದ ಶಿವಕುಮಾರ್, "ತಾನು ನಿಜವಾಗಿ ಪ್ರೀತಿಸುವ ಹುಡುಗಿಯನ್ನು ಮಾತ್ರ ಮದುವೆಯಾಗುವುದಾಗಿ ಸೂರ್ಯ ಅಂದೇ ಸ್ಪಷ್ಟಪಡಿಸಿದ್ದರು" ಎಂದಿದ್ದಾರೆ.

ಕಂಡ ಕಂಡ ಹುಡುಗಿಯರನ್ನೆಲ್ಲ ಪ್ರೀತಿಸಲು ಸಾಧ್ಯವಿಲ್ಲ

ಸೂರ್ಯ ಅವರ ತಾಯಿ ಒಮ್ಮೆ "ನೀನೇಕೆ ಯಾರನ್ನೂ ಪ್ರೀತಿಸುತ್ತಿಲ್ಲ?" ಎಂದು ಕೇಳಿದ್ದ ಘಟನೆಯನ್ನು ಶಿವಕುಮಾರ್ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಸೂರ್ಯ, "ಕಂಡ ಕಂಡ ಹುಡುಗಿಯರನ್ನೆಲ್ಲ ಪ್ರೀತಿಸಲು ಸಾಧ್ಯವಿಲ್ಲ" ಎಂದು ಸರಳವಾಗಿ ಉತ್ತರಿಸಿದ್ದರಂತೆ. ನಂತರ ಅವರು ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ, ಅವರನ್ನೇ ಮದುವೆಯಾಗುವ ನಿರ್ಧಾರಕ್ಕೆ ಬದ್ಧರಾಗಿ ಉಳಿದರು.

ಶಿವಕುಮಾರ್‌ ಹೇಳಿದ್ದೇನು?

"ಪ್ರೀತಿ ಎಲ್ಲರಿಗೂ ಒಲಿಯುವುದಿಲ್ಲ. ಸೂರ್ಯನ ತಾಯಿ ಒಮ್ಮೆ 'ನೀನೇಕೆ ಯಾರನ್ನೂ ಪ್ರೀತಿಸಿಲ್ಲ?' ಎಂದು ಕೇಳಿದಾಗ, 'ಕಂಡವರನ್ನೆಲ್ಲ ಪ್ರೀತಿಸಲು ಆಗಲ್ಲ' ಎಂದಿದ್ದ. ಆಮೇಲೆ ಆತ ಬಾಂಬೆಯ ಹುಡುಗಿಯನ್ನು (ಜ್ಯೋತಿಕಾ) ಪ್ರೀತಿಸಿದ. ಮದುವೆಯಾದರೆ ಆಕೆಯನ್ನೇ ಮದುವೆಯಾಗುವುದು ಎಂದು ಪಟ್ಟುಹಿಡಿದು ಬರೋಬ್ಬರಿ 4 ವರ್ಷಗಳ ಕಾಲ ಕಾದಿದ್ದ. ಕೊನೆಗೆ ಇಬ್ಬರೂ ಮದುವೆಯಾದರು" ಎಂದು ಖಾಸಗಿ ಕಾರ್ಯಕ್ರಮದಲ್ಲಿ ಶಿವಕುಮಾರ್‌ ಹಂಚಿಕೊಂಡಿದ್ದಾರೆ.

ಹೆತ್ತವರಿಂದ ಮಕ್ಕಳನ್ನು ದೂರ ಮಾಡುವವರು ಇದ್ದಾರೆ

"ಮದುವೆಯ ನಂತರ ಆಕೆ ಸೂರ್ಯನನ್ನು ಬಾಂಬೆಗೆ ಕರೆದೊಯ್ದು ಅಲ್ಲಿಯೇ ಸೆಟಲ್ ಆಗಬಹುದಿತ್ತು, ನಾನೇನೂ ಹೇಳಲು ಸಾಧ್ಯವಿರಲಿಲ್ಲ. ಆದರೆ ಜ್ಯೋತಿಕಾ 18 ವರ್ಷಗಳ ಕಾಲ ಇಲ್ಲೇ ನಮ್ಮ ಜೊತೆಗಿದ್ದಳು. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನಟಿಯರು ಮದುವೆಯಾದ ತಕ್ಷಣ ಮಕ್ಕಳನ್ನು ಮಾಡಿಕೊಳ್ಳಲು ಹಿಂದೇಟು ಹಾಕುತ್ತಾರೆ, ಅಷ್ಟೇ ಅಲ್ಲದೆ ಗಂಡಂದಿರನ್ನು ಪೋಷಕರಿಂದ ಬೇರೆ ಮಾಡುವವರೂ ಇದ್ದಾರೆ. ಆದರೆ ಜ್ಯೋತಿಕಾ ಮದುವೆಯಾಗಿ ನಮ್ಮೊಂದಿಗೆ ವಾಸವಾಗಿದ್ದಾಗಲೇ ಇಬ್ಬರು ಮಕ್ಕಳಿಗೆ ಜನ್ಮ ನೀಡಿದಳು" ಎಂದು ಶಿವಕುಮಾರ್‌ ಹೇಳಿದ್ದಾರೆ.

Suriya: 'ಇಸೈಜ್ಞಾನಿ' ಇಳಯರಾಜಾಗೆ ಬಹಿರಂಗವಾಗಿ ಕ್ಷಮೆ ಕೇಳಿದ ʻಕರುಪ್ಪುʼ ಟೀಮ್;‌ ಅಷ್ಟಕ್ಕೂ ಚಿತ್ರತಂಡ ಮಾಡಿದ ಎಡವಟ್ಟೇನು?

ವಿದೇಶದಲ್ಲಿದ್ದಾರೆ ಸೂರ್ಯ ಮಕ್ಕಳು

"ಜ್ಯೋತಿಕಾ ಮತ್ತು ಸೂರ್ಯ ದಂಪತಿಯ ಮಕ್ಕಳಾದ ದಿಯಾ ಮತ್ತು ದೇವ್ ಈಗ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡು ದಶಕಗಳ ದಾಂಪತ್ಯ ಜೀವನವನ್ನು ಸೂರ್ಯ ಮತ್ತು ಜ್ಯೋತಿಕಾ ಯಶಸ್ವಿಯಾಗಿ ಮುನ್ನಡೆಸುತ್ತಿರುವುದನ್ನು ಕಂಡು ತಮಗೆ ಹೆಮ್ಮೆ ಎನಿಸುತ್ತದೆ" ಎಂದು ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸೂರ್ಯ ಮತ್ತು ಜ್ಯೋತಿಕಾ ಇತ್ತೀಚೆಗಷ್ಟೇ ತಮ್ಮ 20ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ vow renewal ceremony ಹಮ್ಮಿಕೊಂಡಿದ್ದರು. ದಂಪತಿ ತಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರೊಂದಿಗೆ ಈ ಸಂಭ್ರಮವನ್ನು ಆಚರಿಸಿಕೊಂಡಿದ್ದರು.

2006ರಲ್ಲಿ ಮದುವೆಯಾದ ಜ್ಯೋತಿಕಾ - ಸೂರ್ಯ

1999ರಲ್ಲಿ ವಸಂತ್ ನಿರ್ದೇಶನದ ‘ಪೂವೆಲ್ಲಾಂ ಕೇಟ್ಟುಪ್ಪಾರ್’ ಚಿತ್ರದಲ್ಲಿ ಸೂರ್ಯ ಮತ್ತು ಜ್ಯೋತಿಕಾ ಮೊದಲು ಒಟ್ಟಿಗೆ ನಟಿಸಿದರು. ಆನಂತರ ‘ಉಯಿರಿಲೇ ಕಲಂದದು’, ‘ಕಾಖ ಕಾಖ’, ‘ಪೇರಳಗನ್’, ‘ಮಾಯಾವಿ’ ಮತ್ತು ‘ಸಿಲ್ಲುನು ಒರು ಕಾದಲ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡರು. ಈ ಜೋಡಿ 2006ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.