ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MahaKumbh 2025: ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಅಂಬಾನಿ ಕುಟುಂಬದ ಸೊಸೆ ಹೇಳಿದ್ದೆನು?

ಬ್ಯುಸಿನೆಸ್ ಟೈಕೂನ್ ಮುಖೇಶ್ ಅಂಬಾನಿ ಅವರ ಕುಟುಂಬ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ನವ ವಿವಾಹಿತ ಜೋಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪುಣ್ಯಸ್ನಾನದ ಬಳಿಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ...

ಅಂಬಾನಿ ಕುಟುಂಬದ ನವ ದಂಪತಿಯಿಂದ ಪುಣ್ಯ ಸ್ನಾನ

ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್

Profile Sushmitha Jain Feb 14, 2025 9:28 AM

ಪ್ರಯಾಗ್ ರಾಜ್: ಅಂಬಾನಿ ಕುಟುಂಬ (Ambani Family) ಮಹಾಕುಂಭ ಮೇಳದಲ್ಲಿ (Mahakumbh Mela) ಪುಣ್ಯ ಸ್ನಾನ (Holy Dip) ಮಾಡಿರುವುದು ದೊಡ್ಡ ಸುದ್ದಿಯಾಗಿತ್ತು. ಈ ಕುಟುಂಬದ ಹೊಸ ಸದಸ್ಯೆ, ಅನಂತ್ ಅಂಬಾನಿಯ (Anant Ambani) ಪತ್ನಿ ರಾಧಿಕಾ ಮರ್ಚೆಂಟ್ (Radhika Merchant) ತ್ರಿವೇಣಿ ಸಂಗಮ್ ನಲ್ಲಿ (Triveni Sangam) ಪುಣ್ಯ ಸ್ನಾನ ಮಾಡಿದ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಹಂಚಿಕೊಂಡಿದ್ದಾರೆ. ನವ ದಂಪತಿ ತಮ್ಮ ಪುಣ್ಯ ಸ್ನಾನದ ಬಗ್ಗೆ ಕಮೆಂಟ್ ಮಾಡಿದ್ದು, ಅನಂತ್ ಅಂಬಾನಿ ‘ತುಂಬಾ ಚೆನ್ನಾಗಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅವರ ಪತ್ನಿ ರಾಧಿಕಾ ಮರ್ಚೆಂಟ್ ‘ಇದೊಂದು ಮ್ಯಾಜಿಕಲ್ ಅನುಭವ’ ಎಂದು ಹೇಳಿಕೊಂಡಿದ್ದಾರೆ. ಈ ನವದಂಪತಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿರುವ ವಿಡಿಯೋ ಒಂದನ್ನು ಪಿಟಿಐ (PTI) ಸುದ್ದಿ ಸಂಸ್ಥೆ ಹಂಚಿಕೊಂಡಿದೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದ ರಾಧಿಕಾ ಅಂಬಾನಿ ತಮ್ಮ ಪುಣ್ಯ ಸ್ನಾನದ ಅನುಭವವನ್ನು ಹಂಚಿಕೊಂಡಿದ್ದು, ‘ಇದೊಂದು ಮ್ಯಾಜಿಕಲ್ ಅನುಭವ. ಧನ್ಯವಾದ’ ಎಂದು ನಗುನಗುತ್ತಾ ಹೇಳಿದ್ದಾರೆ. ಅನಂತ್ ಅಂಬಾನಿ ಪ್ರತಿಕ್ರಿಯಿಸಿ, ‘ಪುಣ್ಯ ಸ್ನಾನವನ್ನು ಮಾಡಿದ ಬಳಿಕ ನನಗೆ ಅದ್ಭುತ ಅನುಭವವಾಗುತ್ತಿದೆ. ಎಲ್ಲರಿಗೂ ದೇವರು ಶಾಂತಿ ನೆಮ್ಮದಿಯನ್ನು ನೀಡಿ ಹರಸಲಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Anand Mahindra: ಟ್ರಾಫಿಕ್‌ನಿಂದ ಜಾಮ್‌ನಿಂದ ಬೇಸತ್ತು ಬೆಂಗಳೂರಿಗೆ ಗುಡ್‌ಬೈ ಹೇಳಿದ ಉದ್ಯಮಿ ಆನಂದ್ ಮಹೀಂದ್ರ



ಬ್ಯುಸಿನೆಸ್ ಟೈಕೂನ್ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿ ಮಗನಾಗಿರುವ ಅನಂತ್ ಅಂಬಾನಿ ಕಳೆದ ವರ್ಷ ಜುಲೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಿದ್ದರು. ಮುಖೇಶ್ ಅಂಬಾನಿ ಅವರು ತಮ್ಮ ತಾಯಿ ಕೊಕಿಲಾ ಬೆನ್, ಮಕ್ಕಳಾದ ಆಕಾಶ್ ಮತ್ತು ಅನಂತ್ ಹಾಗೂ ಪುತ್ರಿಯರಾದ ಶ್ಲೋಕ ಮತ್ತು ರಾಧಿಕಾ, ಮೊಮ್ಮಕ್ಕಳಾಗಿರುವ, ಆಕಾಶ್ ಹಾಗೂ ಶ್ಲೋಕಾ ದಂಪತಿಯ ಮಕ್ಕಳಾದ ಪೃಥ್ವಿ ಮತ್ತು ವೇದ ಹಾಗೂ ಕುಟುಂಬ ಸದಸ್ಯರ ಜೊತೆ ಪ್ರಯಾಗ್ ರಾಜ್ ಗೆ ಬೇಟಿ ನೀಡಿ ಇಲ್ಲಿನ ಗಂಗಾ-ಯುಮುನ-ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದ್ದರು.

ಅಂಬಾನಿ ಕುಟುಂಬ ಸದಸ್ಯರಾದ, ಮುಖೇಶ್ ಅವರ ಸಹೋದರಿಯರಾದ ದೀಪ್ತಿ ಸಲ್ಗಾವ್ ಕರ್ ಹಾಗೂ ನೀನಾ ಕೊಠಾರಿ. ಅತ್ತೆ ಪೂರ್ಣಿಮಾ ಬೆನ್ ದಲಾಲ್ ಹಾಗೂ ನಾದಿನಿ ಮಮತಾ ಬೆನದ ದಲಾಲ್ ಸಹ ಅಂಬಾನಿ ಕುಟುಂಬದ ಜೊತೆ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನವನ್ನು ಕೈಗೊಂಡಿದ್ದಾರೆ.

ನಿರಂಜನ ಅಖಾಡದ ಸ್ವಾಮಿ ಕೈಲಾಶನಂದ ಗಿರಿ ಮಹಾರಾಜ್ ಅವರು ಅಂಬಾನಿ ಕುಟುಂಬಸ್ಥರೊಂದಿಗೆ ಗಂಗಾ ಪೂಜೆ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಬಳಿಕ ಅಂಬಾನಿ ಕುಟುಂಬಸ್ಥರು ನಿಕೇತನ ಆಶ್ರಮದ ಚಿದಾನಂದ ಸರಸ್ವತಿ ಮಹಾರಾಜ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಪುಣ್ಯಸ್ನಾನದ ಬಳಿಕ ಅಂಬಾನಿ ಕುಟುಂಬ ಸಿಹಿ ಹಂಚಿ, ಲೈಫ್ ಜಾಕೆಟ್ ವಿತರಿಸಿದರು.